Posts

ನಿಸ್ಸಹಾಯಕತೆ!

ನಿಸ್ಸಹಾಯಕತೆ ಇದೇ ಕಡೆಯ ದಿನ - ಕೊನೆಯ ತೀರುಮಾನ ! ಸಣ್ಣ ಆಸೆಯಿತ್ತು - ಉಳಿಸಿಕೊಳ್ಳುತ್ತಾಳೆಂದು ! ಅವಳನ್ನು ತಪ್ಪು ಹೇಳಲೇ ಅಥವಾ ನನ್ನ ನಿಸ್ಸಹಾಯಕತೆಯನ್ನು ಒಪ್ಪಿಕೋ ಎಂದು ಬೇಡಲೆ ? ಹೇಗೆ ಸಾಧ್ಯ ? ಅವಳೇ ತನ್ನ ನಿಸ್ಸಹಾಯಕತೆಯನ್ನು ನೀನೇ ಒಪ್ಪಿಕೋ ಎಂದಮೇಲೆ ? ಆದರೆ ಅವಳ ಪ್ರಕಾರ ಅವಳದ್ದು ನಿಸ್ಸಹಾಯಕತೆ - ನನ್ನದು ಕೈಯ್ಯಲ್ಲಾಗದ ತನ ! ೧ “ ಐ ಲವ್‌ಯು !” ಎಂದೆ . ನಿಟ್ಟಿಸಿ ನೋಡಿದಳು . ಕಣ್ಣುಗಳಲ್ಲಿ ಹೊಳಪು ! ನನಗೆ ನಂಬಿಕೆಯಿತ್ತು ಅವಳು ಒಪ್ಪಿಕೊಳ್ಳುತ್ತಾಳೆಂದು ! ರಾಂಕ್ ಸ್ಟೂಡೆಂಟ್ - ನೋಡಲೂ ಪರವಾಗಿಲ್ಲ ! ಒಪ್ಪಿಕೊಳ್ಳದಿರಲು ಕಾರಣವೇನೂ ಇರಲಿಲ್ಲ ! “ ಲವ್‌ಯೂ ಟೂ !” ಎಂದಳು . ದಿನಗಳುರುಳಿದವು ! ಕಾಲೇಜು ಜೀವನ ಮುಗಿಯಿತು ! ೨ “ ಐ ಲವ್‌ಯು !” ಎಂದೆ - ಎಂದಿನಂತೆ . ಅವಳನ್ನು ಕಂಡಾಗಲೆಲ್ಲಾ ಪ್ರೇಮ ಉಕ್ಕುತ್ತದೆ .... “ ನೀನು ಬೇರೆ ಹೆಣ್ಣುಮಕ್ಕಳನ್ನು ಯಾಕೆ ನೋಡುತ್ತೀಯ ?” ಎಂದಳು . “ ನೀನು ಬೇರೆ ಹುಡುಗರನ್ನು ನೋಡುತ್ತೀಯಲ್ಲ ?” “ ಅದು ಬೇರೆ ಇದು ಬೇರೆ !” ಎಂದಳು . “ ಹೇಗೆ ? ಅದೊಂದು ಆಯಾಚಿತ ವರ್ತನೆ ಅಷ್ಟೆ ಹೊರತು - ಗಂಡು ಹೆಣ್ಣನ್ನು ಹೆಣ್ಣು ಗಂಡನ್ನು ನೋಡುವುದು ತಪ್ಪೇ !” “ ಇಲ್ಲ ... ನೀನು ಬದಲಾಗುತ್ತಿದ್ದೀಯ ! ನಿನಗೆ ನಾನು ಸೆಟ್ ಆಗುವುದಿಲ್ಲ !” ಎಂದಳು . ೩ “ ಐ ಲವ್‌ಯು !” ಎಂದೆ - ಅವಳ ಕಣ್ಣಿನಾಳಕ್ಕೆ ದಿಟ್ಟಿಸಿ ! “ ನಿನಗೆ ನಿನ್ನ ಗುರಿಯೇ ಹೆಚ್ಚೆ ?...

ತೀರ್ಮಾನ!

ತೀರ್ಮಾನ ೧ ತೀರ್ಮಾನ ! ತೆಗೆದುಕೊಳ್ಳುವುದು ಎಷ್ಟು ಕಷ್ಟವೋ , ಅಳವಡಿಸಿಕೊಳ್ಳುವುದು - ಅದಕ್ಕನುಗುಣವಾಗಿ ಬದುಕುವುದು ಅದಕ್ಕಿಂತ ಕಷ್ಟ ! ನಲವತ್ತು ವರ್ಷ ಮುಂಚೆ ನಾನು ತೆಗೆದುಕೊಂಡ ತೀರುಮಾನ .... ತೃಪ್ತಿಯಿದೆ ಈಗ ! ಅಸಾಧ್ಯ ಪ್ರೇಮ ಅವಳಿಗೆ ನನ್ನಲ್ಲಿ . ಹತ್ತು ವರ್ಷದ ಪ್ರೇಮ - ಅವಳ ಆಸೆಯಂತೆ ಅವಳಿಗೆ ಟೀಚರ್ ಕೆಲಸ ಸಿಕ್ಕಿ ಮದುವೆಯಲ್ಲಿ ಸಾರ್ಥಕತೆಯನ್ನು ಹೊಂದಿದಾಗ ಭವಿಷ್ಯದಬಗ್ಗೆ ಯಾವ ಯೋಚನೆಯೂ ಇರಲಿಲ್ಲ ! ನಾನಾಗ ಮುಂಬೈಯಲ್ಲಿದ್ದೆ . ಹದಿನೈದನೇ ವರ್ಷದಲ್ಲಿ ಜೀವನೋಪಾಯಕ್ಕಾಗಿ ಕಳ್ಳತನದಲ್ಲಿ ರೈಲುಹತ್ತಿ ಬಂದವನು .... ತಮ್ಮಂದಿರ ಸಹಕಾರದೊಂದಿಗೆ ಸ್ವಂತವಾಗಿ ಅಂಗಡಿಯೊಂದನ್ನು ಪ್ರಾರಂಭಿಸುವಷ್ಟು ಮಟ್ಟಿಗೆ ಬೆಳೆದಿದ್ದೆ ! ಮದುವೆಯಾದಾಗಲೇ ನಮಗೊಂದು ವಾಸ್ತವದ ಅರಿವಾಗಿದ್ದು ! ನಮ್ಮ ಬದುಕು - ‘ ನಾನೊಂದು ತೀರ , ನೀನೊಂದು ತೀರ !’ ದುಃಖ ದುಮ್ಮಾನಗಳಿಂದ - ಅಪಮಾನ ಅಸಹಕಾರಗಳಿಂದ ತುಂಬಿದ್ದ ಬದುಕು ನಮ್ಮದು ! ಹಠ - ಗೆಲ್ಲಬೇಕು , ಅಂದುಕೊಂಡಿದ್ದು ಸಾಧಿಸಬೇಕೆಂಬ ಹಠ - ಅವಳನ್ನು ಟೀಚರನ್ನಾಗಿಸಿತ್ತು - ನನ್ನನ್ನು ಸ್ವಂತ ಅಂಗಡಿಯ ಮಾಲೀಕನನ್ನಾಗಿಸಿತ್ತು ! ಈಗ .... ಯಾರಾದರೊಬ್ಬರು ಬಿ - ಟ್ಟು - ಕೊ - ಡ - ಬೇ - ಕು ! ಸ್ವಲ್ಪ ದಿನ ನೋಡೋಣ ಎಂದು ನಾನು ಮುಂಬೈಗೆ ಹಾರಿದೆ . ಎರಡು ರೀತಿಯ ಸಮಸ್ಯೆ ಎದುರಾಯಿತು ! ಒಂದು - ಮದುವೆಯಾದಾಗಲೇ ತಿಳಿದದ್ದು ನಾವು ಎಷ್ಟು ಆಳವಾಗಿ ಪ್ರೇಮಿಸುತ್ತಿದ್ದೇವೆ...

ಜ್ಞಾನಾಜ್ಞಾನ

ಜ್ಞಾನಾಜ್ಞಾನ ! ಏನನ್ನೂ ತಿಳಿದುಕೊಳ್ಳದಿರುವುದು ಅಜ್ಞಾನವಲ್ಲ ! ತಿಳಿದುಕೊಳ್ಳಬೇಕೆಂಬ ಕುತೂಹಲವೇ ಇಲ್ಲದಿರುವುದು , ತಾನು ತಿಳಿದುಕೊಂಡಿರಿವುದೇ ಸರಿ ಅನ್ನುವ ಅಹಂ - ಅಜ್ಞಾನ ! ಜ್ಞಾನಿಯಾಗುವುದರಲ್ಲಿ ಎರಡು ವಿಧ ! ಒಂದು ಹನುಮಂತನಂತೆ ! ಈತನಿಗೆ ಸಂಶಯಗಳಿಲ್ಲ ! ಗುರುಗಳು - ಹಿರಿಯರು ಹೇಳಿದ್ದನ್ನು ಹಾಗೆಯೇ ಒಪ್ಪಿಕೊಂಡು ಬಿಡುತ್ತಾನೆ ! ನಂತರ ಆತ್ಮವಿಮರ್ಶೆಯ ಮೂಲಕ ಅದನ್ನು ಸ್ಥಿರೀಕರಿಸುತ್ತಾನೆ ! ಎರಡು ಅರ್ಜುನನಂತೆ ! ಈತನಿಗೆ ಸಂಶಯಗಳೋ ಸಂಶಯಗಳು ! ಈತನ ಗೋಳು ಮುಗಿಯುವುದಿಲ್ಲ ! ಶ್ರೀಕೃಷ್ಣ ಪರಮಾತ್ಮನಂತಾ ಪುಣ್ಯಾತ್ಮ ಸಿಕ್ಕಿದ್ದು ಈತನ ಪೂರ್ವಜನ್ಮ ಸುಕೃತ ! ನಾನು ಅರ್ಜುನನಂತೆ ! ನನ್ನ ಗೋಳು ತಡೆದುಕೊಳ್ಳುವುದು ಸ್ವಲ್ಪ ಕಷ್ಟ ! ಆದರೆ ಶ್ರೀಕೃಷ್ಣ ಪರಮಾತ್ಮನಂತಾ ಹಲವು ಜೀವಗಳು ದೊರಕಿದ್ದು ನನ್ನ ಪುಣ್ಯ ! ಪ್ರಸ್ತುತಾ ಒಂದು ಗೊಂದಲದಲ್ಲಿದ್ದೇನೆ ! ಗೊಂದಲಕ್ಕೆ ಕಾರಣ ನನ್ನದೇ ಆದ ನಂಬಿಕೆ ! ಪುಸ್ತಕವೊಂದನ್ನು ಓದಿದೆ ! ಆಶ್ಚರ್ಯವಾಯಿತು ! ಇಷ್ಟು ಮಟ್ಟಿನ ನಿಯತ್ತಿನಿಂದ ಪುಸ್ತಕ ಬರೆಯಬಹುದೇ ಅನ್ನುವ ಆಶ್ಚರ್ಯವದು ! ಯಾವುದೇ ಲೇಖಕನಿಗಾದರೂ ಯಾವುದೋ ಒಂದು ಪಾತ್ರದಕಡೆಗೆ ಒಲವು ಹೆಚ್ಚಿರುತ್ತದೆ ! ಆದ್ದರಿಂದ ಸಣ್ಣಪುಟ್ಟ ಕೊರತೆಗಳನ್ನು ಮುಚ್ಚಿಟ್ಟು ಆ ಪಾತ್ರವನ್ನು ವೈಭವೀಕರಿಸುತ್ತಾನೆ - ತ್ತೇನೆ ! ಆದರೆ ಈ ಪುಸ್ತಕದಲ್ಲಿ ಹಾಗಿಲ್ಲ . ನಾಯಕನಾದರೂ ತನ್ನ ಕೊರತೆಯನ್ನು ಒಪ್ಪಿಕೊಳ್ಳುವಂತೆ - ಆ ಪುಸ್...

ಕಥೆಗಾರನ ಆತ್ಮ ವಿಶ್ಲೇಷಣೆ!

ಕಥೆಗಾರನ ಆತ್ಮ ವಿಶ್ಲೇಷಣೆ ! “ ನನ್ನ ಪ್ರಾಮಾಣಿಕ ಅಭಿಪ್ರಾಯ : ಕಥೆ ಇಷ್ಟವಾಗಲಿಲ್ಲ !” ಎಂದು ಕಮೆಂಟ್ ಮಾಡಿದರು . ಯೋಚನೆಗಿಟ್ಟುಕೊಂಡಿತು ! ಏನು ಮಾಡಲಿ ? ಬೇರೆಯವರ ಅಭಿಪ್ರಾಯವೂ ನೊಡೋಣವೆಂದು ಕಾದೆ ! ಒಳ್ಳೆಯ ಅಭಿಪ್ರಾಯಗಳೇ ಬಂದವು ! ಆದರೂ ..., “ ನಿಮ್ಮ ಪ್ರಾಮಾಣಿಕ ಅಭಿಪ್ರಾಯಕ್ಕೆ ನನ್ನ ತೆರೆದ ಮನದ ಧನ್ಯವಾದಳು ಸರ್ ... ಇನ್ನೂ ಎಷ್ಟು ದಿನಬೇಕೋ ಪಕ್ವವಾದ ಚಂದದ ಕಥೆ ಬರೆಯಲು .... ಯಾಕೆ ಇಷ್ಟವಾಗಲಿಲ್ಲವೋ ಹೇಳಿದ್ದರೆ ಉಪಕಾರವಾಗುತ್ತಿತ್ತು ...! ಕಥಾವಸ್ತುವೇ ? ಬರೆದ ಶೈಲಿಯೇ ?” ಎಂದು ರೀಕಮೆಂಟ್ ಮಾಡಿದೆ . “ ಕಥಾ ಹಂದರ ಶಿಥಿಲ , ಪಾತ್ರ ಪೋಷಣೆ ಅಷ್ಟಕ್ಕಷ್ಟೆ , ಬರವಣಿಗೆಯ ಶೈಲಿ ಅನಾಕರ್ಷಕ ....! ಇವಿಷ್ಟೂ ನನ್ನ ವೈಯಕ್ತಿಕ ಅಭಿಪ್ರಾಯ ಅಷ್ಟೆ !” ಎಂದು ಉತ್ತರಿಸಿದರು . ವಿಶ್ಲೇಷಣೆ ಶುರವಾಯಿತು ! ಕಥೆಯನ್ನು ಮತ್ತೊಮ್ಮೆ ಓದಿನೋಡಿದೆ . ಅಷ್ಟು ಬೇಗ ಅರ್ಥವಾಗುವುದಿಲ್ಲ ! ಹಾಗೆಂದು ಕಥೆಯಲ್ಲಿ ಏನೂ ಇಲ್ಲವೆಂದಲ್ಲ - ಕಠಿಣ ! ನಿಜ .... ಕಥೆಯಿಂದ ಕಥೆಗೆ ನನ್ನ ಶೈಲಿ ಕಠಿಣವಾಗುತ್ತಿದೆ ! ಹಾಗೆಂದು ಅದನ್ನು ಬದಲಿಸಲು ನಾನೂ ತಯಾರಿಲ್ಲ ! ಇದನ್ನು ಹೇಗೆ ತೆಗೆದುಕೊಳ್ಳಲಿ ....? ಅವರು ಕಮೆಂಟ್ ಮಾಡಿರುವುದು ನಾನು ಬರೆದ ಅರವತ್ತೇಳನೇ ಕಥೆಗೆ ! ಬರೆದ ಕಥೆಗಳೆಲ್ಲಾ ಎಲ್ಲರಿಗೂ ಇಷ್ಟವಾಗಬೇಕೆಂದಿಲ್ಲ ! ಅರವತ್ತೇಳು ಕಥೆಗಳಲ್ಲಿ ಇದೇ ನನ್ನ ಕೆಟ್ಟ ಕಥೆಯಾಗಿರಲೂ ಬಹುದು ... ನಿಜ ..., ಅರಗಿಸಿಕೊ...

ಅನೂಹ್ಯ

ಅನೂಹ್ಯ ! ೧ “ ಅನೂಹ್ಯವಾಗಿರಬೇಕು !” “ ಏನು ? ಕಥೆಯೋ ? ಜೀವನವೋ ?” “ ಜೀವನ ಬಿಡು - ಯಾವಾಗಲೂ ಅನೂಹ್ಯವೇ ...! ಕಥೆ - ಕಥೆಯ ಕ್ಲೈಮಾಕ್ಸ್ !” “ ನನ್ನ ಯಾವ ಕಥೆಯಲ್ಲಿನ ಕ್ಲೈಮಾಕ್ಸ್ ನೀನು ಊಹಿಸಿದ್ದೆ ?” “ ಎಲ್ಲಾ ಸಂಭಾಷಣೆ - ತತ್ತ್ವ ! ಬೋರು !” “ ಈಗೇನು ಮಾಡಲಿ ?” “ ವ್ಯತ್ಯಸ್ತವಾದ ಕಥೆಯೊಂದನ್ನು ಬರಿ !” “ ಹಾಗಿದ್ದರೆ ನಾನು ಬರೆದ ಕಥೆಗಳಲ್ಲಿ ವ್ಯತ್ಯಸ್ತತೆ ಇರಲಿಲ್ಲವೇ ?” “ ಅದು ಬಿಡು ! ಅಸ್ತಿರವಾದ ಜೀವನದ ಬಗ್ಗೆ ಬರಿ ...! ಅವತ್ತು ಹೇಳಿದಂತೆ .... ಭಾವಗಳಿಗೆ ಒತ್ತು ಕೊಡದೆ - ಘಟನೆಗಳಿಗೆ ಒತ್ತು ಕೊಟ್ಟು ಬರಿ - ಓದುಗರು ಖುಷಿಯಾಗುತ್ತಾರೆ ! ಜೊತೆಗೆ - ಪುಸ್ತಕ ಮಾತ್ರವಲ್ಲ ನಮ್ಮ ಉದ್ದೇಶ - ಸಿನೆಮಾ ಕೂಡ ! “ ಅಂದರೆ ?” “ ನಿನ್ನ ಸೈಕಾಲಜಿಯನ್ನು ಪಕ್ಕಕ್ಕೆ ಇಟ್ಟು ನೇರವಾಗಿ ಘಟನೆಗಳನ್ನು ಹೇಳು !” “ ಸರಿ .... ನಾಳೆ ಬೆಳಗ್ಗೆ ಹನ್ನೊಂದು ಗಂಟೆಗೆ ಸಿಗೋಣ - ವಿತ್ ಕಥೆ !” ೨ ಅವನಿಗೇನು ? ಹೇಳೋದು ಹೇಳುತ್ತಾನೆ ! ಸೈಕಾಲಜಿ ಇಲ್ಲದ ಕಥೆಯಂತೆ ! ಅದರಲ್ಲೂ ಅನೂಹ್ಯವಾದ ಕ್ಲೈಮಾಕ್ಸ್ ಬೇಕಂತೆ ! ಬರೆಯುವವನು ನಾನು - ಹೇಳೋದೆಷ್ಟು ಸುಲಭ ! ಅವನಿಂದ ಬೀಳ್ಕೊಟ್ಟು ಮನೆಗೆ ಹೊರಟೆ ! ತಲೆತುಂಬಾ ಯೋಚನೆ ! ಏನು ಬರೆಯಲಿ ? ಅವನು ಹೇಳಿದ್ದು - ಘಟನೆಗಳನ್ನು ಬರಿ , ಭಾವ ಬೇಡ - ಎಂದು . “ ರೇಪ್ ನಡೆಯಿತು - ಎಂದು ಬರೆದರೆ ಘಟನೆ !” “ ಅವಳನ್ನು ನೋಡಿದಾಗ ಅವನ ಮನಸ್ಸಿನಲ್ಲೊಂದು ಮಿಂಚ...

ಶಾಂತಿ

ಶಾಂತಿ ! “ ತಮ್ಮನ ಹೆಂಡತಿಗೆ ಬೈದರು ಅಮ್ಮ !” ಎಂದ ರಾಂ . “ ತಮ್ಮ ಏನಂದ ?” “ ಹೆಂಡತಿ ಬಂದ ಮೇಲೆ ಮುಂಚಿನ ಹಾಗೆ ಇಲ್ಲ !” ಎಂದ . “ ಅದು ಮಾಮೂಲಿ ಬಿಡು ! ಹೆಂಡತಿ ಬಂದಮೇಲೆ ಅಪ್ಪ ಅಮ್ಮ ಹೊಸ ರೀತಿಯಲ್ಲಿ ಕಾಣಿಸತೊಡಗುತ್ತಾರೆ ! ಅದುವರೆಗೆ ಇಲ್ಲದ ಕುಂದು ಕೊರತೆ ಎಲ್ಲಾ ಪ್ರಕಟವಾಗುತ್ತದೆ ! ನಾನೂ ಉದಾಹರಣೆಯೇ !” ಎಂದೆ . “ ಇದೆಲ್ಲಾ ನೋಡ್ತಾ ಇದ್ರೆ ಯಾಕಪ್ಪಾ ಮದುವೆ ಅನ್ನಿಸಿಬಿಡುತ್ತೆ !” ಎಂದ . “ ನಿಜಾ ರಾಂ ! ಹೆಂಡತಿ ಬಂದಮೇಲೆ ನಾವೊಂದು ಭ್ರಮಾ ಪ್ರಪಂಚಕ್ಕೆ ಜಾರುತ್ತೇವೆ ! ಅದನ್ನೇ ಋಷಿ ಮುನಿಗಳು ಮಾಯೆ ಎಂದರೇನೋ ...! ಅದರೊಳಗಿರುವಷ್ಟು ದಿನವೂ ನಮಗೆ ಹಿಂಸೆಯೇ .... ಅದುವರೆಗಿನ ನಮ್ಮ ಸರಿಗಳು ಮದುವೆಯ ನಂತರ ತಪ್ಪು ತಪ್ಪಾಗಿ ಕಾಣತೊಡಗುತ್ತದೆ !” “ ಸುಮ್ಮನೆ ಹೆದರಿಸಬೇಡ !” ಎಂದ ರಾಂ . “ ಎಷ್ಟು ಬೇಗ ನಾವು ಆ ಮಾಯೆಯಿಂದ ಹೊರಬರುತ್ತೇವೆ ಅನ್ನುವುದರ ಮೇಲೆ ನಮ್ಮ ನೆಮ್ಮದಿ ಅಡಗಿದೆ !” ಎಂದೆ . “ ಅದಕ್ಕೇ ಹೆಂಡತಿ ಬಿಟ್ಟು ಹೋದಾಗ ಇಷ್ಟು ಖುಷಿಯಾಗಿದ್ದೀಯ ?” “ ಹೂ ! ಇಲ್ಲಿ ಸಮಸ್ಯೆ ಏನು ಗೊತ್ತಾ ? ನಮ್ಮ ಮಧ್ಯೆ ಇಬ್ಬರೂ ಕಾಂಪ್ರಮೈಸ್‌ಗೆ ರೆಡಿಯಿಲ್ಲ !” ಅವನು ನನ್ನ ಮುಖವನ್ನೇ ನೋಡಿದ . ಮುಂದುವರೆಸಿದೆ . “ ಅವಳಿಗೆ ಗಂಡ ಅವಳ ಗುಲಾಮನಾಗಿರಬೇಕು ! ಅಂದರೆ ಅವಳು ನನ್ನೊಂದಿಗೆ ಇರಬೇಕೆಂದರೆ - ಅವಳು ಹೇಳಿದಂತೆ ಗಲ್ಫ್‌ಗೆ ಹೋಗಬೇಕು ! ಹಣ ಮಾಡಬೇಕು ! ಚಿನ್ನ , ಕಾರು , ಬಂಗ್ಲೋ ತಗೋಬೇಕು ! ...

ಕಂಡುಕೊಂಡ-ಸತ್ಯ

ಕಂಡುಕೊಂಡ - ಸತ್ಯ “ ಸತ್ಯದ ಅರಿವು ಆದಮೇಲೂ ಏನನ್ನು ತಿಳಿಸಲು ಹೊರಟಿದ್ದೀಯ ಮನು ? ಹೀಗೆ ಇದ್ದೆ - ಹೀಗೆ ಆದೆ ಎಂದೋ ಅಥವಾ ...?” ಎಂದರು . “ ಸತ್ಯದ ಅರಿವು ಆಯಿತು ಅಂದುಕೊಳ್ಳುವುದು ಕೂಡ ಮಾಯೆಯೇ ...!” ಎಂದೆ . “ ಮತ್ತೆ ...? ಎಲ್ಲರೂ ಬುದ್ಧನಾಗಲು ಸಾಧ್ಯವಿಲ್ಲ ! ನೂರುವರ್ಷ ಆರೋಗ್ಯವಾಗಿ ಬದುಕಿ ಇಹಲೋಕ ತ್ಯಜಿಸಿದ ನನ್ನ ತಾತ ಬದುಕಿದ್ದಾಗ ಹೇಳುತ್ತಿದ್ದರು .... ಬದುಕಿನ ಜಂಜಾಟದಲ್ಲಿ ಬಿದ್ದ ಮನುಷ್ಯ ಮನೆ , ಆಸ್ತಿ , ಮಡದಿ , ಮಕ್ಕಳು , ಮರ್ಯಾದೆ ಎಂದು ಜೀವನದುದ್ದಕ್ಕೂ ಹೋರಾಡಿ , ಕೊನೆಗೆ ಇದ್ಯಾವುದೂ ನನ್ನದಲ್ಲ ಎಂದು ತಿಳಿದುಕೊಳ್ಳುವಷ್ಟರಲ್ಲಿ ಸಾವು ಸಮೀಪಿಸಿರುತ್ತದೆ ....! ಆದರೆ ಬುದ್ಧ ಯುವಕನಾಗಿದ್ದಾಗಲೇ ಆ ಅರಿವನ್ನು ಗಳಿಸಿಕೊಂಡ - ದೇವರಾದ - ಎಂದು !” ಎಂದರು . ಸ್ವಲ್ಪ ಸಮಯ ಮೌನವಾಗಿದ್ದೆ . ಅವರ ಪ್ರಶ್ನೆಗೆ ಪೂರ್ತಿಯಾಗಿ ಉತ್ತರಿಸಬೇಕೆಂದರೆ - ಸಾವಿರ ಪುಟಗಳ ಗ್ರಂಥವೂ ಸಾಲದು . ಆದರೂ ಉತ್ತರಿಸಬೇಕಾದ್ದು ನನ್ನ ಕರ್ತವ್ಯವಾದ್ದರಿಂದ ...., “ ನಿಮಗೆ ಜನಕ ಮಹಾರಾಜ ಗೊತ್ತೆ ?” ಎಂದೆ . “ ಸೀತೆಯ ತಂದೆ ...!” “ ಹಾ .... ಜನಕ ಮಹಾರಾಜನನ್ನು ರಾಜರ್ಷಿ ಅನ್ನುತ್ತಾರೆ ! ಹೇಗೆ ಸನಾತನ ಧರ್ಮದ ಸಾವಿರಾರು ಮಹರ್ಷಿಗಳಲ್ಲಿ ವಸಿಷ್ಠ ಮಹರ್ಷಿ ಶ್ರೇಷ್ಠರೋ .... ಹಾಗೆ ಸಾವಿರಾರು ರಾಜರ್ಷಿಗಳಲ್ಲಿ ಜನಕಮಹಾರಾಜ ಶ್ರೇಷ್ಠರು !” “ ಗೊಂದಲ ಹುಟ್ಟಿಸದೆ ನೇರವಾಗಿ ವಿಷಯವನ್ನು ಹೇಳು ಮನು !” ಅವರನ್ನ...