ಕರ್ಮ
ಕರ್ಮ ! “ ಇನ್ನೂ ಸಾಕಾಗಲಿಲ್ಲವೇನೋ - ಕರ್ಮ !” " ಕರ್ಮ ಎಂದರೇನು ?" " ಕೇಳಿದ್ದಕ್ಕೆ ಉತ್ತರಕೊಡು - ನಿನ್ನ ಪ್ರಶ್ನೆಗೂ !" “ ಸಾಕಾಗುವಂತಹುದೇ ಅದು ?” “ ಇನ್ನೂ ಎಷ್ಟುದಿನ ....? ಪ್ರೇಮ ಪ್ರೇಮವೆಂದು ?” “ ಎಷ್ಟು ದಿನ ಎಂದರೆ ?” “ ಹಾ ... ಇನ್ನೂ ಹರೆಯದ ಹುಡುಗರಂತೆ .... ಹೆಣ್ಣು - ಪ್ರೇಮ ಎಂದು ?” “ ನಿನಗೆ ಗೊತ್ತೇ ?” “ ಏನು ?” “ ಪ್ರೇಮಕ್ಕೂ ಆಧ್ಯಾತ್ಮಕ್ಕೂ ನೇರವಾದ ಸಂಬಂಧವಿದೆ !” “ ನಿನ್ನ ತಲೆ !” “ ನಿಜಾನೇ .... ಪ್ರೇಮದ - ನಿನ್ನ ಹಿಂದೆ ಬಿದ್ದು ನಾನು ಕಂಡುಕೊಂಡ ' ನಿಜ ' ಅದು ! ಪ್ರೇಮಕ್ಕೂ ಆಧ್ಯಾತ್ಮಕ್ಕೂ ನೇರವಾದ ಸಂಬಂಧವಿದೆ ! ಇನ್ನೂ ಹೇಳಬೇಕೆಂದರೆ .... ಪ್ರೇಮವಿಲ್ಲದೆ ಆಧ್ಯಾತ್ಮವಿಲ್ಲ - ಆಧ್ಯಾತ್ಮವಿಲ್ಲದ ಪ್ರೇಮವಿಲ್ಲ !” “ ಸರಿ ... ಹೇಳೀಗ , ಪ್ರೇಮ ಎಂದರೇನು ?” “ ಯಾರಿಗ್ಗೊತ್ತು !” “ ಕರ್ಮ !” “ ಅಲ್ಲವೇ ... ಒಂದೇಬಾರಿಗೆ ಪ್ರೇಮ ಎಂದರೇನೆಂದು ಕೇಳಿದರೆ ಏನು ಹೇಳಲಿ ? ಸಾವೀರಾರು ವರ್ಷಗಳಿಂದ - ಕೋಟ್ಯಾನು ಕೋಟಿ ಗ್ರಂಥಗಳಲ್ಲಿ ಪ್ರೇಮಕ್ಕೆ ವ್ಯಾಖ್ಯಾನವಾಗಿದೆ - ಆಗುತ್ತಿದೆ ! ಆದರೂ ಮುಗಿಯುತ್ತಿಲ್ಲ !” “ ಅದೆಲ್ಲಾ ಗೊತ್ತಿಲ್ಲ ! ನನಗೀಗ ಅರ್ಥಮಾಡಿಸಲೇ ಬೇಕು ನೀನು !” “ ಚಿಕ್ಕ ಹುಡುಗ ಕಣೇ .... ಹಿರಿಯೆ ನೀನು - ನನ್ನ ಪ್ರೇಮ !” “ ಆಹಾ ....! ಬೆಣ್ಣೆ ! ಹೀಗೆ ಹೇಳಿ ಹೇಳಿಯೇ ನಿನ್ನ ಬಿಟ್ಟಿರಲಾರದಂತೆ ಮಾಡಿದ್ದ...