ಕನಿಕರ- ಕಥೆ
೧ ಕೆಲವು ದಿನಗಳಿಂದ ಗಮನಿಸುತ್ತಿದ್ದೇನೆ . ಬಡವರಿಗೆ ಸಹಾಯ ಮಾಡುತ್ತಿದ್ದಾಳೆ , ಎಲ್ಲರೊಂದಿಗೂ ನಗುತ್ತಾ ಬೆರೆಯುತ್ತಿದ್ದಾಳೆ , ಯಾರು ಏನು ಹೇಳಿದರೂ ನನಗೇನು ಎನ್ನುವಂತೆ ತನ್ನ ಪಾಡಿಗೆ ತಾನು ಬದುಕುತ್ತಿದ್ದಾಳೆ . ಅವಳನ್ನು ಗಮನಿಸಬೇಕಾದ ಯಾವ ಅಗತ್ಯವೂ ನನಗಿಲ್ಲ . ಆದರೆ ಎರಡುತಿಂಗಳ ಹಿಂದೆ ಪತ್ರಿಕೆಗಳ ಮುಖಪುಟಗಳಲ್ಲಿ ರಾರಾಜಿಸುತ್ತಿದ್ದ ಸುದ್ದಿಯ ಕೇಂದ್ರಬಿಂದು ಅವಳೇ ಎಂದು ತಿಳಿದಾಗ ಗಮನಿಸದಿರಲಾಗಲಿಲ್ಲ . ಏಳು ಜನರಿಂದ ಲೈಂಗಿಕ ದೌರ್ಜನ್ಯಕ್ಕೆ ಈಡಾದ ಹೆಣ್ಣು .... ಯಾರೋ ಏನೋ ಹೇಳಿದರೆಂದು ಗಲಭೆ ಎಬ್ಬಿಸುವವರನ್ನು ನೋಡಿದ್ದೇನೆ , ಸಣ್ಣಪುಟ್ಟ ವಿಷಯಗಳಿಗೆ ಆತ್ಮಹತ್ಯೆ ಮಾಡಿದವರನ್ನು ನೋಡಿದ್ದೇನೆ , " ಅವನು ನನ್ನನ್ನು ಕೊಲ್ಲುತ್ತೇನೆ ಎಂದ , ನಾನೇ ಕೊಂದುಬಿಟ್ಟೆ ' ಎನ್ನುವವರನ್ನು ನೋಡಿದ್ದೇನೆ , ಆದರೆ ಇದು ? ಏನೂ ನಡೆದೇ ಇಲ್ಲವೇನೋ ಎನ್ನುವಂತೆ ... ಹೇಗೆ ಸಾದ್ಯ ? ತನ್ನನ್ನು ಬಲತ್ಕರಿಸಿದವರು ಯಾರೆಂದು ತಿಳಿದಿದ್ದರೂ ಅವರಬಗ್ಗೆ ಕ್ರಮ ಕೈಗೊಳ್ಳಲಿಲ್ಲವಂತೆ , ನನ್ನ ಒಪ್ಪಿಗೆಯಿಂದ ನಡೆಯಿತು ಎಂದಳಂತೆ . ಅವರಿಗೆ ಶಿಕ್ಷೆ ಆಗಬಾರದು ಅನ್ನುವ ಉದ್ದೇಶವಲ್ಲದಿದ್ದರೂ ..., ನಮ್ಮ ನ್ಯಾಯವ್ಯವಸ್ತೆಯಲ್ಲಿ ಶಿಕ್ಷೆ ಕೊಡಿಸಲು ಪಡಬೇಕಾದ ಕಷ್ಟವನ್ನು ನೆನೆದಾದರೂ ಇರಬಹುದು ..., ಆದರೂ ..., ಅಬ್ಬಾ ..... ಅಷ್ಟು ಮಾತ್ರ ಅಲ್ಲ ಅವಳು .... ಮೊನ್ನೆ ನಡೆದ ವಿಷಯ .... ಬಸ್ಸೊಂದು ವ್ಯಕ್ತಿಯೊಬ್ಬನನ್ನು ಹೊಡೆದ...