ಹೃದಯದ ಮಾತು!
ಹೃದಯದ ಮಾತು ! ೧ ಅವನೆಂದ… ., ನಿನ್ನ ಮೇಲಿನ ನನ್ನ ಪ್ರೇಮಕ್ಕಿಂತ ಉಳಿದ ಯಾವುದೂ ಹೆಚ್ಚಲ್ಲವೇ ಹುಡುಗಿ ! ನಿನ್ನ ಮೇಲಿನ ನನ್ನ ಪ್ರೇಮ ಎಷ್ಟೆಂದರೆ… , ಯಾವ ಒಂದು ಕಾರಣಕ್ಕೂ… , ಯಾವ ಒಂದು ಕ್ಷಣವೂ ಬಿಟ್ಟಿರಲಾರೆ ನಾ - ಪ್ರಾಣವಿರುವವರೆಗೂ… , ಮನಸ್ಸಿನಿಂದ ! ತರಲೆ ಮಾಡುತ್ತೇನೆ ! ಅಳಿಸುತ್ತೇನೆ ! ಪುಟಾಣಿ ಪಾಪುವಿನಂತೆ ನೀ ಬಿಕ್ಕಿಬಿಕ್ಕಿ ಅಳುವಾಗ ನಿನ್ನ ಮುಖವನ್ನು ನನ್ನ ಬೊಗಸೆಯಲ್ಲಿ ತೆಗೆದುಕೊಂಡು… , “ ಅಳುತ್ತಿದ್ದೀಯ ?” ಅನ್ನುತ್ತೇನೆ ! ಆಗಿನ ನಿನ್ನ ಭಾವ ಪ್ರಕಟಣೆಯಿದೆಯಲ್ಲಾ… , ಅದು ನನ್ನ ಪ್ರೇಮದ ಸಂಕೇತ ! ಅದೇನು ಮಾಯವೋ ಏನೋ… , ನಾನು ಈ ಪ್ರಪಂಚದಲ್ಲಿ ಅತಿ ಹೆಚ್ಚು ಪ್ರೀತಿಸುವವಳಿಗೆ ನನ್ನಿಂದ ಯಾವಾಗಲೂ ನೋವೇ ! ಅತಿ ಹೆಚ್ಚು ಪ್ರೀತಿಸುವವಳಿಗೆ ಅನ್ನುವಲ್ಲಿ ಗಮನಿಸಬೇಕಿರುವುದು ನನ್ನ ಪ್ರೇಮ - ಅದೇನೂ ಸಾಮಾನ್ಯವಲ್ಲ ! ಹಾಗೆಯೇ… , ನನ್ನ ಮೇಲಿನ ನಿನ್ನ ಪ್ರೇಮದ ಕಾರಣಕ್ಕಾದರೂ ಬಿಟ್ಟು ಹೋಗುವಂತಿಲ್ಲ ನೀನು ! ಹೃದಯದ ಮಾತು ಕೇಳೇ ಹುಡುಗಿ ! ೨ ಅವಳೆಂದಳು… , ಇವನೊಬ್ಬ ! ಒಂದು ಸಣ್ಣ ಮುನಿಸಿನಿಂದ ಮೌನವಾದರೆ ಸಾಕು ! ಪ್ರಪಂಚವೇ ಮುಳುಗಿಹೋದವನಂತೆ… , ಬಿಟ್ಟು ಹೋದಳು ಬಿಟ್ಟು ಹೋದಳು… , ಬಿಟ್ಟೇ ಹೋದಳು !! ಎಂದು ಬೊಬ್ಬೆ ಹೊಡೆಯುತ್ತಾನೆ ! ತಾನೊಬ್ಬ ರೋಧಿಸಿದರೆ ಸಾಲದೆಂಬಂತೆ ಪ್ರಪಂಚಕ್ಕೆಲ್ಲಾ ಹೇಳುತ್ತಾನೆ ! ನಿನ್ನದು ಮಾತ್ರ ಪ್ರೇಮವಲ್ಲವೋ ಹುಡುಗ ! ನೀನು ನನ್ನದೆಂಬಧಿಕಾರದಲ್ಲಿ… ,...