Posts

Showing posts from February, 2026

ಲಕ್ಷ್ಮಿಯೆಂದರೇ...!

    * ನಮಸ್ತೇ ..., ನಾನು ಲಕ್ಷ್ಮಿ - ಶಂಭುವಿನ ಲಕ್ಷ್ಮಿ ! ನಿನ್ನೆ ಅವನಿಗೊಂದು ಪತ್ರ ಬರೆದಿದ್ದೆ ! ಅವನ ಹೊರತು ಯಾರಿಗೂ ಅರ್ಥವೇ ಆಗಲಿಲ್ಲವೆನ್ನುವುದು ಅವನ ತಕರಾರು ! ಅದರಲ್ಲೂ ಅವನ ಅಮ್ಮಂದಿರಿಗೆ - ಹೆತ್ತಮ್ಮನಿಗೂ ಹೆತ್ತಮ್ಮನಷ್ಟೇ ಅವ ಪ್ರೀತಿಸುವ ಇನ್ನೊಬ್ಬರು ಅಮ್ಮನಿಗೂ ...! ಸೋ ..., ವಿವರಿಸಿ ಹೇಳಬೇಕಂತೆ - ನಾನೇ ...! ಪತ್ರವನ್ನು ಹಾಗೆಯೇ ಉಳಿಸಿ ವಿವರಣೆ ಬೇಕೆನ್ನಿಸಿದಲ್ಲಿ ಬ್ರಾಕೆಟ್‌ನಲ್ಲಿ ವಿವರಣೆ ಕೊಟ್ಟಿದ್ದೇನೆ ! * * ಹೇಗಿದ್ದೀಯ ಶಂಭು ? ನಿನಗೇನು ? ಪ್ರತಿ ಕ್ಷಣ ಸಂತೋಷದಿಂದ ಇರುವವನು ! ಏನೇ ಘಟನೆಗಳು ನಡೆದರೂ ..., ಮಾನಸಿಕ ಸಂಘರ್ಷಗಳು ಏನೇ ಇದ್ದರೂ - ನೀ ನೆಮ್ಮದಿಯಾಗಿರುತ್ತಿ ! ಆ ಘಟನೆಗಳನ್ನೂ - ಸಂಘರ್ಷವನ್ನೂ ಎಂಜಾಯ್ ಮಾಡುತ್ತಿ ! ಸೈಕಲಾಜಿಕಲ್ ಅನಾಲಿಸಿಸ್ ಮಾಡ್ತಿ ! ಈಗಲೂ ಸಂತೋಷದಿಂದ ಇದ್ದೀಯ ಅನ್ನೋದು ಗೊತ್ತು ...! ಆದರೂ ಕೆಲವೊಂದು ವಿಷಯಗಳನ್ನು ನಿನಗೆ ಹೇಳಬೇಕು ಅನ್ನಿಸುತ್ತಿದೆ ! ಹೇಳಿಬಿಡುತ್ತೇನೆ ! ನಿನ್ನದೇ ಮಜವಾದ ಲೆಕ್ಕಾಚಾರವಿದೆಯಲ್ಲಾ ...? ಆ ಲೆಕ್ಕಾಚಾರದ ಪ್ರಕಾರ ..., ನಿನ್ನ ಪ್ರಿಯಾರಿಟಿ ಬದಲಾಗಬೇಕಾದ ಸಮಯವಾಯಿತು !!! ಎಷ್ಟು ನಗು ಬಂತು ಗೊತ್ತಾ ಆ ಲೆಕ್ಕಾಚಾರ ನೋಡಿ ..., * ಬದುಕುವುದು ಅರವತ್ತು ವರ್ಷವಂತೆ ! ಮೊದಲ ಇಪ್ಪತ್ತು ವರ್ಷ ವಿದ್ಯಾಲಕ್ಷ್ಮಿಯಂತೆ ..., ಎರಡನೇ ಇಪ್ಪತ್ತು ವರ್ಷ ಧೈರ್ಯಲಕ್ಷ್ಮಿಯಂತೆ ..., ಮೂರನೇ ಇಪ್ಪತ್ತು ವರ್ಷ ಧನಲಕ್ಷ್...

ಲಕ್ಷ್ಮಿಯ ಉಪದೇಶ!

    * ಹೇಗಿದ್ದೀಯ ಶಂಭು ? ನಿನಗೇನು ? ಪ್ರತಿ ಕ್ಷಣ ಸಂತೋಷದಿಂದ ಇರುವವನು ! ಈಗಲೂ ಸಂತೋಷದಿಂದ ಇರ್ತೀ ಅಂತ ಗೊತ್ತು ...! ಆದರೂ ಕೆಲವೊಂದು ವಿಷಯಗಳನ್ನು ನಿನಗೆ ಹೇಳಬೇಕು ಅನ್ನಿಸುತ್ತಿದೆ ! ಹೇಳಿಬಿಡುತ್ತೇನೆ ! ಇದು ..., ನೀನು ನೆಮ್ಮದಿಯಾಗಿಲ್ಲ ಅಂತ ಅನ್ನಿಸಿ ಹೇಳುತ್ತಿರುವುದಲ್ಲ ..., ಗೊತ್ತು ..., ಘಟನೆ ಏನೇ ಆದರೂ ..., ಮಾನಸಿಕ ಸಂಘರ್ಷಗಳು ಏನೇ ಇದ್ದರೂ - ನೀ ನೆಮ್ಮದಿಯಾಗಿರುತ್ತಿ ! ಆ ಘಟನೆಗಳನ್ನೂ - ಸಂಘರ್ಷವನ್ನೂ ಎಂಜಾಯ್ ಮಾಡ್ತಿ ! ಸೈಕಲಾಜಿಕಲ್ ಅನಾಲಿಸಿಸ್ ಮಾಡ್ತಿ ! ಸೊ ಇದನ್ನು ಹೇಳುತ್ತಿರುವ ಉದ್ದೇಶ ..., ನಿನ್ನದೇ ಮಜವಾದ ಲೆಕ್ಕಾಚಾರವಿದೆಯಲ್ಲಾ ...? ಆ ಲೆಕ್ಕಾಚಾರದ ಪ್ರಕಾರ ..., ನಿನ್ನ ಪ್ರಿಯಾರಿಟಿ ಬದಲಾಗಬೇಕಾದ ಸಮಯವಾಯಿತು ಎಂದು ಕಂಫರ್ಮ್ ಮಾಡುವುದಷ್ಟೆ !!! ಎಷ್ಟು ನಗು ಬಂತು ಗೊತ್ತಾ ಆ ಲೆಕ್ಕಾಚಾರ ನೋಡಿ ..., ಬದುಕುವುದು ಅರವತ್ತು ವರ್ಷವಂತೆ ! ಮೊದಲ ಇಪ್ಪತ್ತು ವರ್ಷ ವಿದ್ಯಾಲಕ್ಷ್ಮಿಯಂತೆ ..., ಎರಡನೇ ಇಪ್ಪತ್ತು ವರ್ಷ ಧೈರ್ಯಲಕ್ಷ್ಮಿಯಂತೆ ..., ಮೂರನೇ ಇಪ್ಪತ್ತು ವರ್ಷ ಧನಲಕ್ಷ್ಮಿಯಂತೆ !! ಹುಟ್ಟಿನಿಂದಲೇ ಮೂರೂ ಲಕ್ಷ್ಮಿಯರಿದ್ದರೂ ..., ಪ್ರಮಾಣದ ಲೆಕ್ಕಾಚಾರದಲ್ಲಿ ಈ ವಿಭಜನೆಯಂತೆ - ನಿನ್ನ ತಲೆ ! ಆದರೆ ಒಂದು ವಿಷಯವಂತೂ ನಿಜವೋ ಶಂಭು ...! ಚಿಕ್ಕವಯಸ್ಸಿನಲ್ಲಿ ನಿನಗೇನಾದರೂ ಧನಲಕ್ಷ್ಮಿ ಹೆಚ್ಚಾಗಿ ಒಲಿದಿದ್ದರೆ ಅದರ ಪರಿಣಾಮ ತುಂಬಾ ಕೆಟ್ಟದಾಗಿರುತ್ತಿತ್ತು - ನಿನ್...