ಕಥೆಯೂ- ವಾಸ್ತವವೂ- ಕಥೆಗಾರನೂ!

     

ಅಲ್ಲವೋ..., ನೀನು ಹಾಗೆಲ್ಲಾ ಬರೆದರೆ ಅದು ನಿನ್ನದೇ ವಿಷಯ ಅನ್ನಿಸಿ ಎಲ್ಲರೂ ನಿನ್ನನ್ನು ದೂರ ಇಡಲ್ವಾ?” ಎಂದಳು ಗೆಳತಿ!

ಉದಾಹರಣೆ ಹೇಳು!” ಎಂದೆ.

ಅದೇ..., ನಾವು ಸೇರುವಾಗ..., 'ನಿನ್ನನ್ನು ಯಾರಾದರೂ ತಡೆದುಕೊಂಡಿದ್ದಾರ ರಾಕ್ಷಸ?’- ಅಂತ ನಾನು ಕೇಳಿದೆ! ನೀನು- 'ಹಾಗೊಬ್ಬರನ್ನು ಹುಡುಕಬೇಕು' ಅಂದೆ! ಅದನ್ನೇ ಆಮೇಲೆ..., ಹುಡುಕಿ..., ಸಿಕ್ಕವಳೊಂದಿಗೆ ಸೇರಿದೆ, ಅವಳು ನನ್ನನ್ನು ತಡೆದುಕೊಳ್ಳಲಿಲ್ಲ ಅನ್ನುವಂತೆ ಕಥೆ ಬರೆದೆ!! ನೀನು 'ಹಾಗೊಬ್ಬಳನ್ನು ಹುಡುಕಬೇಕು' ಅಂತ ಹೇಳಿದ್ದು ನನಗೆ ಪರ್ಸನಲ್ ಆಗಿ! ಕಥೆಯಲ್ಲಿ ನಾನೂ..., ನೀ ಹುಡುಕಿದ ಅವಳೂ..., ಕರ್ಮ- ಓದುಗರ ವಿಷಯ ಬಿಡು- ನನಗಾದರೂ ನಿನ್ನ ಕಥೆ ಓದಿ ಏನನ್ನಿಸಬೇಡ?!” ಎಂದಳು.

ಏನನ್ನಿಸಿತು?” ಎಂದೆ.

ಡೌಟ್ ಬಂದೇ ಬರುತ್ತೆ!?” ಎಂದಳು.

ಕಣ್ಮಣಿ..., ಒಂದು ಕಥೆ ಹೇಳ್ತೇನೆ ಕೇಳು! ಅದನ್ನ ನೀನು ನಂಬ್ತೀಯೋ ಇಲ್ವೋ ಅನ್ನೋದರಮೇಲೆ ನಿನ್ನ ಪ್ರಶ್ನೆಗೆ ಉತ್ತರವಿದೆ! ಕಥೆಗಾರ ಅಂದಮೇಲೆ- ಕಥೆ ಹೇಗೆ ಹೇಳ್ತಾನೆ ಅನ್ನೋದಷ್ಟೇ ಮುಖ್ಯ!” ಎಂದೆ.

ಕುತೂಹಲದಿಂದ ನನ್ನ ಮುಖವನ್ನೇ ನೋಡಿದಳು!

ನಿನಗೆ ದೇವರಬಗ್ಗೆ ನಂಬಿಕೆ ಇದೆಯಾ?” ಎಂದು ಕೇಳಿದೆ.

ಹೌದೆನ್ನುವಂತೆ ತಲೆಯಾಡಿಸಿದಳು!

ದೇವರೆಂದರೆ ಯಾರು ಅಂತ ಒಂದು ಕಥೆ ಹೇಳ್ತೇನೆ ಕೇಳು....! ಆ ಕಥೆಯಲ್ಲಿ ನಡೆದದ್ದು ನೀನು ನಂಬ್ತೀಯೋ ಇಲ್ವೋ ಹೇಳು!”

*

ಚಾಮುಂಡಿಬೆಟ್ಟದ ಮುನ್ನೂರನೇ ಮೆಟ್ಟಿಲಿನಮೇಲೆ ಕುಳಿತೆ. ಯಾಕೆ ಕುಳಿತೆನೋ ತಿಳಿಯದು. ಅನ್ನಿಸಿತು- ಕುಳಿತೆ.

ಬೆಳಗಿನಜಾವ ಐದು ಗಂಟೆ. ಒಮ್ಮೆ ಶುರುಮಾಡಿದರೆ ಸಾವಿರ ಮೆಟ್ಟಿಲವರೆಗೂ ದಬದಬನೆ ಹತ್ತಿ ಹೋಗುವವ ಇವತ್ತು ಮಧ್ಯದಲ್ಲಿ ಕುಳಿತೆ. ಪಕ್ಕದಲ್ಲಿ- ಕಾಡಿನೊಳಗಿನಿಂದ ಏನೋ ಸದ್ದು ಕೇಳಿಸಿತು. ಪ್ರಾಣಿಯೋ ಏನೋ ನಡೆಯುತ್ತಿರುವಂತೆ. ಮೊದಲೇ ಚಾಮುಂಡಿಬೆಟ್ಟದಲ್ಲಿ ಚಿರತೆಯಿದೆ ಅನ್ನುವ ರೂಮರ್! ಯಾಕೋ ಹೆದರಿಕೆ ಆಗಲಿಲ್ಲ. ಬರಲಿ ನೋಡೋಣ ಎಂದು ಕಾದೆ. ಮುಂಗುಸಿಯೊಂದು ನನ್ನ ಎಡಭಾಗದಿಂದ ಬಲಭಾಗಕ್ಕೆ ಹಾದು ಹೋಯಿತು. ನನಗೇಕೆ ಪ್ರಾಣಿ ಮುಂಗುಸಿಯಾಗಿರಬಹುದು ಅನ್ನುವ ಯೋಚನೆ ಬರಲಿಲ್ಲ? ಚಿರತೆಯೇ ಯಾಕೆ ನೆನಪಾಯಿತು?

ಯಾಕೆಂದರೆ ಮನುಷ್ಯ ಮನಸ್ಸೇ ಹಾಗೆ! ಕೆಟ್ಟ ವಿಷಯವಾದರೆ ದೊಡ್ಡ ಮಟ್ಟದಲ್ಲೂ ಒಳ್ಳೆಯ ವಿಷಯವಾದರೆ ಚಿಕ್ಕ ಮಟ್ಟದಲ್ಲೂ ಯೋಚಿಸುತ್ತದೆ!” ಎಂದರು ಯಾರೋ!

ನನ್ನ ಪಕ್ಕದಲ್ಲೇ ಮಂಜಿನಂತೆ ಒಂದು ಮನುಷ್ಯ ಆಕಾರ!

ಸಾಕು ಕುಳಿತದ್ದು- ಹೊರಡು!” ಅಂದಿತು ಆಕಾರ.

ಏಳಲು ಶ್ರಮಿಸಿದೆ. ಆಗಲಿಲ್ಲ.

ಓಹ್! ನಾನಿಲ್ಲದೆ ಹೇಗೆ ಹೋಗ್ತೀಯ ಅಲ್ವಾ?!” ಎಂದು ಹೇಳಿ ನನ್ನ ಬಲಭಾಗಕ್ಕೆ ಹೋದಂತಾಯಿತು.

ಬಲ ಕಿವಿಯಲ್ಲಿ ಕಚಗುಳಿಯಿಟ್ಟಂತೆ!

ಎಷ್ಟು ಕ್ಷಣ ಕಳೆದಿರಬಹುದೋ...!

ಇದೇನ್ಸಾರ್ ಯಾವತ್ತೂ ಇಲ್ಲದ್ದು ಇವತ್ತು ಕೂತ್ಕೊಂಡಿದೀರ?” ಎಂದರು ನನ್ನಂತೆ ದಿನವೂ ಬೆಟ್ಟ ಹತ್ತುವವರು.

ಎದ್ದು..., ಅವರನ್ನು ನೋಡಿ ಮುಗುಳುನಕ್ಕು...,

ಏನಿಲ್ಲ..., ವೆದರು ತುಂಬಾ ಚೆನ್ನಾಗಿದೆ ಅನ್ನಿಸಿತು!” ಎಂದು ಹೇಳಿ ಇಳಿಯತೊಡಗಿದೆ.

ಬೆಟ್ಟ ಹತ್ತುವಾಗ ಕುಳಿತೆನ? ಪೂರ್ತಿ ಹತ್ತಿದೆನ? ದೇವಸ್ಥಾನ ಸುತ್ತಿದೆನ? ವಾಪಸ್ ಇಳಿಯುವಾಗ ಕುಳಿತೆನ? ಮುಂಗುಸಿ ನಿಜವಾ? ನಾನು ಕಂಡ ಮನುಷ್ಯ ರೂಪದ ಹಿಮ ನಿಜವಾ?

ಯಾಕೋ..., ಹೆಣ ನೆನಪಾಯಿತು! ಆ ಹೆಣಕ್ಕೂ ಜೀವಂತ ಮನುಷ್ಯನಿಗೂ ಇರುವ ವ್ಯತ್ಯಾಸವೇನು?

ಜೀವಂತ ಮನುಷ್ಯನಲ್ಲಿರುವ ಪ್ರತಿ ಅಂಶವೂ ಆ ಹೆಣದಲ್ಲಿದೆ! ಒಳಗೂ ಹೊರಗೂ...! ಇಲ್ಲದ್ದು ಏನು?

ಪ್ರಾ........!

ಹಾಗಿದ್ದರೆ ಪ್ರಾಣವೆಂದರೆ ಏನು?

ಸ್ವಲ್ಪ ಕೆಳಗೆ ಇಳಿದವನು ಪುನಃ ಮುನ್ನೂರನೇ ಮೆಟ್ಟಿಲಿನ ಬಳಿಗೆ ನಡೆದೆ!

ಸುತ್ತಲೂ ನೋಡಿದೆ! ಪ್ರಕೃತಿ ಎಷ್ಟು ಚಂದ! ತಣ್ಣನೆ ಗಾಳಿ ಬೀಸಿದಂತಾಯಿತು.

ಕಣ್ಣಿಗೆ ಏನೆಲ್ಲಾ ಕಾಣಿಸಿದರೂ..., ಅವುಗಳೆಲ್ಲಾ ಹೀಗೆಯೇ ಕಾಣಲು ಅವುಗಳೊಳಗಿನ ಪ್ರೇರಕ ಶಕ್ತಿಯೇನು?

ಅಷ್ಟೇ...! ನಮ್ಮರಿವಿಲ್ಲದೆ ನಮ್ಮನ್ನು ನೆಡೆಸುವ ಒಂದು ಶಕ್ತಿ- ನಮ್ಮೊಳಗಿನ ಪ್ರಾಣ, ಆತ್ಮ, ಅಂತರಾತ್ಮವೇ..... ದೇವರು!!!!!

ಕೆಳಗಿಳಿದು ಬಂದು ಗಾಡಿ ಹತ್ತಿ ಮನೆಗೆ ಹೊರಡುವಾಗ ಒಂದು ವಿಷಯವನ್ನು ನಿರ್ಧರಿಸಿದ್ದೆ!

ಕಾರಣವೇನೇ ಇರಲಿ..., ಒಂದು ಕ್ಷಣ- ಕ್ಷಣವೋ ಅದಕ್ಕೂ ಹೆಚ್ಚು ಹೊತ್ತೋ- ನನ್ನ ಆತ್ಮ ನನ್ನಿಂದ ಹೊರಕ್ಕೆ ಹೋಗಿ ಮತ್ತೆ ಬಂದ ವಿಷಯವನ್ನು ಅಮ್ಮನಿಗೆ ಹೇಳಬಾರದು! ಹೆದರಿಕೊಳ್ಳುತ್ತಾರೆ! ನಾಳೆಯಿಂದ ಬೆಟ್ಟಕ್ಕೆ ಬರಲು ಒಪ್ಪದಿದ್ದರೆ ಕಷ್ಟ!

*

ಇಷ್ಟೇ ಕಥೆ! ಹೇಳೀಗ..., ಇದರಲ್ಲಿ ನನಗೆ ಅನುಭವವಾಯಿತು ಎಂದು ಹೇಳಿದ ವಿಷಯವನ್ನು ನೀನು ನಂಬ್ತೀಯ?” ಎಂದು ಕೇಳಿದೆ.

ಅವಳ ಗೊಂದಲದ ಮುಖ ಎಷ್ಟು ಚಂದ ಕಾಣಿಸಿತೆಂದರೆ...., ಮುತ್ತುಕೊಡದಿರಲು ನನ್ನಿಂದ ಸಾಧ್ಯವೇ ಆಗಲಿಲ್ಲ!

ಅಷ್ಟೇ...! ಹೇಳುವ ವಿಷಯ ಮುಖ್ಯ! ಓದುಗರು ಕಥೆಗಾರನಬಗ್ಗೆ ಏನಂದುಕೊಳ್ಳುತ್ತಾರೆ ಅನ್ನುವುದು ಕಥೆಗಾರನ ಸಮಸ್ಯೆಯಲ್ಲ! ಅದನ್ನು ಸಮಸ್ಯೆಯಾಗಿ ತೆಗೆದುಕೊಂಡರೆ ಕಥೆಗಾರ ಬರೆಯುವ ಕಥೆಯಲ್ಲಿ ನಿಯತ್ತಿರುವುದಿಲ್ಲ!” ಎಂದೆ.

ಅವಳೇನೂ ಮಾತನಾಡಲಿಲ್ಲ!

ಇನ್ನೊಂದು ನಿಜ ಹೇಳಲಾ?” ಅಂದೆ.

ಏನು ಅನ್ನುವಂತೆ ನೋಡಿದಳು.

ಆ ಹುಡುಗಿ ನಿಜಕ್ಕೂ ನನ್ನನ್ನು ತಡೆದುಕೊಂಡಳು! ಇನ್ನೂ ಹೇಳಬೇಕೆಂದರೆ..., ಅವಳನ್ನು ತೃಪ್ತಿಪಡಿಸಲು ನನ್ನಿಂದ ಸಾಧ್ಯವಾಗಲಿಲ್ಲ! ಕಥೆಯಲ್ಲಿ ಹಾಗೆ ಹೇಳಿದರೆ- ನನ್ನ ಈಗೊ.... ಅಹಂ ಏನಾಗಬೇಡ?” ಎಂದೆ.

ಈಗಿನ ಅವಳ ಮುಖ..., ಆ ಕಣ್ಣುಗಳು..., ಕಣ್ಣುಗಳಲ್ಲಿನ ಆಶ್ಚರ್ಯ..., ಅಪನಂಬಿಕೆ..., ಹೇಗೆ ಸುಮ್ಮನಿರುವುದು?

ಬಾಚಿ ಎತ್ತಿಕೊಂಡು ಬೆಡ್‌ರೂಮಿಗೆ ನಡೆದೆ!!!

Comments

Popular posts from this blog

ಹಾರರ್ ಥೀಂ

ಕಡಲು ಬೆಟ್ಟ ಮತ್ತು ನಾನು!

ದಾರಿಯಲ್ಲಿ ಸಿಕ್ಕವಳು!