ಬೆಕ್ಕಿನ ಮರಿ!
ಬೆಕ್ಕಿನ ಮರಿ! * ಅವಳನ್ನೇ ನೋಡುತ್ತಿದ್ದೆ. ಅವಳ ಕೂದಲು…, ನನ್ನ ಇಮೋಷನ್ ಅದು! ನನ್ನ ಮುಖವನ್ನು ನೋಡಲಾಗದ ನಾಚಿಕೆಯೋ, ಹೆದರಿಕೆಯೋ, ಗೌರವವೋ…, ಯಾವ ಭಾವ ಅದು? ನನ್ನ ನೋಟವನ್ನು ಎದುರಿಸಲಾಗದೆ ಬೆಕ್ಕಿನ ಮರಿಯಂತೆ ಹಿಂದಕ್ಕೆ ಸರಿದಳು! ನಾನು ತಿರುಗುವುದಕ್ಕೆ ಅನುಸಾರವಾಗಿ ನನ್ನ ಬೆನ್ನ ಹಿಂದಕ್ಕೆ ಸರಿಯುತ್ತಿದ್ದಳು…! “ಬಾ ಈಚೆ!” ಎಂದು ಹೇಳಿ ಅವಳನ್ನು ಹಿಡಿದು ಮುಂದಕ್ಕೆ ಎಳೆದೆ. ಇಲ್ಲ…, ತಲೆ ಎತ್ತುತ್ತಲೇ ಇಲ್ಲ! ಬೊಗಸೆಯಲ್ಲಿ ಮುಖವನ್ನು ತೆಗೆದುಕೊಂಡು ನೋಡಿದೆ. ಆ ಚಂಚಲತೆ- ಅಧೀರತೆ…, ಕೊನೆಗೂ ನೋಡಿದಳು! ನೋಡಬೇಡ ಅನ್ನುವಂತೆ ಕಣ್ಣುಗಳಿಗೆ ಒಂದೊಂದು ಮುತ್ತು ಕೊಟ್ಟೆ! ಪಬ್ಲಿಕ್ ಆಗಿ!! ಇಬ್ಬರಿಗೂ ಅದರ ಅರಿವೇ ಇರಲಿಲ್ಲ! “ಹೋ…!” ಅನ್ನುವ ಸುತ್ತಲಿನವರ ಗೇಲಿ ನಮ್ಮನ್ನು ಎಚ್ಚರಿಸಿತು! ಮತ್ತಷ್ಟು ಮುದುಡಿ ಹಿಂದಕ್ಕೆ ಸರಿದಳು. ನನಗೋ ಅವಳ ಮುಖವನ್ನು ನೋಡುತ್ತಲೇ ಇರಬೇಕೆನ್ನುವ ಆಸೆ! ಬೆಕ್ಕಿನ ಮರಿ! ಬೀದಿಬದಿಯ ಟೀ ಅಂಗಡಿ. ಆರ್ಡರ್ ಕೊಟ್ಟಾಗಿದೆ. ಕುದಿಸುತ್ತಿದ್ದಾರೆ. ಹೊರಡುವ ಹಾಗಿಲ್ಲ. ಅವಳೋ ಮುಂದಕ್ಕೆ ಬರುತ್ತಿಲ್ಲ! ನನ್ನ ಅವಸ್ಥೆಯನ್ನು ಏನೆಂದು ಹೇಳುವುದು? “ಸರಿ…, ಬಾ…, ನಾನೇನೂ ಮಾಡುವುದಿಲ್ಲ!” ಎಂದೆ. ಹಿಂಜರಿಕೆಯಿಂದ ನಿಧಾನಕ್ಕೆ ಮುಂದಕ್ಕೆ ಬಂದಳು. ನೀಳವಾದ ಕೂದಲು…, ಚಂಚಲ ಕಣ್ಣುಗಳು, ಮೂಗಿನ ಕೆಳಗೆ ಎದ್ದುಕಾಣುವ ರೋಮವಿರುವ ತುಟಿ! ಮನಸ್ಸು! ಎಷ್ಟು ಕಷ್ಟ! “ಟೀ!” ಎಂದ ಅಂಗಡಿಯವ. ಅವಳಿಗೊಂದು ಕೊಟ್ಟು ನಾನೊಂದು ತೆಗೆದುಕೊಂಡು ...