Posts

ಲಕ್ಷ್ಮಿಯ ಉಪದೇಶ!

    * ಹೇಗಿದ್ದೀಯ ಶಂಭು ? ನಿನಗೇನು ? ಪ್ರತಿ ಕ್ಷಣ ಸಂತೋಷದಿಂದ ಇರುವವನು ! ಈಗಲೂ ಸಂತೋಷದಿಂದ ಇರ್ತೀ ಅಂತ ಗೊತ್ತು ...! ಆದರೂ ಕೆಲವೊಂದು ವಿಷಯಗಳನ್ನು ನಿನಗೆ ಹೇಳಬೇಕು ಅನ್ನಿಸುತ್ತಿದೆ ! ಹೇಳಿಬಿಡುತ್ತೇನೆ ! ಇದು ..., ನೀನು ನೆಮ್ಮದಿಯಾಗಿಲ್ಲ ಅಂತ ಅನ್ನಿಸಿ ಹೇಳುತ್ತಿರುವುದಲ್ಲ ..., ಗೊತ್ತು ..., ಘಟನೆ ಏನೇ ಆದರೂ ..., ಮಾನಸಿಕ ಸಂಘರ್ಷಗಳು ಏನೇ ಇದ್ದರೂ - ನೀ ನೆಮ್ಮದಿಯಾಗಿರುತ್ತಿ ! ಆ ಘಟನೆಗಳನ್ನೂ - ಸಂಘರ್ಷವನ್ನೂ ಎಂಜಾಯ್ ಮಾಡ್ತಿ ! ಸೈಕಲಾಜಿಕಲ್ ಅನಾಲಿಸಿಸ್ ಮಾಡ್ತಿ ! ಸೊ ಇದನ್ನು ಹೇಳುತ್ತಿರುವ ಉದ್ದೇಶ ..., ನಿನ್ನದೇ ಮಜವಾದ ಲೆಕ್ಕಾಚಾರವಿದೆಯಲ್ಲಾ ...? ಆ ಲೆಕ್ಕಾಚಾರದ ಪ್ರಕಾರ ..., ನಿನ್ನ ಪ್ರಿಯಾರಿಟಿ ಬದಲಾಗಬೇಕಾದ ಸಮಯವಾಯಿತು ಎಂದು ಕಂಫರ್ಮ್ ಮಾಡುವುದಷ್ಟೆ !!! ಎಷ್ಟು ನಗು ಬಂತು ಗೊತ್ತಾ ಆ ಲೆಕ್ಕಾಚಾರ ನೋಡಿ ..., ಬದುಕುವುದು ಅರವತ್ತು ವರ್ಷವಂತೆ ! ಮೊದಲ ಇಪ್ಪತ್ತು ವರ್ಷ ವಿದ್ಯಾಲಕ್ಷ್ಮಿಯಂತೆ ..., ಎರಡನೇ ಇಪ್ಪತ್ತು ವರ್ಷ ಧೈರ್ಯಲಕ್ಷ್ಮಿಯಂತೆ ..., ಮೂರನೇ ಇಪ್ಪತ್ತು ವರ್ಷ ಧನಲಕ್ಷ್ಮಿಯಂತೆ !! ಹುಟ್ಟಿನಿಂದಲೇ ಮೂರೂ ಲಕ್ಷ್ಮಿಯರಿದ್ದರೂ ..., ಪ್ರಮಾಣದ ಲೆಕ್ಕಾಚಾರದಲ್ಲಿ ಈ ವಿಭಜನೆಯಂತೆ - ನಿನ್ನ ತಲೆ ! ಆದರೆ ಒಂದು ವಿಷಯವಂತೂ ನಿಜವೋ ಶಂಭು ...! ಚಿಕ್ಕವಯಸ್ಸಿನಲ್ಲಿ ನಿನಗೇನಾದರೂ ಧನಲಕ್ಷ್ಮಿ ಹೆಚ್ಚಾಗಿ ಒಲಿದಿದ್ದರೆ ಅದರ ಪರಿಣಾಮ ತುಂಬಾ ಕೆಟ್ಟದಾಗಿರುತ್ತಿತ್ತು - ನಿನ್...

ಬದುಕೆಂಬ ಆಯ್ಕೆ!

ಇವತ್ತೇ ಯಾಕೆ ಇಷ್ಟು ನೆನಪಾಗುತ್ತಿದ್ದಾಳೆ ? ಯಾಕೆಂದರೆ ಬೆಂಗಳೂರಿಗೆ ಹೋಗುತ್ತಿದ್ದೇನೆ - ಎರಡು ವರ್ಷಗಳ ನಂತರ ... ಕಾಣಿಸುತ್ತಾಳೆಯೇ ? ಅಂದು ..., ಬೆಂಗಳೂರಿಗೆ ಹೋದ ಕೆಲಸ ಮುಗಿಸಿ ಮೆಜೆಸ್ಟಿಕ್‌ನಿಂದ ಅಂಡರ್‌ಗ್ರೌಂಡ್‌ಮೂಲಕ ರೈಲ್ವೇಸ್ಟೇಷನ್‌ಗೆ ಬರುವಾಗ ..., ಹೊರ ದಾರಿಯ ಮೆಟ್ಟಿಲಿನಮೇಲೆ ಕಾಲಗಲಿಸಿ ಕುಳಿತಿದ್ದಳು ! ಇವಳೂ ....? ಅನ್ನುವ ಪ್ರಶ್ನೆ ಉದಿಸುವಂತಿದ್ದಳು ಹುಡುಗಿ ! ಅವಳ ಮುಖವನ್ನು ನೋಡಿದಾಗಕ್ಷಣ ಬೇಕಾ - ಅನ್ನುವಂತೆ ಹುಬ್ಬು ಕುಣಿಸಿದಳಾದರೂ ನನ್ನ ಕಣ್ಣಿನ ಭಾವ ತಾಕಿದವಳಂತೆ ತಲೆ ತಗ್ಗಿಸಿದಳು ! ಎಷ್ಟಿರಬಹುದು ವಯಸ್ಸು ? ಇಪ್ಪತ್ತು ? ಎಷ್ಟೇ ಹೆಚ್ಚೆಂದರೂ ಇಪ್ಪತ್ತೈದು ದಾಟಿರುವುದಿಲ್ಲ . ಒಂದೇ ನೋಟದಲ್ಲಿ ಯಾರನ್ನೂ ಅಳೆಯಲಾಗುವುದಿಲ್ಲವಾದರೂ ..., ಒಳ್ಳೆಯ ಮನೆತನದ ಹುಡುಗಿ ಎಂದೇ ಅನ್ನಿಸಿದ್ದು !! ಅವಳ ಪಕ್ಕದಲ್ಲಿಯೇ ..., ಅವಳು ಕುಳಿತಂತೆಯೇ ಕಾಲಗಲಿಸಿ ಕುಳಿತು ..., “ ಹಣಕ್ಕಾಗಿಯೋ ಸುಖಕ್ಕಾಗಿಯೋ ?” ಎಂದು ಕೇಳಿದ್ದೆ ! ಅಯೋಮಯವಾಗಿ ನೋಡಿದಳು . “ ಎರಡಕ್ಕಾದರೂ ನಿನಗಿದು ಹೊಂದುವುದಿಲ್ಲ !” ಎಂದು ಹೇಳಿ ಎದ್ದು ಹೊರಟು ಬಂದಿದ್ದೆ ! ಅವಳ ಮಹತ್ವ ಅವಳಿಗಾದರೂ ಗೊತ್ತೋ ಇಲ್ಲವೋ ..., ನನ್ನ ಮಾತಿನ ಪ್ರಭಾವ ಎಳ್ಳಷ್ಟಾದರೂ ಬೀರಿದರೆ ಬೀರಲಿ ಅಂದುಕೊಂಡು ಹೇಳಿದ್ದೆ ! ಅಷ್ಟೇ ..., ಅವಳ ಮುಖ ಅಚ್ಚಳಿಯದೆ ಮನಸ್ಸಿನಲ್ಲಿ ಉಳಿದುಹೋಯಿತು !! ಇವತ್ತು ಮತ್ತೆ ಮತ್ತೆ ನೆನಪಾಗಿ ..., ರೈಲು ಇಳಿದು ಮೆ...

ಅವನೂ ಆತ್ಮಹತ್ಯೆಯೂ!

    * “ ಒಂದು ವಿಷಯ ಯಾವತ್ತಿಗೂ ನೆನಪಿಟ್ಟುಕೋ ...., ಸುಖ - ದುಃಖಗಳಿರಲಿ ..., ನಾವೇ ಶಾಶ್ವತವಲ್ಲದ ಈ ಬದುಕಿನಲ್ಲಿ ..., ಬಾಂಧವ್ಯಕ್ಕೆ ಸಮಯ ಕೊಡಲಾಗದಷ್ಟು ಬ್ಯುಸಿಯಾದ ಬದುಕು - ಬದುಕಲ್ಲ !” ಎಂದ . ಅವನ ಮುಖವನ್ನೇ ನೋಡಿದೆ . ಮಾತನಾಡಲು ಏನೂ ಇರಲಿಲ್ಲ . ಅವನೇ ..., “ ನನಗೆ ಸಮಯ ಕೊಡಲು ನಿನ್ನಿಂದ ಸಾಧ್ಯವಾಗುತ್ತಿಲ್ಲ ಅನ್ನುವ ಕಾರಣಕ್ಕೆ ಇದನ್ನು ಹೇಳುತ್ತಿಲ್ಲವೇ ..., ಪದೇ ಪದೇ ನಿನಗಾಗಿ ತಪಿಸುವ ನನ್ನನ್ನು ನೀನು ಬ್ಯುಸಿಯಾಗು ಅಂದೆಯಲ್ಲಾ ...? ಅದಕ್ಕೆ ಹೇಳಿದೆ !” ಎಂದ . ನನ್ನದು ಅದೇ ಮೌನ ! ಮತ್ತೆ ಅವನೇ ..., “ ಏನಂದುಕೊಂಡಿದ್ದೀಯ ? ನಿನಗಾಗಿ ತಪಿಸುತ್ತಿರುವುದು ಬೇರೆ ಕೆಲಸವಿಲ್ಲದ್ದರಿಂದ ಅಂತಾನ ? ಅಥವಾ ನಿನ್ನಿಂದ ಏನಾದರೂ ನಿರೀಕ್ಷೆ ಇಟ್ಟುಕೊಂಡು ಅಂತಾನ ?” ನನ್ನ ಕಣ್ಣು ತುಂಬಿತು . ಏನೆಂದು ಉತ್ತರಿಸಲಿ ? ಮೊದಲು ನನ್ನ ಅರಿವಿಲ್ಲದೆ ..., ನಂತರ ಅರಿವಿನೊಂದಿಗೆ ಅವನನ್ನು ಇಗ್ನೋರ್ ಮಾಡುತ್ತಿದ್ದೇನೆ - ಎಂದೇ ? ಯಾಕೆ ? * ರುದ್ರನನ್ನು ಪರಿಚಯವಾಗುವಾಗ ನನ್ನ ಗಂಡ ಸತ್ತು ಎರಡು ವರ್ಷವಾಗಿತ್ತು . ಎರಡನೇ ವರ್ಷದ ದುಃಖಾಚರಣೆಗಾಗಿ ಬಾರ್‌ಗೆ ಹೋಗಿದ್ದೆ . ಒಬ್ಬಳೇ ..., ಆ ಟೇಬಲ್ ನನಗೊಬ್ಬಳಿಗೆ ಮೀಸಲು . ಹೊಟ್ಟೆ ತುಂಬಾ ಕುಡಿದು ಮನೆಗೆ ಹೋಗಿ ಮಲಗಿಬಿಡುವುದು ಉದ್ದೇಶ . ಒಂದು ಕೈಯ್ಯಲ್ಲಿ ಬಿಯರ್ ಬಾಟಲ್ , ಮತ್ತೊಂದು ಕೈಯ್ಯಲ್ಲಿ ಮೊಬೈಲ್ ...! ಗಂಡನೊಂದಿಗಿನ ಅದ್ಭುತ ಕ್ಷಣಗಳ ಫೋಟೋಗಳು ..., ...

ಆತ್ಮಾವಲೋಕನ!

ಕೆಲವೊಮ್ಮೆ ನನಗೆ ತುಂಬಾ ಆಶ್ಚರ್ಯವಾಗುತ್ತದೆ! ಈ ಮನುಷ್ಯರು ಯಾಕೆ ಇಷ್ಟೊಂದು ದುಃಖಿತರಾಗಿದ್ದಾರೆ…, ಯಾವಾಗಲೂ ಏನೋ ಕಳೆದುಕೊಂಡವರಂತೆ…, ಪ್ರಪಂಚದಲ್ಲಿರುವ ಅಷ್ಟೂ ದುಃಖ- ವಿಷಾದ ತಮಗೇ ಬಂದಂತೆ…! ಸಂತೋಷದ ಕ್ಷಣಗಳೇ ಹೆಚ್ಚಾಗಿದ್ದರೂ ಅದನ್ನು ಮರೆಮಾಚಿ, 'ವಿಷಾದಿತ' ಅನ್ನಿಸಿಕೊಳ್ಳುವುದು ಏನೋ ದೊಡ್ಡಸ್ತಿಕೆ ಅನ್ನುವಂತೆ…! ಯಾಕೆ? ಹಾಗೆಯೇ…,  ಈ ಪ್ರಪಂಚಕ್ಕೇ ಸಂಬಂಧಪಡದವನಂತೆ ನಾನು ಹೇಗೆ ಇಷ್ಟು ಖುಷಿಯಾಗಿ- ನೆಮ್ಮದಿಯಾಗಿ ಬದುಕಿದ್ದೇನೆ? ತೀರಾ ಆಕಸ್ಮಿಕವಾಗಿ ಇದರಬಗ್ಗೆ ಯೋಚಿಸುವ ಸಂದರ್ಭ ಒದಗಿತು! ಬೆಳಿಗ್ಗೆ ಮತ್ತು ಸಂಜೆ…, ಅಮ್ಮ ಮಗ ಒಟ್ಟಿಗೆ ಕುಳಿತು ಟಿ ಕುಡಿಯುತ್ತೇವೆ. ಆ ಸಮಯ ನಮ್ಮದು…, ಪ್ರಪಂಚದ ಅಷ್ಟೂ ಆಗುಹೋಗುಗಳ ಬಗ್ಗೆ ಮಾತುಕತೆಯಾಗುತ್ತದೆ. ಕೆಲವೊಮ್ಮೆ ಎರಡುಮೂರು ನಿಮಿಷಕ್ಕೆ ನಮ್ಮ ಮಾತುಗಳು ಮುಗಿದು ಇನ್ನು ಮಾತನಾಡಲು ಏನೆಂದರೆ ಏನೂ ಉಳಿದೇ ಇಲ್ಲವೇನೋ ಅನ್ನಿಸುತ್ತದೆ! ಮತ್ತೆ ಕೆಲವೊಮ್ಮೆ…, ಮಾತನಾಡಿದಷ್ಟೂ ಮುಗಿಯುವುದೇ ಇಲ್ಲ! ಹಾಗೇ ಮಾತುಕತೆಯಾಡುತ್ತಿದ್ದಾಗ…, ನನ್ನ ಬದುಕಿನ ನಷ್ಟಗಳ ಬಗ್ಗೆ ಮಾತು ಬಂತು! ಅದು…, ಹುಟ್ಟಿನಿಂದಲೇ ಶುರುವಾಗಿದ್ದು!!! ನಾನು ಹುಟ್ಟಿದ ವರ್ಷ…, ಜನಸಂಖ್ಯಾ ನಿಯಂತ್ರಣಕ್ಕೆ ಅನುಗುಣವಾಗಿ ನಿಯಮವೊಂದು ಚಾಲ್ತಿಗೆ ಬಂತು! ಎರಡಕ್ಕಿಂತ ಹೆಚ್ಚಿನ ಮಕ್ಕಳಾದರೆ…, ಅವರಿಗೆ ಸರಕಾರದ ಅನುಕೂಲತೆಗಳು ಸಿಕ್ಕುವುದಿಲ್ಲ!!! ಇಬ್ಬರು ಅಕ್ಕಂದಿರ ನಂತರ ನಾನು ಮೂರನೇಯವ! ನಿಯಮ ಚಾಲ್ತಿಗೆ ಬಂದಿದ್ದು ನಾನ...

ವಯಸ್ಸು!

ಕನ್ನಡಿಯ ಮುಂದೆ ನಿಂತು ನೋಡಿಕೊಳ್ಳುತ್ತಿದ್ದೆ. ನಲವತ್ತೊಂದು ವರ್ಷಕ್ಕೇ ಅರ್ಧ ಕೂದಲು ಬೆಳ್ಳಗಾಗಿದೆ. ಹಾಗೆಂದು ದೇಹಾರೋಗ್ಯವೋ…, ಕೂದಲಿಗೆ ಬಣ್ಣ ಹಚ್ಚಿದರೆ ವಯಸ್ಸು ಇಪ್ಪತ್ತೈದಕ್ಕೆ ಇಳಿಯುವಷ್ಟು! ಬಣ್ಣ ಹಚ್ಚಿಕೊಳ್ಳುವುದಿಲ್ಲ ಅನ್ನುವ ತೀರ್ಮಾನ! ಒಬ್ಬಂಟಿ ಅಲೆಮಾರಿಗೆ ಯಾಕೆ ವಯಸ್ಸನ್ನು ಇಳಿಸುವ ಇರಾದೆ? ಕನ್ಯಾಕುಮಾರಿಗೆ ಬಂದಿದ್ದೆ. ಪುಸ್ತಕವೊಂದನ್ನು ಬರೆಯಲು..., ಸ್ವಲ್ಪ ದಿನ ಇಲ್ಲಿಯೇ ಇದ್ದು ಇಲ್ಲಿಯ ಜನರಬಗ್ಗೆ, ಇತಿಹಾಸ- ಐತೀಹ್ಯಗಳ ಬಗ್ಗೆ ತಿಳಿದುಕೊಳ್ಳಬೇಕೆಂಬ ಉದ್ದೇಶ. ಒಂದು ವರ್ಷಕ್ಕೆ ಅನ್ನುವ ಕರಾರಿನಲ್ಲಿ ಮನೆಯೊಂದನ್ನು ಬಾಡಿಗೆಗೆ ತೆಗೆದುಕೊಂಡಿದ್ದೆ. ಮೂರುತಿಂಗಳ ಬಾಡಿಗೆ ಅಡ್ವಾನ್ಸ್ ಕೊಟ್ಟಿದ್ದೇನೆ. ಬಂದು ತಿಂಗಳು ಕಳೆದಿದೆಯಷ್ಟೆ. ಇನ್ನು ಇಲ್ಲಿ…, ಈ ಮನೆಯಲ್ಲಿ ಇರಲಾಗುವುದಿಲ್ಲ. ಕಾರಣ ಪಕ್ಕದ ಮನೆ! ಎಷ್ಟು ವಯಸ್ಸಿರಬಹುದು ಆ ಹುಡುಗಿಗೆ? ಹದಿನಾರು? ಹದಿನೇಳು? ಹದಿನೆಂಟು? ಹತ್ತೊಂಬತ್ತು ದಾಟಿರುವುದಿಲ್ಲ ಅಂದುಕೊಳ್ಳುತ್ತೇನೆ. ಪಾಪ! ಯಾರು ಆ ವ್ಯಕ್ತಿ? ಕರುಣೆಯಿಲ್ಲದೆ ಅಷ್ಟೊಂದು ಹೊಡೆದು ಬಡಿದು ಮಾಡುತ್ತಾನಲ್ಲ? ವ್ಯಕ್ತಿಯನ್ನು ನೋಡಿಲ್ಲ. ಬಂದ ಎರಡನೆಯ ದಿನದಿಂದಲೇ ಕೇಳಿಸತೊಡಗಿತ್ತು…, ಬೆನ್ನಿಗೆ ಗುದ್ದುವ ಶಬ್ದ! ಕೆನ್ನೆಗೋ ಎಲ್ಲಿಗೋ ಹೊಡೆಯುವ ಶಬ್ದ! ಎಳೆದಾಡುವ ಶಬ್ದ! ಹುಡುಗಿ ಬಾಯಿಬಿಟ್ಟು ಅಳಲಾಗದೆ…, ಅಳು ತಡೆಯಲಾಗದೆ ಒದ್ದಾಡುವ ಅರಿವು ಮೂಡಿಸುವ ಶಬ್ದ! ಬೈಗುಳವೇನೂ ಇಲ್ಲ…, ಹೂಂ ಹಾಂ ಅನ್ನುವ ಹೂಂಕಾರಗಳು ಮಾತ...

ಮಾತೃ!

ನೀನು ಹಿಂದುವಲ್ಲ ಅಹಿಂದು, ನಿನ್ನನ್ನು ಅವರು ತುಳಿಯುತ್ತಿದ್ದಾರೆ, ಹಿಂದೂಗಳು ಧರ್ಮಾಂಧರು, ಬಹುಸಂಖ್ಯಾತರು ಅಲ್ಪಸಂಖ್ಯಾತರನ್ನು ನಾಶ ಮಾಡುತ್ತಿದ್ದಾರೆ- ಅನ್ನುವಂತಹ ಹೊಲಸು ರಾಜಕೀಯದ ಆಚೆ ಒಂದು ವೈಯುಕ್ತಿಕ ಜೀವನವಿದೆ. ಶಾಂತ ಗಂಭೀರವಾದ ಜೀವನವದು. ಆ ಜೀವನವನ್ನು ಪರಿಪೂರ್ಣವಾಗಿ ಅನುಭವಿಸಿದವನು ನಾನು. ಇತಿಹಾಸವಾದರೂ, ಮನಶ್ಶಾಸ್ತ್ರವಾದರೂ, ತತ್ತ್ವಚಿಂತನೆಯಾದರೂ ನನಗೆ ನನ್ನದೇ ಆದ ಅಧ್ಯಯನವಿದೆ- ದೃಷ್ಟಿಕೋನವಿದೆ. ಅದು ರೂಪುಗೊಂಡಿದ್ದು ಹೇಗೆ? “ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟದ್ದು ಗಾಂಧೀಜಿ, ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟದ್ದು ಗಾಂಧೀಜಿ!” ಎಂದು ಗಾಂಧಿಜಯಂತಿಯ ದಿನ ಮಾಡಬೇಕಾದ ಭಾಷಣವನ್ನು ಬಾಯಿಪಾಟ ಮಾಡುವಾಗ ಅಪ್ಪನ ಪ್ರಶ್ನೆ ತೂರಿಬಂತು…, “ಹಾಗಿದ್ದರೆ ಸಾವಿರಾರು ಸಂಖ್ಯೆಯಲ್ಲಿ ನೇಣುಗಂಬ ಏರಿದವರು, ಜೈಲುವಾಸ ಅನುಭವಿಸಿದವರು, ಪ್ರಾಣತ್ಯಾಗ ಮಾಡಿದವರು ಯಾರು?” ಪ್ರಶ್ನಾರ್ಥಕವಾಗಿ ಅಪ್ಪನನ್ನು ನೋಡಿದ್ದೆ. “ಇಷ್ಟುಮಾತ್ರ ನೆನಪಿರಲಿ…, ಬ್ರಿಟೀಷರನ್ನು ನಡುಗಿಸಿ, ಅಧಿಕಾರಯುತವಾಗಿ ಪಡೆಯಬಹುದಾಗಿದ್ದ ಸ್ವಾತಂತ್ರ್ಯಕ್ಕೂ, ಅವರು ಕೊಟ್ಟ ಭಿಕ್ಷೆ- ಅನ್ನುವಂತಿರುವ ಈ ಸ್ವಾತಂತ್ರ್ರಕ್ಕೂ ಅಜಗಜಾಂತರ ವ್ಯತ್ಯಾಸವಿದೆ! ಆ ವ್ಯತ್ಯಾಸವೇ ನಿಜವಾದ ಇತಿಹಾಸ!” ನನ್ನ ಕಣ್ಣಿನಲ್ಲಿನ ಕುತೂಹಲವನ್ನು ಕಂಡು ಹತ್ತಿರ ಕುಳಿತ ಅಪ್ಪ…, “ಒಂದೇ ದಿನದಲ್ಲಿ ತಿಳಿದುಕೊಳ್ಳುವಂತದ್ದಲ್ಲ ಇತಿಹಾಸ…, ಅದೊಂದು ಮಹಾಸಾಗರ…, ಮೊಘಲರು ಭಾರತಕ್ಕೆ ಬಂದರು ...

ಹೆಣ್ಣು!

“ಹೊಸ ಕಥೆ ಹಾಕಿದ್ದೆ ಓದಿದ್ಯ?” ಎಂದು ಕೇಳಿದೆ. “ಯಾರ್ ಓದ್ತಾರೆ ನಿನ್ ಕಥೆ!” ಎಂದಳು ಪ್ರಾಣದ ಗೆಳತಿ. ಎದೆ ಧಗ್ ಅಂದಿತು! “ಇದೇನೆ ಹೀಗ್‌ಹೇಳ್ತಿದೀಯ? ನನ್ನ ಕಥೆಗಳು ಅತಿ ಹೆಚ್ಚು ಜನರನ್ನ ತಲುಪಬೇಕು ಅನ್ತಿದ್ದವ್ಳು…?” ಎಂದೆ. “ಇನ್ನೇನ್ ಮತ್ತೆ? ಅವಳು ಅವಳು ಅಂತ ಅದೇ ಅವಳ ಕಥೆಗಳು!” ಎಂದಳು. “ಇದೂ ಅದೇ ಕಥೆ ಅನ್ತೀಯ?” ಎಂದೆ. “ಇನ್ನೇನ್‌ಬರ್ದಿರ್ತೀಯ? ಅದೇ ಆಗಿರುತ್ತೆ!” ಎಂದಳು. “ಅವಳು ಅವಳು ಅನ್ನೋ ಎಷ್ಟು ಕಥೆಗಳು ಓದಿದೀಯ?” ಎಂದೆ. “ಹೇ…, ಹೋಗೋ ಸುಮ್ನೆ! ತಲೆ ತಿನ್ಬೇಡ!” ಎಂದಳು. “ಸರಿಬಿಡು…, ಇನ್ಮೇಲೆ ಕಥೇನೆ ಬರೆಯಲ್ಲ!” ಎಂದೆ. “ಪಾಪ ನಿನ್ನ ಹೆಣ್ಣು ಅಭಿಮಾನಿಗಳಿಗೆ ಬೇಜಾರಾಗಲ್ವ? ಆ ಅವಳಿಗೆ ಬೇಜಾರಾಗಲ್ವ? ಓದಿ ಸಪೋರ್ಟ್‌ಮಾಡೋಕೆ ಅದೆಷ್ಟು ಜನ ಇದಾರೆ! ಬೇರೆಯವರ ಪ್ರತಿ ಕಮೆಂಟ್‌ಗೂ ನಿನ್ನ ಕಡೆಯಿಂದ ಉತ್ರ ಕೊಡೋಕೆ ಎಷ್ಟು ಜನ! ನಾನೊಬ್ಳು ಓದಿಲ್ಲ ಅಂದ್ರೆ ನಿನಗೇನೂ ಲಾಸಿಲ್ಲ ಬಿಡು!” ಎಂದಳು. “ಅಂದ್ರೆ…, ಕಥೆ, ಕಥೆಗೆ ಬಂದ ಅಷ್ಟೂ ಕಮೆಂಟ್ ಓದಿದೀಯ ಅಂತ ಆಯ್ತು?” ಎಂದೆ. ಮೂತಿ ತಿರುಗಿಸಿ ಹೋಗಿದ್ದಾಳೆ! ಇನ್ನು ಇವಳಿಗಾಗಿ ಅವಳ ಕಥೆಯನ್ನು ಸಾಕುಮಾಡಿ ಬೇರೊಬ್ಬಳ ಕಥೆ ಹುಡುಕಬೇಕಾಗಿದೆ!

ಕೋಲ್ಡ್ ಬ್ಲಡೆಡ್!

ಇಂದು ಅವಳಿಲ್ಲ. ಅದಕ್ಕೇ ಈ ಕಥೆ! ಅವಳ ಪರಿಚಯವೇ ನನ್ನ ಕಥೆಗಳ ಮೂಲಕ. “ನಿನ್ನ ಕಥೆಗಳನ್ನು ಓದಿ ನನಗನ್ನಿಸೋದು…, ನೀನೆಂತಾ ಕೋಲ್ಡ್‌ಬ್ಲಡೆಡ್ ಮನುಷ್ಯ ಅಂತ! ಯಪ್ಪ…, ಅದು ಹೇಗೆ ಬರೀತೀಯ ಅಷ್ಟು ರಿಯಲಿಸ್ಟಿಕ್ ಆಗಿ? ನೀನೇ ಕೊಲೆ ಮಾಡಿದಂತೆ?” ಎಂದಿದ್ದಳು. ನಕ್ಕೆ. ಒಬ್ಬ ಕಥೆಗಾರನಿಗೆ ಇದಕ್ಕಿಂತ ಯಾವ ಕಾಂಪ್ಲಿಮೆಂಟ್ ಬೇಕು? “ಇಷ್ಟವಾಯಿತ ಕಥೆ?” ಎಂದೆ. “ತುಂಬಾ…, ಕಣ್ಣಿಗೆ ಕಟ್ಟಿದಂತಿದೆ!” ಎಂದಳು. “ಆದರೆ ಎಲ್ಲರೂ ನನ್ನ ಕಥೆ ಅಷ್ಟು ಸುಲಭವಾಗಿ ಅರ್ಥವಾಗುವುದಿಲ್ಲ ಅನ್ನುತ್ತಾರಲ್ಲ?” ಎಂದೆ. “ಅದು ನಿಜ! ನನಗೂ ಮೊದಮೊದು ಕಷ್ಟವಾಗುತ್ತಿತ್ತು! ಎರಡು ಮೂರು ಸಾರಿ ಓದಬೇಕಿತ್ತು. ಅಷ್ಟು ಸೂಕ್ಷ್ಮ ನಿನ್ನ ಕಥೆಗಳು! ಅದರಲ್ಲೂ ಕ್ರೈಂ ಕಥೆಗಳು! ಆ ಸಸ್ಪೆನ್ಸ್‌…, ಅದು ಹಾಗೇ ಇರಬೇಕು! ನಿನ್ನ ಶೈಲಿಯ ಪರಿಚಯವಾದಮೇಲೆ ಈಗ ಪರವಾಗಿಲ್ಲ.” ಎಂದಳು. ನಾನೇನೂ ಮಾತನಾಡಲಿಲ್ಲ. ಅವಳೇ…, “ಒಂದು ವಾಕ್ಯ ಇರಲಿ…, ಒಂದು ಪದ ಬಿಟ್ಟು ಹೋದರೆ, ಒಂದು ಕಾಮ, ಫುಲ್‌ಸ್ಟಾಪ್ ಬಿಟ್ಟುಹೋದರೆ ಪೂರ್ತಿ ಕಥೆಯೇ ಅರ್ಥವಾಗದಷ್ಟು ಕ್ಲಿಷ್ಟ! ಆತುರಾತುರವಾಗಿ ಓದುವ ಕಥೆಗಳಲ್ಲ ನಿನ್ನದು!” ಎಂದಳು. ನಾನೇನೂ ಮಾತನಾಡಲಿಲ್ಲ. ಕ್ಷಣಬಿಟ್ಟು ಅವಳೇ…, “ಆದರೂ ಹೇಗೋ….? ಆ ಇಂಟಿಮೇಟ್ ಸೀನ್‌ಗಳಿರುವ ಕಥೆಗಳು ಬರೆಯುತ್ತೀಯಲ್ಲಾ…? ಅದು ನಿನ್ನದೇ ಅನುಭವ ಅನ್ನಿಸೋದು! ಅದರಲ್ಲೂ ನೀನು ಬರೆಯೋದೋ…, ಒಬ್ಬನೇ ಎಲ್ಲಿಗಾದರೂ ಹೋಗಿ ಬಂದಮೇಲೆ!” ಎಂದಳು. ನಿಜಕ್ಕೂ ನಗು ಬಂತು. “ತಾಯಿ…, ನನಗೂ ಮದುವ...

ಅವಳೆಂಬ ವಾರಿಧಿ!

ಬಸ್ಸಿನಿಂದ ಇಳಿಯುತ್ತಿರುವ ಅವಳನ್ನೇ ನೋಡುತ್ತಿದ್ದೆ. ಇಳಿಯುವಾಗಲೇ ಒಮ್ಮೆ ನನ್ನನ್ನು ನೋಡಿದವಳ ಕಣ್ಣಿನ ಹೊಳಪು…, ಇಳಿದು ನನ್ನೆಡೆಗೆ ಹೆಜ್ಜೆ ಹಾಕಿದಳು. ಬೂದಿಬಣ್ಣದ ಸೀರೆ ಎಷ್ಟು ಚಂದಕ್ಕೆ ಉಟ್ಟಿದ್ದಾಳೆಂದರೆ.., ಸೀರೆ ಉಡುವುದರಲ್ಲಿ ಪಿಹೆಚ್‌ಡಿ ಮಾಡಿದ್ದಾಳೇನೋ ಅನ್ನಿಸುವಂತಿತ್ತು! ಹತ್ತಿರಕ್ಕೆ ತಲುಪುತ್ತಿದ್ದಂತೆ ಮುಗುಳುನಗು ಅರಳುನಗುವಾಗಿ…, ಪ್ರಪಂಚವನ್ನು ಮರೆತೆ! ಸುತ್ತಲಿನ ಪರಿಸರದ ಪರಿವೆಯೇನೂ ನಮಗಿರಲಿಲ್ಲ. ಎರಡೂ ಕೈಯಗಲಿಸಿದೆ- ಗಿಣಿಮರಿಯಂತೆ ತೆಕ್ಕೆಯೊಳಗೆ ಸೇರಿಕೊಂಡಳು. ಬಿಗಿದಪ್ಪಿ ತಲೆಯಮೇಲೊಂದು ಮುತ್ತು ಕೊಟ್ಟೆ. ಮಾತಿಲ್ಲ. ಮೌನದಷ್ಟು ಅರ್ಥವತ್ತಾದ ಸಂವಹನವಿದೆಯೇ? ಕೈಕೈಹಿಡಿದು ನಡೆಯತೊಡಗಿದೆವು. ದೂರದಲ್ಲಿ ಸಮುದ್ರದ ಮೊರೆತ ಕೇಳಿಸುತ್ತಿತ್ತು. ಇಬ್ಬರ ಮನೆಯಿಂದಲೂ ಸುಮಾರು ಮುನ್ನೂರು ಕಿಲೋಮೀಟರ್ ದೂರದ ಸಮುದ್ರತೀರ! ನಿಧಾನಕ್ಕೆ ನಡೆಯುವಾಗ…, ಮಧ್ಯೆ…, ಇಬ್ಬರೂ ಹೇಳಿಕೊಂಡಂತೆ, ಒಂದೇ ಸಮಯಕ್ಕೆ ಪರಸ್ಪರ ಮುಖ ನೋಡುವುದು, ಮುಗುಳುನಗುವುದು…. ಇಬ್ಬರ ನಾಡಿಮಿಡಿತ- ಇಬ್ಬರಿಗೂ ಗೊತ್ತು. ಸಮುದ್ರದ ಸಮೀಪಕ್ಕೆ ತಲುಪುತ್ತಿದ್ದಂತೆ…, ಬೋರ್ಗರೆಯುತ್ತಿರುವ ಅಲೆಗಳು ಅಬ್ಬರಿಸಿ ಬಂದು ಬಂಡೆಗಳಿಗೆ ಅಪ್ಪಳಿಸಿ ನೊರೆನೊರೆಯಾಗಿ ಮರಳುತ್ತಿದ್ದವು. ನಡು ಮಧ್ಯಾಹ್ನವಾದ್ದರಿಂದ ಅಷ್ಟೊಂದು ಜನಸಂದಣಿಯಿರಲಿಲ್ಲ. ಮರಳಿಗೆ ಕಾಲೂರಿದಾಗ ಕೆಂಡದ ಮೇಲೆ ಕಾಲಿಟ್ಟ ಅನುಭವ…, ಅದರ ಅರಿವು ನಮಗಿರಲಿಲ್ಲ. ಯಾರಾದರೂ ನಮ್ಮನ್ನೋ ನಾವು ಯಾರನ್ನೋ ಗಮನಿಸಲಿಲ್...

ದಾರಿಯಲ್ಲಿ ಸಿಕ್ಕವಳು!

ಬರೆಯುತ್ತಿರುವ ಕಥೆಗೂ ಅವಳಿಗೂ ಏನೂ ಸಂಬಂಧವಿಲ್ಲ! ಅವಳು ಹೇಳಿದ್ದರಿಂದ ಬರೆಯುತ್ತಿದ್ದೇನೆ ಅನ್ನುವುದಷ್ಟೇ ಈ ಪೀಠಿಕೆಯ ಉದ್ದೇಶ! ಅ-ವ-ಳು ಹೇ-ಳಿ-ದ್ದ-ರಿಂ-ದ ಬರೆದೆ ಅನ್ನುವಲ್ಲಿ ಅವಳಿಗೆ ನಾನು ಕೊಡುವ ಮಹತ್ವವಿದೆ. ಅಮ್ಮನ ಹೊರತು ಯಾರೊಬ್ಬರಿಗೂ- ಯಾರೊಬ್ಬರ ಮಾತಿಗೂ ಬೆಲೆ ಕೊಡದ ನಾನು 'ಅವಳು' ಹೇಳಿದ್ದರಿಂದ ಕಥೆ ಬರೆಯುತ್ತಿದ್ದೇನೆಂದರೆ…. ಅರ್ಥವಾಯಿತೇ? ಏನಾದರೂ ಬರೆಯಬೇಕು ಅನ್ನಿಸದಿರುವುದು, ಕಥೆಯೇ ಹೊಳೆಯದಿರುವುದು ಸೋಮಾರಿತನವಾ? ಅಲ್ಲ- ಕಥೆ ಹೊಳೆದು ಅದನ್ನು ಬರೆಯದೇ ಇರುವುದು ಸೋಮಾರಿತನ! ಆದ್ದರಿಂದ ಕಥೆ ಬರೆಯಲಿಲ್ಲ ಅನ್ನುವ ಕಾರಣಕ್ಕೆ ನಾನು ಸೋಮಾರಿಯಲ್ಲ! ಆದರೆ.., ಕಥೆ ಬರೆಯುವ ಯೋಚನೆಯೇ ಇಲ್ಲದವನಿಗೆ…, ಅವಳು ಹೇಳಿದ ಮಾತ್ರಕ್ಕೆ ಕಥೆ ಹೊಳೆಯುವುದೆಂದರೆ- ಅರ್ಥವೇನು? ವಿಚಿತ್ರ! ಅಥವಾ…, ನನ್ನೊಳಗೊಂದು ಕಥೆ ಮೊಳೆತ ಸಮಯದಲ್ಲೇ ಅವಳು ಬರೆಯಲು ಹೇಳಿರಬಹುದ? ಇನ್ನುಮುಂದೆ ಕಥೆಯೇ ಬರೆಯುವುದಿಲ್ಲ- ಅನ್ನುವಂತೆ ಇದ್ದವನಿಗೆ ಕಥೆ ಬರೆಯಲೊಂದು ನೆಪ…? ಹಾಗೆಂದು ಅವಳು ಹೇಳಿದಾಗಲೆಲ್ಲಾ ಕಥೆ ಬರೆಯುತ್ತೇನೆಯೇ- ಅನ್ನುವಲ್ಲಿ ಉತ್ತರವಿದೆ!! ಅದು ಅವಳು ಯೋಚಿಸಬೇಕಾದ ವಿಷಯ! ಅವಳಮೇಲಿನ ನನ್ನ "ಇದ"ನ್ನು ಪದೇ ಪದೇ ಪರೀಕ್ಷಿಸಬೇಕೋ ಬೇಡವೋ ಅನ್ನುವುದು! ಹಾಗೆಯೇ…, ಬರೆಯುತ್ತಿರುವ ಈ ಕಥೆ… ಪರಿಪೂರ್ಣವಾಗಿ- ಕಾಲ್ಪನಿಕ ಸತ್ಯ! ಇದುವರೆಗೂ ಯಾರೊಂದಿಗೂ ಹೇಳದೆ ಮುಚ್ಚಿಟ್ಟಿದ್ದ "ರಹಸ್ಯ!” * ಮೂರುನಾಲ್ಕು ದಿನದ ಸುತ್ತಾಟದ...