ಮನಸ್ಸೂ ಹೆಣ್ಣೂ ನಿಮಿತ್ತವೂ ಬದುಕೂ- ಕಥೆ!
ಮನಸ್ಸೂ ಹೆಣ್ಣೂ ನಿಮಿತ್ತವೂ ಬದುಕೂ - ಕಥೆ ! ೧ ಮನಸ್ಸು ಒಂದು ಅದ್ಭುತ ! ಪ್ರತಿಕ್ಷಣದ ಬೆಳವಣಿಗೆ , ಚಿಂತನೆ , ಆತ್ಮವಿಮರ್ಶೆ , ಸರಿ ತಪ್ಪುಗಳ ವಿಶ್ಲೇಷಣೆ , ಗೊಂದಲಗಳು , ವ್ಯಕ್ತಿತ್ವದ ವಿಕಾಸ - ಅವನತಿಗಳು… , ನಿರಂತರತೆ ಅನ್ನುವುದು ಬದುಕಿರುವವರೆಗೆ ನಮ್ಮ ಮನಸ್ಸಿನ ಸಹಜ ಗುಣ ! ಬದುಕಿಗೆ ಸಂಬಂಧಪಟ್ಟಂತೆ ನಾವು ತೆಗೆದುಕೊಂಡ ತೀರ್ಮಾನಗಳು - ನಿಶ್ಚಯಗಳನ್ನು ಹೊರತುಪಡಿಸಿ ಒಮ್ಮೆ ಇದ್ದ ಮನಸ್ಸು ಮತ್ತೊಮ್ಮೆ ಇರುವುದಿಲ್ಲ ! ಅದೂ ಕೂಡ ನಮ್ಮ ಮನಸ್ಸಿನ ಮೇಲೆ ನಮಗಿರುವ ಹಿಡಿತವನ್ನು - ನಿಶ್ಚಯದಾರ್ಢ್ಯತೆಯನ್ನು ಅವಲಂಬಿಸಿ ! ಉಳಿದಂತೆ ಮನಸ್ಸು ಪ್ರತಿ ಕ್ಷಣ ಬದಲಾಗುತ್ತಲೇ ಇರುತ್ತದೆ ! ಕಾರಣ… , ಸಂದರ್ಭ ! ಒಮ್ಮೆ ಇದ್ದ ಸಂದರ್ಭ ಮತ್ತೊಮ್ಮೆ ಬರಬೇಕೆಂದಿಲ್ಲ ! ಹಾಗೆಯೇ… , ಮತ್ತೊಮ್ಮೆ ಮರುಕಳಿಸಿದರೂ ಮನಸ್ಸಿನ ಪ್ರತಿಕ್ರಿಯೆ ಒಂದೇ ಇರಬೇಕೆಂದೂ ಇಲ್ಲ ! ಮನಸ್ಸನ್ನು ನಿಶ್ಚಯಿಸುವುದು ಒಂದು ರೀತಿಯಲ್ಲಿ - ಅನುಭವಗಳು ! ನಮ್ಮ ಮನಸ್ಸು ಹೊರಗಿನವರಿಗೆ ಪ್ರಶ್ನಾತೀತ ! ನಮ್ಮ ಪೂರ್ತಿ ಬದುಕಿಗೆ ನಾವೇ ಹೊಣೆಗಾರರು ಹೊರತು ಯಾರನ್ನೂ ಕಾರಣ - ನೆಪ - ಹೇಳುವಂತೆ ಇಲ್ಲ ! ಆದರೂ ಕೆಲವೊಮ್ಮೆ ಹೊರಗಿನವರು - ಹೊರಗಿನವರೆಂದರೆ… , ನಮ್ಮೊಳಗಿದ್ದರೂ ನಮಗಿಂತ ಭಿನ್ನ ವ್ಯಕ್ತಿತ್ವ ಇರುವವರು… , ನಮ್ಮ ಮನಸ್ಸನ್ನು ಎಷ್ಟರಮಟ್ಟಿಗೆ ನಿಯಂತ್ರಿಸುತ್ತಾರೆಂದರೆ… , ಒಂದು ಹಂತದಲ್ಲಿ ಅದರಿಂದ ಹೊರಬಂದರೆ ಸಾಕು ಅನ್ನಿಸುವಷ್ಟು ! ಹಾಗೆಂ...