ಡಿ ಎನ್ ಎ ಟೆಸ್ಟ್
ಡಿಎನ್ ಎ ಟೆಸ್ಟ್
"ವಯಸ್ಸು ಮೂರು”
“ಏನು ಸಮಸ್ಯೆ?”
“ಯಾರೋ ದುರುಳ ರೇಪ್ ಮಾಡಿದ”
“ಆತನಬಗ್ಗೆ ಏನಾದರೂ ಸೂಚನೆ?”
“ಇಲ್ಲ, ಯಾವ ಸೂಚನೆಯೂ ಇಲ್ಲ”
“ಮತ್ತೆ? ಈಗ ಏನು ಮಾಡಬೇಕೆಂದಿದ್ದೀರಿ?”
“ಡಿ ಎನ್ ಎ ಟೆಸ್ಟ್ !”
”ಯಾರಿಗೆ? ಯಾರು ಎಂದೇ ತಿಳಿಯದಿರುವಾಗ ಡಿ ಎನ್ ಎ ಟೆಸ್ಟ್ ಮಾಡಿ ಏನುಪಯೋಗ?”
ಬೆಡ್‌ಮೇಲಿದ್ದ ಮಗು ನರಳಿತು, ಕನವರಿಸಿತು...,
“ನೋವು..., ಅಪ್ಪಾ... ಬಿಡು..., ಬಿಡು..., ಅಮ್ಮಂಗೆ ಹೇಳ್ತೀನಿ..., ಅಮ್ಮಾ... ಅಪ್ಪ ನೋವುಮಾಡ್ತಿದಾರೆ..., ಅಮ್ಮಾ.... ಅಮ್ಮ ಎಲ್ಲಿ?”
ಕರ್ಮ ಇವೆಲ್ಲ ಓದಲಾರದ ಕೇಳಲಾರದ ಘಟನೆಗಳು.
ReplyDelete