(ಟೈಟಲ್ ಇಲ್ಲದ ಕಥೆ!)

ಗಡಿಬಿಡಿಯಲ್ಲಿ ಓಡಿ ಬಂದೆ. ಬಾಗಿಲ ಕಡೆಯೇ ನೋಡುತ್ತಾ ಕುಳಿತಿದ್ದಾಳೆ.

ಹನ್ನೆರಡು ಗಂಟೆಗೆ ತಲುಪುತ್ತೇನೆ ಅಂದಿದ್ದೆ. ಹನ್ನೆಡರು ಗಂಟೆ ಹತ್ತು ಸೆಕೆಂಡ್ ಆಗಿಬಿಟ್ಟಿದೆ! ಮಹಾಪರಾಧ!

“Sorry sorry sorryyyy” ಅನ್ನುತ್ತಲೇ ಬಂದೇ..!

ಮುಖ ಊದಿಸಿದಳು.

ಜೇಬಿನಿಂದ- ಸರ್‌ಪ್ರೈಸ್ ಆಗಿ ಕೊಡಲು ತಂದಿದ್ದ ಡೈಮಂಡ್ ರಿಂಗ್ ಹೊರತೆಗೆದೆ.

ಮುಖ ತಿರುಗಿಸಿದವಳನ್ನು ಬಲವಂತದಿಂದ ನನ್ನೆಡೆಗೆ ತಿರುಗಿಸಿ...,

“ಐ ಲವ್‌ ಯು! ವಿಲ್‌ಯು ಮ್ಯಾರಿ ಮಿ?” ಎಂದೆ.

“ನನ್ನ ಮೇಲೆ ನಿನಗೆ ಒಂದು ಚೂರೂ ಪ್ರೀತಿಯಿಲ್ಲ!” ಎಂದಳು.

“ಏನೆ ಹೀಗಂತಿದೀಯ? ಇದುವರೆಗಿನ ನನ್ನ ಪರಿಚಯದಲ್ಲಿ ಹಾಗನ್ನಿಸಿತಾ?” ಎಂದೆ.

“ಎಷ್ಟು ಹೊತ್ತಿನಿಂದ ಕಾಯ್ತಿದೀನಿ ಗೊತ್ತಾ?” ಎಂದಳು.

“ಕರೆಕ್ಟಾಗಿ ಹನ್ನೆರಡು ಗಂಟೆಗೆ ಬರ್ತೀನಿ ಅಂದಿದ್ನಲ್ಲೆ?” ಎಂದೆ.

“ಬಂದ್ಯ?” ಒಂದೇ ಪ್ರಶ್ನೆ!

ಹತ್ತು ಸೆಕೆಂಡ್ ತಡವಾಗಿದ್ದನ್ನೇ ಕಾರಣವಾಗಿಸಿದ್ದಾಳೆ! ಏನು ಮಾಡುವುದು? ಅವಳನ್ನೇ ಕೇಳಿದೆ...,

“ಸರಿ ಈಗ ಏನ್ ಮಾಡ್ಲಿ? ಏನ್‌ ಮಾಡಿದ್ರೆ ನನ್ನ ಪ್ರೀತೀನ ನಂಬ್ತೀಯ?” ಎಂದೆ.

“ನಿನ್ನ ಹೃದಯವನ್ನು ಕೊಡು!” ಎಂದಳು.

ಎದೆಯನ್ನು ಬಗೆದು ಹೃದಯವನ್ನು ಹೊರತೆಗೆದು ಕೊಟ್ಟೆ...!

“ಇದೆಂತ? ಕೆಂಪು ಬಣ್ಣ ಹಾಕಿದ ಸ್ಪಾಂಜ್ ಕೊಟ್ಟಿದೀಯ? ನಾನು ಕೇಳಿದ್ದು ಹೃದಯ!” ಎಂದಳು.

ಮೂಕ ವಿಸ್ಮಿತನಾಗಿ ಕುಸಿದುಬಿದ್ದೆ!

Comments

Popular posts from this blog

ಇನ್ನೂರು!

ಹಾರರ್ ಥೀಂ

ದಾರಿಯಲ್ಲಿ ಸಿಕ್ಕವಳು!