Posts

ಬೆಕ್ಕಿನ ಮರಿ!

ಬೆಕ್ಕಿನ ಮರಿ! * ಅವಳನ್ನೇ ನೋಡುತ್ತಿದ್ದೆ. ಅವಳ ಕೂದಲು…, ನನ್ನ ಇಮೋಷನ್ ಅದು! ನನ್ನ ಮುಖವನ್ನು ನೋಡಲಾಗದ ನಾಚಿಕೆಯೋ, ಹೆದರಿಕೆಯೋ, ಗೌರವವೋ…, ಯಾವ ಭಾವ ಅದು? ನನ್ನ ನೋಟವನ್ನು ಎದುರಿಸಲಾಗದೆ ಬೆಕ್ಕಿನ ಮರಿಯಂತೆ ಹಿಂದಕ್ಕೆ ಸರಿದಳು! ನಾನು ತಿರುಗುವುದಕ್ಕೆ ಅನುಸಾರವಾಗಿ ನನ್ನ ಬೆನ್ನ ಹಿಂದಕ್ಕೆ ಸರಿಯುತ್ತಿದ್ದಳು…! “ಬಾ ಈಚೆ!” ಎಂದು ಹೇಳಿ ಅವಳನ್ನು ಹಿಡಿದು ಮುಂದಕ್ಕೆ ಎಳೆದೆ. ಇಲ್ಲ…, ತಲೆ ಎತ್ತುತ್ತಲೇ ಇಲ್ಲ! ಬೊಗಸೆಯಲ್ಲಿ ಮುಖವನ್ನು ತೆಗೆದುಕೊಂಡು ನೋಡಿದೆ. ಆ ಚಂಚಲತೆ- ಅಧೀರತೆ…, ಕೊನೆಗೂ ನೋಡಿದಳು! ನೋಡಬೇಡ ಅನ್ನುವಂತೆ ಕಣ್ಣುಗಳಿಗೆ ಒಂದೊಂದು ಮುತ್ತು ಕೊಟ್ಟೆ! ಪಬ್ಲಿಕ್ ಆಗಿ!! ಇಬ್ಬರಿಗೂ ಅದರ ಅರಿವೇ ಇರಲಿಲ್ಲ! “ಹೋ…!” ಅನ್ನುವ ಸುತ್ತಲಿನವರ ಗೇಲಿ ನಮ್ಮನ್ನು ಎಚ್ಚರಿಸಿತು! ಮತ್ತಷ್ಟು ಮುದುಡಿ ಹಿಂದಕ್ಕೆ ಸರಿದಳು. ನನಗೋ ಅವಳ ಮುಖವನ್ನು ನೋಡುತ್ತಲೇ ಇರಬೇಕೆನ್ನುವ ಆಸೆ! ಬೆಕ್ಕಿನ ಮರಿ! ಬೀದಿಬದಿಯ ಟೀ ಅಂಗಡಿ. ಆರ್ಡರ್ ಕೊಟ್ಟಾಗಿದೆ. ಕುದಿಸುತ್ತಿದ್ದಾರೆ. ಹೊರಡುವ ಹಾಗಿಲ್ಲ. ಅವಳೋ ಮುಂದಕ್ಕೆ ಬರುತ್ತಿಲ್ಲ! ನನ್ನ ಅವಸ್ಥೆಯನ್ನು ಏನೆಂದು ಹೇಳುವುದು? “ಸರಿ…, ಬಾ…, ನಾನೇನೂ ಮಾಡುವುದಿಲ್ಲ!” ಎಂದೆ. ಹಿಂಜರಿಕೆಯಿಂದ ನಿಧಾನಕ್ಕೆ ಮುಂದಕ್ಕೆ ಬಂದಳು. ನೀಳವಾದ ಕೂದಲು…, ಚಂಚಲ ಕಣ್ಣುಗಳು, ಮೂಗಿನ ಕೆಳಗೆ ಎದ್ದುಕಾಣುವ ರೋಮವಿರುವ ತುಟಿ! ಮನಸ್ಸು! ಎಷ್ಟು ಕಷ್ಟ! “ಟೀ!” ಎಂದ ಅಂಗಡಿಯವ. ಅವಳಿಗೊಂದು ಕೊಟ್ಟು ನಾನೊಂದು ತೆಗೆದುಕೊಂಡು ...

ಕವಿತೆ- ಅವಳೆಂದಳು

* ಅವಳೆಂದಳು..., ನಿನ್ನ ಕತೆಗಳಲ್ಲಿ ನಾನಿಲ್ಲವೋ! ಕವಿತೆ ಬರಿ! ಕಥೆ ಎದೆಯಾದರೆ ಕವಿತೆ ಮಡಿಲು! ಕಥೆಯಲ್ಲಿ ಅದೆಷ್ಟು ಜನವೋ ಕವಿತೆಗೆ ನಾನೇ ಸಾರ್ವಭೌಮಳು!

ಪಿಹೆಚ್‌ಡಿ!

 ಪಿಹೆಚ್‌ಡಿ! * ನಾವಿಬ್ಬರೂ ಒಂದು ಪ್ರಯಾಣ ಹೊರಟಿದ್ದೆವು. ಶಾಶ್ವತವಾಗಿ ಬೇರ್ಪಡುವುದಕ್ಕಿಂತ ಮುಂಚೆ ಒಟ್ಟಿಗೆ…, ಕೊನೆಯ ಪ್ರಯಾಣ. ದುಃಖವೇನೂ ಇಲ್ಲ. ಸಂತೋಷವೇ. ಕೆಲವೊಂದು ತೀರ್ಮಾನಗಳು ಅನಿವಾರ್ಯ. ಆ ತೀರ್ಮಾನಕ್ಕೆ ಬದ್ಧರಾದಮೇಲೆ- ಭಾವನೆಗಳಿಗೆ ಅರ್ಥವಿಲ್ಲ!  ಅದು ಯಾವ ಜಾಗವೆಂದು ನಮಗೆ ತಿಳಿಯದು. ಅಲ್ಲಿಗೆ ಹೋಗಬಾರದೆಂದು ನಮ್ಮನ್ನು ತಡೆಯುವವರು ಯಾರೂ ಇರಲಿಲ್ಲ. ಜುಳುಜುಳು ಹರಿಯುತ್ತಿರುವ ನದಿ. ನಾವಿರುವ ದಡದಮೇಲೆ ಆಕಾಶದೆತ್ತರಕ್ಕೆ ಬೆಳೆದಿರುವ ಮರಗಳು. ನದಿಯ ಆಚೆ- ಬಯಲು. ದಡದಲ್ಲಿ…, ನೀರಿಗೆ ಕಾಲು ಇಳಿಬಿಟ್ಟು ಕುಳಿತೆವು. ಅವಳು ನನ್ನ ತೋಳಿಗೆ ಒರಗಿಕೊಂಡಿದ್ದಳು. “ನಮ್ಮ ತೀರ್ಮಾನ ಸರಿ ಇದೆ ಅಲ್ವಾ?” ಎಂದಳು. “ಇದಕ್ಕಿಂತ ಪಕ್ವವಾದ ತೀರ್ಮಾನ ಬೇರೆ ಯಾವುದಿದೆ?” ಕೇಳಿದೆ. “ಅಂದು ನೀನು ನನಗೆ ಸಿಗದಿದ್ದರೆ ಬದುಕು ಏನಾಗಿರುತ್ತಿತ್ತು?” ಎಂದು ಕೇಳಿದಳು. “ಮುಂಚೆ ಆಗಿದ್ದರೆ ಮತ್ತು ಮುಂದೆ ಆದರೆ ಅನ್ನುವುದು ಬಿಡು. ಅದು ನಮ್ಮ ಪರಿಪೂರ್ಣವಾದ ಭ್ರಮೆ. ಆಗಿದೆ ಅನ್ನುವುದಷ್ಟೇ ನಿಜ! ಆಗದ ವಿಷಯಗಳಬಗ್ಗೆ ಊಹೆಯ ಸಂಭಾಷಣೆ ಯಾಕೆ? ಆದ ಅನುಭವವನ್ನಿಟ್ಟು ಆಗಬೇಕಾದ ವಿಷಯಗಳಬಗ್ಗೆ ಯೋಚನೆ ಮಾಡೋಣ!” ಎಂದೆ. “ತೀರ್ಮಾನ ತೆಗೆದುಕೊಂಡು ಆಗಿದೆಯಲ್ಲಾ? ಆದ್ದರಿಂದ…, ನಮಗೆ ಸಂಬಂಧಪಡದ ವಿಷಯವೇನಾದರೂ ಹೇಳು! ಏನಿದ್ದರೂ ಕಥೆಗಾರ ನೀನು!” ಎಂದಳು. ಹೌದು…, ಕಥೆಗಾರ ನಾನು! ಪ್ರತಿಯೊಂದರಲ್ಲಿಯೂ ಕಥೆಗಳನ್ನು ಹುಡುಕುವವ! ಕಥೆಗಳಂತೆ ಹೇಳಲಾಗದ್ದನ್ನ...

ಸೈಕಲಾಜಿಕಲ್ ಮಿಸ್‌ಲೀಡಿಂಗ್

 ಇಲ್ಲಿರುವ ೭೦% ಬರಹ ಡಾ:- Ruupa Rao ಅವರದ್ದು! ನನ್ನ ಮತ್ತು ಅವರ ಕಮೆಂಟ್‌ಗಳನ್ನು ಅವರೊಂದು ಪೋಸ್ಟ್‌ ಆಗಿ ಹಾಕಿದ್ದಾರಾದ್ದರಿಂದ ನಾನೂ ಹಾಕುತ್ತಿದ್ದೇನೆ! ಮಾಮೂಲಿನಂತೆ ನಾನೇನೇ ಬರೆದರೂ ಕಥೆಯಂತೆ ಇರಬೇಕೆನ್ನುವ ಹಠದಿಂದಾಗಿ ಅವರಿಲ್ಲದ ಮೊದಲ ಮತ್ತು ಕೊನೆಯ ಸಂಭಾಷಣೆಗಳನ್ನು ಸೇರಿಸಿದ್ದೇನೆ! * ಸೈಕಲಾಜಿಕಲ್ ಮಿಸ್ ಲೀಡಿಂಗ್! * “ನ್ತದ ನೀನು ಸುಮ್ಮನೆ ಕಾಲು ಕೆರೆದು ಜಗಳಕ್ಕೆ ಹೋಗುವುದು!” ಎಂದಳು. “ಕಾಲು ಕೆರೆಯುವುದಷ್ಟೆ! ಜಗಳದ ಉದ್ದೇಶವೇನೂ ಇರುವುದಿಲ್ಲ! ಆದರೂ ಆ ಜಗಳ ಮಜವಾಗಿರುತ್ತದೆ! ಆರೋಗ್ಯಪೂರ್ಣವಾಗಿರುತ್ತದೆ!” ಎಂದೆ. “ಈಗೆನ್ತ? ಅವರು ಹೇಳಿದ್ದನ್ನು ನೀನು ಒಪ್ಪುತ್ತೀಯೋ ಇಲ್ಲವೋ?” “ಇಲ್ಲಿ ಒಪ್ಪುವುದು ಬಿಡುವುದು ಅನ್ನುವುದು ಇಲ್ಲವೇ… ಅವರೊಬ್ಬರು ಸೈಕಾಲಜಿಸ್ಟ್… ಡಾಕ್ಟರ್… ಅವರು ಹೇಳಿದ ವಿಷಯದಲ್ಲಿ ನನಗೆ ಗೊಂದಲವಾದರೆ ನಾನು ಕೇಳುವವನೇ! ಯಾಕೆಂದರೆ ಅವರು ಹೇಳಿದ ವಿಷಯ ನನ್ನ ಅನುಭವದಲ್ಲಿ ಅವರು ಹೇಳಿದ್ದಕ್ಕೆ ವಿರುದ್ಧವಾಗಿದೆ! ಅದನ್ನು ಕಾಲು ಕೆರೆಯುವುದು, ಜಗಳ ಅನ್ನುವುದು ತಪ್ಪು! ಇನ್ನೂ ಹೇಳಬೇಕೆಂದರೆ…, ಅವರು ಶ್ರೀಕೃಷ್ಣನಂತೆ- ನಾನು ಅರ್ಜುನ! ಎಲ್ಲವೂ ಗೊತ್ತಿರುವವರೊಂದಿಗೆ ಏನೂ ಗೊತ್ತಿಲ್ಲದವ ಹೇಗೆ ಜಗಳ ಮಾಡುವುದು?” ಎಂದೆ. “ಆಹಾ…! ಆದರೆ ಅವರನ್ನು ನೀನು ಅಧ್ಯಯನ ಮಾಡಿದ್ದೀಯ ಅಂದರೆ ಏನರ್ಥ? ಅವರನ್ನು ವೈಯಕ್ತಿಕ ಧಾಳಿ ಮಾಡಿದರೆ ಹೇಗೆ?” “ವೈಯಕ್ತಿಕ ಧಾಳಿ- ವೈಯಕ್ತಿಕ ಜಡ್ಜ್‌ಮೆಂಟ್ ಅನ್ನುವುದು…, ನಾನು ವ...

ಭೇಟಿ!

೧ ಎಷ್ಟು ದೂರ ಹೋಗಿರಬಹುದು ನಾನು ? ರಸ್ತೆ ಬದಿಯಲ್ಲಿ ಯಾರೋ ಕೈ ತೋರಿಸಿದರು , ಡ್ರಾಪ್ ಬೇಕು ಅನ್ನುವಂತೆ . ಸಮೀಪ ತಲುಪಿದಾಗಲೇ ತಿಳಿದದ್ದು… , ಹೆಣ್ಣು - ಕಣ್ಣು ಮಾತ್ರ ಕಾಣಿಸುವಂತಾ ಬುರ್ಖಾಧಾರಿ - ಹೆಣ್ಣು ! ಗಾಡಿ ಸ್ಲೋ ಮಾಡಿದೆನಾದರೂ ನಿಲ್ಲಿಸಲೋ ಬೇಡವೋ ಅನ್ನುವ ಗೊಂದಲ . ನನ್ನ ಗೊಂದಲ ಅರಿತವಳಂತೆ… , “ ತಲೆ ಕೆಡಿಸಿಕೊಳ್ಳಬೇಡಿ… , ನಿಲ್ಲಿಸಿ !” ಎಂದಳು . ನಿಲ್ಲಿಸಿದೆ . ಯಾವುದೇ ಮುಜುಗರವಿಲ್ಲದೆ ಬುರ್ಖಾವನ್ನು ಮೊಣಕಾಲಿಗಿಂತ ಮೇಲೆತ್ತಿ - ಜೀನ್ಸ್‌ಪ್ಯಾಂಟ್ ಧರಿಸಿದ್ದಳು - ಆಚೆ ಈಚೆ ಕಾಲು ಹಾಕಿ ಕಂಫರ್ಟ್ ಆಗಿ ಕುಳಿತು… , “ ರೈಟ್ !” ಎಂದಳು . ಮುಂದಕ್ಕೆ ಚಲಿಸಿದೆ . “ ಎಲ್ಲಿಗೆ ಹೋಗಬೇಕು ?” ಎಂದು ಕೇಳಿದೆ . “ ನೀವು ಎಲ್ಲಿಗೆ ಹೋಗುತ್ತಿದ್ದೀರೋ ಅಲ್ಲಿಗೆ !” ಎಂದಳು . ಗೊಂದಲಗೊಂಡೆ . ಚಂಚಲಗೊಂಡೆ . ದುಗುಡಗೊಂಡೆ ! “ ನಾನೆಲ್ಲಿಗೆ ಹೋಗುತ್ತಿದ್ದೇನೋ ನನಗೂ ತಿಳಿಯದು… , ಗುರಿಯಿಲ್ಲದ ಪ್ರಯಾಣ !” ಎಂದೆ . “ ಇನ್ನೂ ಒಳ್ಳೆಯದೇ ಆಯಿತು ! ನಾನೇನೂ ನಿಮಗೆ ಹೊರೆಯಾಗುವುದಿಲ್ಲ - ನಿಮ್ಮೊಂದಿಗೆ ಬಂದರೆ !” ಎಂದಳು . “ ಒಬ್ಬನೇ ಹೋಗಬೇಕೆಂದುಕೊಂಡವನಿಗೆ ನೀವೊಂದು ಹೊರೆಯೇ… !” ಎಂದೆ . “ ಸರಿ ಗಾಡಿ ನಿಲ್ಲಿಸಿ !” ಎಂದಳು . ನಿಲ್ಲಿಸಿದೆ . ಗಾಡಿಯಿಂದ ಇಳಿದು ನನ್ನ ಮುಖವನ್ನೊಮ್ಮೆ ನೋಡಿ… , “ ಹೆದರಿಕೆಯಾ ?” ಎಂದಳು . ಮುಗುಳುನಕ್ಕೆ . ಅವಳಿಗದೇನು ಅರ್ಥವಾಯಿತೋ ಏನೋ… , ಮತ್ತೆ ಗಾಡಿ ಹತ್...

ಇತಿಹಾಸ

ಇತಿಹಾಸ! * ಕೆಲವೊಂದು ಪ್ರಶ್ನೆಗಳಿಗೆ ತೀರಾ ಆಕಸ್ಮಿಕವಾಗಿ ಉತ್ತರಗಳು ಸಿಗುತ್ತದೆ. ಇತಿಹಾಸಕಾರರು ಅಷ್ಟು ಚಂದಚಂದವಾಗಿ ಹೇಗೆ ಇತಿಹಾಸವನ್ನು ಬರೆಯುತ್ತಾರೆ ಅನ್ನುವ ಗೊಂದಲ ಮುಂಚಿನಿಂದಲೂ ಇತ್ತು! ಇವತ್ತು ಒಬ್ಬರ ಬರಹವನ್ನು ಓದಿದೆ. ವಿದೇಶಿಗರಾದ ಬ್ರಿಟಿಷರನ್ನು ಓಡಿಸಲು ಹೋರಾಡಿದವರಲ್ಲಿ…, ಇಲ್ಲಿಯ ಪ್ರಜೆಗಳಾದ ಟಿಪ್ಪು ಮತ್ತು ಹೈದರ್ ಅತಿ ಮುಖ್ಯರು ಎಂದು ಬರೆದಿದ್ದರು. “ಅರೆ…, ಹೈದರ್ ಮತ್ತು ಟಿಪ್ಪು ಕೂಡ ಮೈಸೂರು ಅರಸರಲ್ಲಿ ಕೆಲಸ ಹುಡುಕಿಕೊಂಡು ಬಂದ ವಿದೇಶಿಯರೇ ಅಲ್ಲವೇ..!?” ಅನ್ನುವುದು ನನ್ನ ಪ್ರಶ್ನೆ! ಅದಕ್ಕೆ ಅವರು ಕೊಟ್ಟ ಉತ್ತರದಲ್ಲಿ ನನ್ನ ಗೊಂದಲಗಳಿಗೆ ಪರಿಹಾರವಿದೆ! “ನಿಮ್ಮನ್ನು ನಾನು ಸಾಕಷ್ಟು ಅರ್ಥ ಮಾಡಿಕೊಂಡಿದ್ದೇನೆ! ಆದ್ದರಿಂದ ಉತ್ತರಿಸುವ ಗೊಡವೆಗೆ ಹೋಗುವುದಿಲ್ಲ!” ಅನ್ನುವುದು ಅವರು ಕೊಟ್ಟ ಉತ್ತರ! ಒಮ್ಮೆಯೂ ಭೇಟಿಯಾಗದೆ, ಒಮ್ಮೆಯೂ ವೈಯಕ್ತಿಕ ಸಂಭಾಷಣೆಯಾಗದೆ, ಪರಸ್ಪರ ಯಾವ ಅರಿವೂ ಇಲ್ಲದೆ- ಅವರು ನನ್ನನ್ನು ಅರ್ಥಮಾಡಿಕೊಂಡರು ಅನ್ನುವಲ್ಲಿ…, ಇತಿಹಾಸದ ಉತ್ಪತ್ತಿಯಿದೆ! ಅವರು ಅರಿತ ನನ್ನನ್ನು ಬರೆದರೆ- ಅದೇ ಇತಿಹಾಸ!!!

ಅನಿರುದ್ಧ ಬಿಂಬ!

  ಅನಿರುದ್ಧ ಬಿಂಬ ! * ನಮಸ್ತೇ… , ನಾನು ಅನಿರುದ್ಧ - ಬಿಂಬದಿಂದ ಹೊರಬಂದ ರೂಪವಿಲ್ಲದ ಅನಿರುದ್ಧ ! ನಾವೊಂದು ಕಲ್ಪನೆಯ ಲೋಕಕ್ಕೆ ಹೋಗಿಬರೋಣ . ಈ ಕಾಲ್ಪನಿಕ ಕಥೆಯನ್ನು ಕೇಳಿ ಕೊನೆಗೆ - ಇದರಲ್ಲಿ ಯಾವುದು ಕಲ್ಪನೆ , ಯಾವುದು ವಾಸ್ತವ , ಯಾವುದು ಕನಸು , ಯಾವುದು ಭ್ರಮೆ , ಕಥೆಗೆ ಪ್ರೇರಣೆಯೇನು ಎಂದೆಲ್ಲಾ ಕೇಳಬಾರದು ! ಮತ್ತೊಮ್ಮೆ ಹೇಳುತ್ತಿದ್ದೇನೆ… , ಈ ಬ್ರಹ್ಮಾಂಡದಲ್ಲಿ ಏನೂ ಸಾಧ್ಯ ಅನ್ನುವ ಅಡಿಪಾಯದಲ್ಲಿ ಈ ಕಥೆಯನ್ನು ಹೇಳುತ್ತಿದ್ದೇನೆ . ಈ ಕಥೆ ನಡೆಯುವುದು ಎರಡು ವ್ಯತ್ಯಸ್ತವಾದ ಪ್ರಪಂಚದಲ್ಲಿ ! ಒಂದು… , ನಿದ್ದೆ ಅನ್ನುವ ಮಾಯಾ ಪ್ರಪಂಚದಲ್ಲಿ ! ಇನ್ನೊಂದು… , ನಿದ್ದೆಯ ಹೊರತಾದ ಮಾಯಾ ಪ್ರಪಂಚದಲ್ಲಿ ! ಆದ್ದರಿಂದ ಇದು ಪರಿಪೂರ್ಣವಾಗಿ ಕಾಲ್ಪನಿಕ ಕಥೆ ! * ಮೊನ್ನೆ ನಾನೊಂದು ಊರಿಗೆ ಹೋಗಿದ್ದೆ . ಊರಾ ಅಂದರೆ ಊರಲ್ಲ ಊರಲ್ಲವಾ ಅಂದರೆ ಊರು ! ಅದೊಂದು ಕಾಡಿನಂತಾ ಪ್ರದೇಶ - ಜನಸಂಚಾರವೇ ಇಲ್ಲದ ಪ್ರದೇಶ . ಅಲ್ಲೊಂದು ದೇವಸ್ಥಾನ . ಆ ದೇವಸ್ಥಾನದಬಗ್ಗೆ ಹಲವರು ಹಲವು ಕಥೆಗಳನ್ನು ಹೇಳಿದ್ದರು . ನನಗೋ ಅದರಕಡೆ ಗಮನವೇ ಇಲ್ಲ . ನನ್ನ ಗಮನವೆಲ್ಲಾ ಆ ದೇವಸ್ಥಾನಕ್ಕೆ ನೆರಳಿನಂತೆ ನಿಂತಿದ್ದ ಆ ದೊಡ್ಡ ಆಲದ ಮರದ ಕಡೆಗೆ . ಎಷ್ಟು ವರ್ಷವಿರಬೇಕು ಆ ಮರಕ್ಕೆ ಅನ್ನಿಸಿದರೂ ಅದಕ್ಕಿಂತ ಕುತೂಹಲ .., ಈ ಮರದ ಇರವಿನ ಅರಿವು ನನಗಿತ್ತಲ್ಲಾ - ಅನ್ನುವುದು ! ಅದರ ಸಮೀಪಕ್ಕೆ ಹೋಗುತ್ತಿದ್ದಂತೆ ಮನಸ್ಸಿನೊಳಗೆ ಅರಿ...