ಮಹಾಪ್ರಳಯ!
ಮಹಾಪ್ರಳಯ!
ಎಂಥಾ ಅಚಾತುರ್ಯವಾಯಿತು! ಆರು ತಿಂಗಳ ನಂತರ ತವರಿನಿಂದ ಮರಳುತ್ತಿರುವ ಹೆಂಡತಿಯನ್ನು ಕರೆತರಲು ಬಂದಿದ್ದೆ! ಗಾಡಿ ಗೆಳೆಯನದ್ದೆಂದು ಮರೆತು ಹೋಯಿತು! ನನ್ನ ಗಾಡಿ ಸರ್ವೀಸಿಗೆ ಕೊಟ್ಟಿದ್ದೆ! ಹೆಂಡತಿಯನ್ನು ಕೂರಿಸಿಕೊಂಡು ಬರುವಾಗ ದೂರದಲ್ಲಿ ಇಬ್ಬರು ಸೀರೆ ಉಟ್ಟ ಸುಂದರಿಯರು ಕಾಣಿಸಿದರು! ಅಭ್ಯಾಸ ಬಲದಿಂದ ಕಣ್ಣುಮಿಟುಕಿಸಿ ನಕ್ಕೆ! ಅವರನ್ನು ದಾಟಿ ಹೋದಮೇಲೆ ಅವರು ನಮ್ಮನ್ನು ನೋಡುತ್ತಿದ್ದಾರೆಯೇ ಎಂದು ತಿಳಿಯಲು ಮಿರರ್‌ನಲ್ಲಿ ನೋಡಿದೆ. ನನ್ನನ್ನೇ ದುರುಗುಟ್ಟಿ ನೋಡುತ್ತಿದ್ದಾಳೆ ಹೆಂಡತಿ! ಎಡಗಡೆಯ ಮಿರರನ್ನು ಹಿಂಬದಿ ಸವಾರರ ಮುಖ ಕಾಣುವಂತೆ ತಿರುಗಿಸಿ ಇಡುವುದು ಗೆಳೆಯನ ದುರ್‌ಅ(ಆ)ಭ್ಯಾ(ಭಾ)ಸ!
“ನಾನು ನೋಡಿದೆ!” ಎಂದಳು..., ಭೂಮಿ ನಡುಗಿತು!
ಮುಂದಿನ ಮೂರುದಿನ ಮಹಾ….!!!???
Comments
Post a Comment