ಚುಟುಕು ಕಥೆಗಳು
೧ ನಾಳೆ ಬರುತ್ತೇನೆಂದೆ! "ನಾಳೆ" ಬರಲೇ ಇಲ್ಲ! ೨ ಕಥೆ! ಅವಳ ಮೇಲಿನ ನನ್ನ ಅತಿಶಯವಾದ ಪ್ರೇಮ..., ಅವಳ ಬದುಕಿನ ಅತಿದೊಡ್ಡ ಸಮಸ್ಯೆ! 😁 ೩ "ಯಾವಾಗ ನೋಡು ನೆಗೆಟಿವ್ ಕಥೆಗಳು!" ಎಂದಳು. "ಅದನ್ನು ಓದಿ- ಬಿ ಪಾಸಿಟಿವ್!" ಎಂದೆ. 😁 ೪ "ಎಷ್ಟು ಚಂದ ಅಲಾ ಈ ನೆಮ್ಮದಿಯ ಜೀವನ" ಎಂದೆ. "ಐ ಲವ್ಯು" ಎಂದಳು 😁 ೫ "ನೀ ಯಾಕೆ ನನ್ನಜೊತೆ ಮಾತ್ರ ಸಿಟ್ಟು ಮಾಡ್ಕೋಳೋದು?" ಎಂದಳು. "ಸಿಟ್ಟು ಮಾತ್ರವಲ್ಲ ನನ್ನ ದುಃಖ ದುಮ್ಮಾನ ಸೆಡವುಗಳೂ ಗೊತ್ತಿರುವುದು ನಿನಗೆ ಮಾತ್ರ ಅನ್ನುವಲ್ಲಿ ಉತ್ತರವಿದೆ!" ಎಂದೆ. ೬ ಕಥೆ ನಂ:- ೧೯೬ ನೂರಾ ತೊಂಬತ್ತಾರು ಕಥೆ ಬರೆದ ನಾನು, ನೂರಾ ತೊಂಬತ್ತಾರು ಕಥೆ! ಇನ್ನೂ ಮುಗಿಯದ ಕಥೆ! ಮುಗಿಯುವವರೆಗಿನ ಕಥೆ!😁