Posts

ಬ್ಲೂಫಿಲಂ- ಕಥೆ

ಬ್ಲೂ ಫಿಲಂ ಅರ್ಥವಾಗುತ್ತಿಲ್ಲ ನನ್ನೇ ನನಗೆ ! ಹಾಸ್ಯವಾಗಿ ಗೆಳೆಯ ಕಳಿಸಿದ ಬ್ಲೂ ಫಿಲಂ - ಅದು ಬ್ಲೂಫಿಲಂ ಕ್ಯಾಟಗರಿಗೆ ಬರುತ್ತದೆಯೇ ? ತಿಳಿಯದು - ಆದರೆ ಕಣ್ಣು ತುಂಬಿದ್ದು ನಿಜ ! ಆ ಹೆಣ್ಣು - “ ಬನ್ನಿ ಹೋಗೋಣ !” ಎಂದು ಆತನ ಕೈಹಿಡಿದು ನಡೆದ ರೀತಿ - ಆ ಆತ್ಮವಿಶ್ವಾಸ ! ಪ್ರತಿಯೊಂದನ್ನೂ ಕ್ಯಾಮೆರಾದಲ್ಲಿ ಸೆರೆಹಿಡಿಯುವ ' ಹುಚ್ಚು ಹವ್ಯಾಸ ' ಮನುಷ್ಯನನ್ನು ಯಾವಾಗ ಬಿಟ್ಟು ಹೋಗುತ್ತದೋ ... ಕೆಟ್ಟ ಆಧುನಿಕ ಯುಗ ! ಆಕಸ್ಮಿಕವಾಗಿ ಸೆರೆಹಿಡಿಯುವ ವೀಡಿಯೋದಲ್ಲಿರುವುದು - ವೀಡಿಯೋ ಮಾಡಿದವನ ಅಕ್ಕ ತಂಗಿಯೋ ಕುಟುಂಬವೋ ಆಗಿದ್ದರೆ ? ಏನೋಪ್ಪ ! * ನಿಂತು , ಆಕೆಯ ಸೀರೆಯನ್ನು ಮೇಲೆತ್ತಿ - ಆಕೆಯೋ ಉಕ್ಕಿಬಂದ ಆವೇಶವನ್ನು - ಶಬ್ದವನ್ನು ತಡೆಹಿಡಿದು - ಯಾರಿಗೂ ತಿಳಿಯದಂತೆ ...... ತಟ್ಟನೆ ಯಾರೋ ಬಂದಂತಾಗಿ , ಸೀರೆಯಿಳಿಸಿ - ಆತ ಪ್ಯಾಂಟಿನ ಜಿಪ್ ಹಾಕಿದ ! “ ಹೇ ... ಯಾಕ್ರೀ ? ಯಾರು ನೀವು ?” ನೇರವಾಗಿ ವೀಡಿಯೋ ಮಾಡುತ್ತಿದ್ದವನನ್ನೇ ನೋಡುತ್ತಾ ದಿಟ್ಟವಾಗಿ ಕೇಳಿದಳು . “ ನೀವ್ಯಾರು ? ಇಲ್ಲೇನ್‌ಮಾಡ್ತಿದೀರ ?” ತಲೆ ತಗ್ಗಿಸಿದರು . “ ಯಾವೂರು ನಿಂದು ?” “ ರಾಯಾಪುರ !” ಎಂದಳು . “ ನಿಂದು ?” “ ನಂದೂ ಅಷ್ಟೆ !” ಎಂದ ಆತ . “ ಕಾಲೆತ್ತಿ ಸರಿಯಾಗಿ ಮಾಡಿಸ್ಕೋತಿದ್ಳು ಮಗಾ !” ಎಂದ ವೀಡಿಯೋ ಮಾಡುತ್ತಿದ್ದವನು - ಜೊತೆಯವನಿಗೆ ! “ ಬರೋಕೆ ಹೇಳು - ಐದಾರು ಜನ ಇದ್ದಾರೆ !” ಎಂದ ಅವನು . ಅವಳ...

ಗಾಳಿಸುದ್ದಿ- ಕಥೆ

ಗಾಳಿ ಸುದ್ದಿ ಕಥೆಯೊಂದು ಪ್ರಚಲಿತದಲ್ಲಿತ್ತು ! ಕಥೆ ಎಂದರೆ .... ಗಾಳಿಸುದ್ದಿ - ಪ್ರಚಲಿತದಲ್ಲಿರುವ ಕಥೆ ! ಕಥೆಯ ನಾಯಕ ಯಾವುದೋ ಒಬ್ಬ ಓದುಗ ! ಪುಸ್ತಕಗಳನ್ನು ಓದುವುದು .... ಅದರಲ್ಲಿನ ವಾಸ್ತವತೆಗಳನ್ನು ಪರೀಕ್ಷಿಸುವುದು ಅವನ ಹವ್ಯಾಸವಂತೆ ! ಹೇಳಿದ್ದೇನೆ - ಗಾಳಿಸುದ್ದಿ ಇದು - ವಾಸ್ತವ ಕಂಡು ಹಿಡಿಯಲಾಗದೇ ಹೋದ - ಗಾಳಿಸುದ್ದಿ ! ೧ ಪುಸ್ತಕವೊಂದನ್ನು ಓದಿದನಂತೆ ! ಬ್ಯಾಂ ಕ ನ್ನು ಕೊಳ್ಳೆಹೊಡೆಯುವ ಕಥೆ ! ತಿಂಗಳುಗಟ್ಟಲೆ ಯಾರಿಗೂ ತಿಳಿಯದಂತೆ ಕಂದಕವೊಂದನ್ನು ಕೊರೆದು .... ಹಾಗೆಯೇ ಮಾಡಿದ ! ೨ ಮತ್ತೊಂದು ಪುಸ್ತಕ ... ಜನರ ನಡುವೆಯಿರುವ ಸಾಮಾನ್ಯ ಪ್ರಜೆಯೊಬ್ಬ ಕೊಲೆ ಮಾಡಿದರೆ ಸಿಕ್ಕಿಕೊಳ್ಳುವ ಅವಕಾಶ ಕಮ್ಮಿ ಅನ್ನುವ ಕಥಾವಸ್ತು !! ಅವನ ಮೂವರು ಶತ್ರುಗಳನ್ನು - ವೈಮನಸ್ಯ ಇರುವವರನ್ನು ಕೊಂದ - ಅವರ ಮರಣಕ್ಕೆ ಕಾರಣ ನಿಜ ಪ್ರಪಂಚಕ್ಕೆ ತಿಳಿಯದು ! ಎಲ್ಲವೂ ಪುಸ್ತಕವೊಂದರ ಪ್ರೇರಣೆ ಎಂದಷ್ಟೇ ತಿಳಿದಿದೆ ! ಲೇಖಕನನ್ನು ಸಂಶಯಿಸುವುದು ಹೇಗೆ - ಕಾರಣ ಮಾಡುವುದು ಹೇಗೆ ? ೩ ಸುಮಾರು ಹದಿನೇಳು ಪುಸ್ತಕಗಳನ್ನು ತನ್ನ ಜೀವನದಲ್ಲಿ ಪ್ರಯೋಗಿಸಿದ - ಓದುಗ ! ಈಗ ... ಹದಿನೆಂಟು - ಹೆಣ್ಣನ್ನು ಸೆಳೆಯುವುದು ಹೇಗೆ ಅನ್ನುವ ಪುಸ್ತಕ !! ಸೆಳೆದೇ ಸೆಳೆದ ! ಹಾರಿಸಿಕೊಂಡು ಹೋಗಿ ಮದುವೆಯೂ ಆದ ! ಪ್ರಾಣ ಪ್ರಿಯೆಯ ಪ್ರಶ್ನೆ - “ ಒಂದೇ ಒಂದು ಪ್ರಶ್ನೆ ! ಒಂದೇ ಒಂದು ವಾಕ್ಯದಲ್ಲಿ ಉತ್ತರ ಕೊಡಿ - ಇಷ್ಟೊಂದು...

ಕಥಾಸ್ಪರ್ಧೆ- ಕಥೆ

ಕಥಾಸ್ಪರ್ಧೆ ! ೧ ಯಾವುದರಲ್ಲಿಲ್ಲ ಸ್ಪರ್ಧೆ ? ಹಾಗೆಂದು ನಮ್ಮ ಅರಿವಿಗೆ ಮೀರಿದ ಸ್ಪರ್ಧೆಗಳಲ್ಲಿ ಭಾಗವಹಿಸಬಹುದೇ ? ನಮ್ಮ ಸಾಮರ್ಥ್ಯ ಯಾವುದರಲ್ಲಿದೆಯೋ ಅದರಲ್ಲಿ ಮಾತ್ರ ಸ್ಪರ್ಧಿಸಬೇಕು !! ನನಗೆ ಗೊತ್ತಿರುವುದೊಂದೇ .... ಕಥೆ ಬರೆಯುವುದು ! ಆದರೆ ಸ್ಪರ್ಧೆಯಲ್ಲಿ ನನಗೆ ಆಸಕ್ತಿಯಿಲ್ಲ ! " ನನಗಾಗಿ ಒಂದು ಕಥೆಯನ್ನು ಬರೆದು ಆ ಸ್ಪರ್ಧೆಗೆ ಕಳಿಸು ...” ಎಂದವಳು ಹೇಳಿದಾಗ ಚಂಚಲಗೊಂಡೆ ! ಅವಳು ಹೇಳಿದ್ದರಿಂದ ಸ್ಪರ್ಧಿಸಲೇ ? ಬರೆದ ಕಥೆಗೆ ಬಹುಮಾನ ಬರಲಿಲ್ಲವೆಂದರೋ .....? ಅವಳು ಹೇಳಿದಳೆಂದು - ಸ್ಪರ್ಧಿಸಲಾರೆ ! ಅವಳು ಹೇಳಿರುವುದರಿಂದ ಸ್ಪರ್ಧಿಸದೆಯೂ ಇರಲಾರೆ !!! ಯೋಚನೆಯಿಂದ ತಲೆಭಾರವಾಯಿತು ! ಇನ್ನೆರಡುದಿನಗಳಲ್ಲಿ ಕಥೆ - ಅದೂ ಬಹುಮಾನ ಬರುವಂತಹ ಕಥೆ - ಅವಳಿಗಾಗಿ !!! ೨ ಒರಗಿಕೊಳ್ಳಲೊಂದು ವಿಶಾಲವಾದ ಎದೆ - ಪ್ರತಿ ಹೆಣ್ಣಿನ ಕನಸಂತೆ , ಆಸೆಯಂತೆ ! ನನ್ನ ವಿಷಯದಲ್ಲಿ ಅದು ಉಲ್ಟಾ ! ನನಗೆ ಉತ್ತೇಜನ ಬೇಕು - ನನ್ನ ಸಾಮರ್ಥ್ಯವನ್ನು ಅರಿತು ಅದನ್ನು ಬೆಳೆಸಲು ಒಂದು ಆಧಾರ ಬೇಕು ! - ಆ ಆಧಾರದ ಎದೆಯಲ್ಲಿ ಮುಖ ಹುದುಗಿಸಿ ಮಲಗಿದ್ದೇನೆ ! ಅವಳ ಬೆರಳುಗಳು ನನ್ನ ತಲೆಕೂದಲುಗಳನಡುವೆ ಓಡಿಯಾಡುತ್ತಿದೆ . ಅವಳಿಗೆ ಗೊತ್ತು - ನಾನವಳ ಕರ್ತವ್ಯವೆಂದು ! ಎದೆ ಒದ್ದೆಯಾಗಿದ್ದು ಅರಿವಾಯಿತೇನೋ ..... ನನ್ನ ತಲೆಯನ್ನು ಹಿಂದಕ್ಕೆ ಬಾಗಿಸಿ ಮುಖವನ್ನು ನೋಡಿ , “ ಯಾಕೋ ...?” ಎಂದಳು . ನಾನೇನ...

ದ್ವೈತಾದ್ವೈತ!- ಕಥೆ

ದ್ವೈತಾದ್ವೈತ ! ೧ ಕೆಲವೊಮ್ಮೆ ಅನ್ನಿಸುತ್ತದೆ - ಏಕಾಂಗಿ ನಾನೆಂದು ! ಆದರೆ ಹೇಗೆ ? ಯಾರದೋ ಸಂರಕ್ಷಣೆಯಲ್ಲಿರುವಂತೆಯೂ ಅನ್ನಿಸುತ್ತದಲ್ಲ ? ಹೊರಗೆ ನಿಂತು ನೋಡಿದರೆ ..., ಯಾವುದರಿಂದ ಹೊರಗೆ ? ನನ್ನಿಂದ ನಾನೇ - ಹೊರಗೆ ನಿಂತು ನೋಡಿದರೆ ಯಾವ ಕ್ಷಣದಲ್ಲಿಯೂ ನಾನು ಏಕಾಂಗಿಯಾಗಿರಲಿಲ್ಲ ! ಈ ಯೋಚನೆಯಿಂದ ಪ್ರಾರಂಭವಾಗಿ ಕ್ಷಣಕ್ಷಣಕ್ಕೂ ಅದಲುಬದಲಾಗುತ್ತಿದ್ದ ಮತ್ತೊಂದು ಯೋಚನೆ , ಯೋಚನೆಗಿಟ್ಟುಕೊಂಡಿತು !! ದ್ವೈತ - ಅದ್ವೈತ ! ದ್ವೈತ ಅಂದರೆ ದ್ವಿ - ಅಂತೆ ! ಅಂದರೆ ಎರಡು ಎಂದು ! ಅದ್ವೈತ ಅಂದರೆ ದ್ವಿ - ಅಲ್ಲದ್ದು ಅಂತೆ ! ಅಂದರೆ ಒಂದು ಎಂದು ! ತತ್ತ್ವರೂಪವಾದ ವಿಶದೀಕರಣವನ್ನು ಬಿಡುತ್ತೇನೆ ! ನನ್ನ ಯೋಚನೆ ..., ಅಹಂ ಬ್ರಹ್ಮಾಸ್ಮಿ ! ನಾನೇ ಬ್ರಹ್ಮ ಅನ್ನುವುದಾದರೆ ..., ನಾನೂ ನನ್ನ ಯೋಚನೆಯೂ ಎಲ್ಲವೂ ಒಂದೇ ..., ಕೆಟ್ಟ ಯೋಚನೆ ಬಂದರೆ ಅದೂ ದೈವ ಪ್ರೇರಿತವೇ ! ಬ್ರಹ್ಮ ಬೇರೆ ನಾನು ಬೇರೆ ಅನ್ನುವುದಾದರೆ ..., ಯೋಚನಾರೂಪೇಣ ನಾನು ಸ್ವತಂತ್ರ ! ಸರಿ ..., ದ್ವೈತವನ್ನು ಆಚರಿಸುವ ಅದ್ವೈತಿ ನಾನು ಅನ್ನುವುದಾದರೆ ..., ೨ “ ಯಾರು ?” ಹೆಣ್ಣು ಶಬ್ದ ! “ ನಾನು !” ಎಂದೆ . “ ನೀನು ಯಾರು ? ನಿನಗಿಲ್ಲೇನು ಕೆಲಸ ?” “ ನೀನು ದೇವಿಯೇ ?” “ ಸಂಶಯವೇನು ?” “ ನೀನು ಯಾರೆಂದು ಕೇಳಿದ್ದೇ ಸಂಶಯ !” ಎಂದೆ . ಮುಗುಳುನಕ್ಕರು ತಾಯಿ ! “ ವೀರ ....!” ಎಂದರು . “ ತಿಳಿದಿದ್ದೂ ಯಾಕೆ ಕೇಳಿ...

ನಾನು- ಕಥೆ

ನಾನು ೧ ನನ್ನ ನಾ ಹುಡುಕಿಕೊಳ್ಳಲು ಕಥೆಯೊಂದು ಬರೆಯತೊಡಗಿದೆ ! ಅರ್ಧ ಮುಗಿದಾಗ ಅನ್ನಿಸಿತು - ಕಥೆಯಲ್ಲಿ ನಾನಿಲ್ಲ ! ಮತ್ತಷ್ಟು ಮಗದಷ್ಟು ವಿಷಯಗಳನ್ನು ಕಲೆಹಾಕಲು ಹೊರಟೆ . ಮರಳಲಾಗಲಿಲ್ಲ ! ೨ ಬುಳ್ಕ್ ಬುಳ್ಕ್ .... ಶಬ್ದ ! ಹೆಣ್ಣೊಬ್ಬಳು ವಯ್ಯಾರವಾಗಿ ನಡೆದು ಬರುತ್ತಿದ್ದಳು ! ತಲೆಯಲ್ಲಿ ಬಿಂದಿಗೆ ! ನನ್ನ ಜ್ಞಾನದಂತೆ - ಅರ್ಧ ತುಂಬಿದ್ದುದ್ದರಿಂದ ಅವಳ ವಯ್ಯಾರಕ್ಕೆ ಅನುಸಾರವಾಗಿ ನೀರು ಚೆಲ್ಲುತ್ತಿತ್ತು - ಶಬ್ದದೊಂದಿಗೆ ! ಚೆಲ್ಲಿದ ನೀರು ಅವಳ ತಲೆಯಿಂದ ಕೆನ್ನೆ ಕುತ್ತಿಗೆಗಳನ್ನು ದಾಟಿ ಕೆಳಕ್ಕೆ ಹರಿದು ಹೋಗುತ್ತಿತ್ತು . ಆ ನೆನೆಯುವಿಕೆಯನ್ನು ಆಸ್ವಾದಿಸುತ್ತಿರುವಂತೆ ಅದ್ಭುತ ಕಳೆ - ಅವಳ ಮುಖದಲ್ಲಿ . ಮೈಗಂಟಿದ ಒದ್ದೆ ವಸ್ತ್ರ .... ನನ್ನನ್ನು ದಾಟಿ ಮುಂದಕ್ಕೆ ಹೋದ ಅವಳ ಹಿಂಬಾಗ ... ನೋಡುತ್ತಾ ನಿಂತೆ ! ಅವಳ ಹಿಂದೆಯೇ ಹೋಗಲೆ ? ಯಾಕೆ ? ನಿಜವೇ ....! ಯಾಕೆ ? ತಲೆ ಕೊಡವಿ ಮುಂದಕ್ಕೆ ಹೆಜ್ಜೆ ಹಾಕಿದೆ . ೩ ಸ್ಮಶಾನ ! ಸ್ಮಶಾನ ಮೌನ ! ಸ್ಮಶಾನ ಮೌನವೆಂದರೆ ಗಾಢ ಮೌನವೇ ? ಅಲ್ಲ ! ಸ್ಮಶಾನ ಮೌನ ! ಗಾಳಿಯ ಶಬ್ದ - ಎಲೆಗಳು ಕದಲುವ ಶಬ್ದ - ಮರದ ಅಲುಗಾಟ - ರಾತ್ರಿಕೀಟಗಳ ಶಬ್ದ - ಶಬ್ದದ ಗುಂಪಿಗೆ ಸೇರದ ಗುಂ ಎನ್ನುವ ನೀರವ ಶಬ್ದ - ಭಾವನೆ ! ಮಧ್ಯರಾತ್ರಿ ಹನ್ನೆರಡು ಗಂಟೆ ! ನನ್ನನ್ನು ನಾನು - ನನ್ನ ಧೈರ್ಯವನ್ನು ನಾನು ಪರೀಕ್ಷಿಸಿಕೊಳ್ಳಲು ಬಂದಿದ್ದೆ . ಸ್ವಲ್ಪ ದೂರದಲ್...