ಕಥೆಗಾರನ ಆತ್ಮ ವಿಶ್ಲೇಷಣೆ!
ಕಥೆಗಾರನ ಆತ್ಮ ವಿಶ್ಲೇಷಣೆ ! “ ನನ್ನ ಪ್ರಾಮಾಣಿಕ ಅಭಿಪ್ರಾಯ : ಕಥೆ ಇಷ್ಟವಾಗಲಿಲ್ಲ !” ಎಂದು ಕಮೆಂಟ್ ಮಾಡಿದರು . ಯೋಚನೆಗಿಟ್ಟುಕೊಂಡಿತು ! ಏನು ಮಾಡಲಿ ? ಬೇರೆಯವರ ಅಭಿಪ್ರಾಯವೂ ನೊಡೋಣವೆಂದು ಕಾದೆ ! ಒಳ್ಳೆಯ ಅಭಿಪ್ರಾಯಗಳೇ ಬಂದವು ! ಆದರೂ ..., “ ನಿಮ್ಮ ಪ್ರಾಮಾಣಿಕ ಅಭಿಪ್ರಾಯಕ್ಕೆ ನನ್ನ ತೆರೆದ ಮನದ ಧನ್ಯವಾದಳು ಸರ್ ... ಇನ್ನೂ ಎಷ್ಟು ದಿನಬೇಕೋ ಪಕ್ವವಾದ ಚಂದದ ಕಥೆ ಬರೆಯಲು .... ಯಾಕೆ ಇಷ್ಟವಾಗಲಿಲ್ಲವೋ ಹೇಳಿದ್ದರೆ ಉಪಕಾರವಾಗುತ್ತಿತ್ತು ...! ಕಥಾವಸ್ತುವೇ ? ಬರೆದ ಶೈಲಿಯೇ ?” ಎಂದು ರೀಕಮೆಂಟ್ ಮಾಡಿದೆ . “ ಕಥಾ ಹಂದರ ಶಿಥಿಲ , ಪಾತ್ರ ಪೋಷಣೆ ಅಷ್ಟಕ್ಕಷ್ಟೆ , ಬರವಣಿಗೆಯ ಶೈಲಿ ಅನಾಕರ್ಷಕ ....! ಇವಿಷ್ಟೂ ನನ್ನ ವೈಯಕ್ತಿಕ ಅಭಿಪ್ರಾಯ ಅಷ್ಟೆ !” ಎಂದು ಉತ್ತರಿಸಿದರು . ವಿಶ್ಲೇಷಣೆ ಶುರವಾಯಿತು ! ಕಥೆಯನ್ನು ಮತ್ತೊಮ್ಮೆ ಓದಿನೋಡಿದೆ . ಅಷ್ಟು ಬೇಗ ಅರ್ಥವಾಗುವುದಿಲ್ಲ ! ಹಾಗೆಂದು ಕಥೆಯಲ್ಲಿ ಏನೂ ಇಲ್ಲವೆಂದಲ್ಲ - ಕಠಿಣ ! ನಿಜ .... ಕಥೆಯಿಂದ ಕಥೆಗೆ ನನ್ನ ಶೈಲಿ ಕಠಿಣವಾಗುತ್ತಿದೆ ! ಹಾಗೆಂದು ಅದನ್ನು ಬದಲಿಸಲು ನಾನೂ ತಯಾರಿಲ್ಲ ! ಇದನ್ನು ಹೇಗೆ ತೆಗೆದುಕೊಳ್ಳಲಿ ....? ಅವರು ಕಮೆಂಟ್ ಮಾಡಿರುವುದು ನಾನು ಬರೆದ ಅರವತ್ತೇಳನೇ ಕಥೆಗೆ ! ಬರೆದ ಕಥೆಗಳೆಲ್ಲಾ ಎಲ್ಲರಿಗೂ ಇಷ್ಟವಾಗಬೇಕೆಂದಿಲ್ಲ ! ಅರವತ್ತೇಳು ಕಥೆಗಳಲ್ಲಿ ಇದೇ ನನ್ನ ಕೆಟ್ಟ ಕಥೆಯಾಗಿರಲೂ ಬಹುದು ... ನಿಜ ..., ಅರಗಿಸಿಕೊ...