Posts

ಅಣಿಮಾಂಡವ್ಯನ ಮಾಯೆಯೂ ನನ್ನ ಭ್ರಮೆಯೂ!

ಅಣಿಮಾಂಡವ್ಯನ ಮಾಯೆಯೂ ನನ್ನ ಭ್ರಮೆಯೂ ! * ನನ್ನನ್ನು ನಾನು ಹುಡುಕಲು ತೊಡಗಿ ಸುಮಾರು ವರ್ಷಗಳಾಯಿತು ! ಇನ್ನೂ ಕಂಡುಕೊಳ್ಳಲಾಗಿಲ್ಲ ...! * ಅಣಿಮಾಂಡವ್ಯ ಅನ್ನುವ ಮಹಾ ಋಷಿಯೊಬ್ಬರಿದ್ದರಂತೆ . ಮಾಡದ ತಪ್ಪಿಗೆ ಶೂಲಕ್ಕೇರಿಸಲ್ಪಟ್ಟು ತಪಸ್ಸಿನ ಶಕ್ತಿಯಿಂದಾಗಿ , ಸಾಯಲೂ ಇಲ್ಲ - ಬದುಕೋ ನರಕ ಅನ್ನುವಂತಾಗಿತ್ತು ಪರಿಸ್ತಿತಿ ! ಮೂರು ದಿನವಾದರೂ ಆತ ಸಾಯದಿರುವುದನ್ನು ನೋಡಿ ಗಾಬರಿಯಾದ ಶೂಲಕ್ಕೇರಿಸಿದ ಮಹಾರಾಜ , ಈತನಾರೋ ಮಹಾನುಭಾವನೇ ಇರಬೇಕು , ತನಗೆ ತಪ್ಪಾಗಿದೆ ಅನ್ನುವುದನ್ನು ಅರಿತು , ತಾನೇ ಖುದ್ದಾಗಿ ಬಂದು , ಋಷಿಯನ್ನು ಶೂಲದಿಂದ ಇಳಿಸಿ , ಋಷಿ ಪಾದಕ್ಕೆ ಬಿದ್ದು ಉರುಳಾಡಿ ಕ್ಷಮೆ ಕೇಳಿದನಂತೆ ! ಪರಮ ಸಾಧು ಋಷಿ ಕ್ಷಮೆಯನ್ನು ನೀಡಿ ಮತ್ತೊಮ್ಮೆ ತಪಸ್ಸಿಗೆ ಹೊರಟ - ತನಗೇಕೆ ದೇವರು ಈ ಶಿಕ್ಷೆಯನ್ನು ನೀಡಿದ ಎಂದು ಕಂಡುಕೊಳ್ಳಬೇಕಿತ್ತು !! * ಅದೇ ಸಮಯದಲ್ಲಿ ನಾನೂ ತಪಸ್ಸಿಗೆ ತೊಡಗಿದ್ದೆ ! ಉದ್ದೇಶ - ದುಃಖದಿಂದ ಹೊರಬರುವುದು ! ನನ್ನೊಳಗೆ ನಾನು ಪರಮಾನಂದವನ್ನು ಕಂಡುಕೊಳ್ಳುವುದು ! ಪ್ರತ್ಯಕ್ಷರಾದ ದೇವರು ಹೇಳಿದ್ದು ...., “ ಅಣಿಮಾಂಡವ್ಯ ತಪಸ್ಸಿಗೆ ಹೊರಟ ಕಾರಣವನ್ನು ನೀನು ಹೇಳಿದೆ ! ನೀನು ಹೊರಟ ಕಾರಣವನ್ನು ಹೇಳಿಲ್ಲ - ಉದ್ದೇಶ ಮಾತ್ರ ಹೇಳಿದ್ದೀಯೆ ! ಕಾರಣವನ್ನು ಪ್ರಪಂಚದ ಮುಂದೆ ಹೇಳಿಕೋ .... ನಿಜದರಿವಾಗುತ್ತದೆ !” * ಅಣಿಮಾಂಡವ್ಯನ ತಪಸ್ಸು ಮುಗಿಯುವ ಸೂಚನೆಯೇ ಇಲ್ಲ ! ಮುಂಚೆಯೆಲ್ಲಾ ಅಷ್ಟು ಬೇಗ...

ಇಚ್ಛಾಶಕ್ತಿ

"ಆಸ್ತಿಯಿಲ್ಲ- ಸಂಪಾದನೆಯಿಲ್ಲ- ಹಿನ್ನೆಲೆಯಿಲ್ಲ! ಆದರೂ ಸಾಧಿಸಿಯೇ ಸಾಧಿಸುತ್ತೇನೆನ್ನುವ ನಿನ್ನ ಈ ನಿಶ್ಚಯದಾರ್ಢ್ಯಕ್ಕೆ- ನಂಬಿಕೆಗೆ ಕಾರಣವೇ ಗೊತ್ತಾಗುತ್ತಿಲ್ಲ!" "ಗುರಿ ಸ್ಪಷ್ಟವಾಗಿದೆ! ದಾರಿ ಸೃಷ್ಟಿಸಿಕೊಂಡಿದ್ದೇನೆ! ಪ್ರಯತ್ನ ಅದರಪಾಡಿಗೆ ನಡೆಯುತ್ತಿದೆ! ಬಿದ್ದ- ಬೀಳುತ್ತಿರುವ ಏಟುಗಳು ಹಠವನ್ನು- ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಿದೆ! ಇನ್ನು.... ಗುರು ಹಿರಿಯರ ಆಶೀರ್ವಾದವಿದೆ! ಕಿರಿಯರ ಪ್ರಾರ್ಥನೆ, ಸಮವಯಸ್ಕರ ಹಾರೈಕೆ- ಅದರಲ್ಲೂ ಹೆಣ್ಣು ಹೃದಯದ ತುಂಬು ವಾತ್ಸಲ್ಯ ಎಂದೂ ನನ್ನ ಜೊತೆಗಿದೆ! ಇನ್ನೇನುಬೇಕು?"

ಒಳಗಿನ ದೇವರು!

ಒಳಗಿನ ದೇವರು ! * ಎಷ್ಟು ವರ್ಷದ ತಪಸ್ಸೋ .... ದೇವರು ಪ್ರತ್ಯಕ್ಷರಾದರು ! “ ಏನು ವರ ಬೇಕು ?” “ ನಿಮ್ಮನ್ನು ನಾನು - ನನ್ನೊಳಗೆ ಕಾಣಬೇಕು !” “ ಅದು ಸ್ವಲ್ಪ ಕಷ್ಟ !” “ ಓ ..., ಇನ್ನೂ ಕಷ್ಟವೇ ? ಬಾಹ್ಯದಲ್ಲಿ ಕಾಣಲೇ ಇಷ್ಟು ಕಷ್ಟಪಟ್ಟೆ ! ಇನ್ನು ಒಳಗೆ ಕಾಣಲು ಅದೆಷ್ಟು ಕಷ್ಟಪಡಬೇಕೋ ... ಆದರೂ - ಪಡುತ್ತೇನೆ - ಹೇಳಿ , ಏನು ಮಾಡಲಿ ?!” “ ಹೆಣ್ಣನ್ನು ಪ್ರೇಮಿಸು !” ಎಂದು ಹೇಳಿ ಅಪ್ರತ್ಯಕ್ಷರಾದರು ! ಹೆಣ್ಣನ್ನು ಪ್ರೇಮಿಸು ಎಂದರು - ಯಾವ ಹೆಣ್ಣನ್ನು ಎಂದು ಹೇಳಲಿಲ್ಲ ! ನಾನು ಪ್ರತಿ ಹೆಣ್ಣನ್ನೂ ಪ್ರೇಮಿಸಿದೆ ! ಅದೇ ಕಾರಣವಾಗಿ ಯಾರೊಬ್ಬರೂ ಉಳಿಯಲಿಲ್ಲ ! ನಾನು ನನ್ನೊಳಗೆ ಹುದುಗಿಕೊಂಡೆ - ದೇವರನ್ನು ಕಂಡೆ !!

ಪ್ರೇಮ-ಬಂಧನ

ಪ್ರೇಮ ಬಂಧನ ! * " ಬಂಧಿಸಲ್ಪಟ್ಟ ಪ್ರೇಮ ಇಲ್ಲವಾಗುತ್ತದೆ !" ಎಂದೆ . " ಅರ್ಥವಾಗಲಿಲ್ಲ " ಎಂದರು . " ಪ್ರೇಮ ಸ್ವತಂತ್ರವಾಗಿರಬೇಕು - ಸಾಗರದಂತೆ " ಎಂದೆ . " ನಿನ್ನ ತಲೆ !" ಎಂದರು . " ಯಾಕಮ್ಮ ?" ಎಂದೆ . " ವಯಸ್ಸು ! ನಿನ್ನ ವಯಸ್ಸಿನವರಿಗೆ ಹಾಗೇ ಅನ್ನಿಸೋದು ! ಕಂಡ ಕಂಡವರನ್ನೆಲ್ಲಾ ಪ್ರೇಮಿಸಿ - ದೆನೆಂಬ ಭ್ರಮೆಯಲ್ಲಿ ನೀನೇನೋ ಭಾರಿ ಪ್ರೇಮಿ ಅನ್ನುವಂತೆ !" ಎಂದರು . " ಅಲ್ಲವಾ ಮತ್ತೆ ? ಬಂಧನವಿದ್ದರೆ ಇದೆಲ್ಲಾ ಹೇಗೆ ಸಾಧ್ಯ ?" ಎಂದೆ . " ಪ್ರಪಂಚದಲ್ಲಿರುವವರೆಲ್ಲಾ ಹೀಗೆ ಅಂದುಕೊಂಡರೆ ಮುಗೀತು ಕಥೆ !" ಎಂದರು . ಯೋಚನೆ ! ನಿಜ ಎಲ್ಲೋ ಏನೋ ಮಿಸ್‌ಹೊಡೀತಿದೆ !! " ಹಾಗಾದರೆ ಬಂಧನವೇ ಒಳ್ಳೆಯದು ಅನ್ನುತ್ತೀರ ?" ಎಂದೆ . " ಬಂಧನವೋ ಏನೋ .... ನನಗೆ ನಿಮ್ಮಪ್ಪನೇ ಪ್ರಪಂಚ - ನೀ ಹೇಳುವಂತೆ ಮಹಾಸಾಗರ ! ನಮ್ಮ ಪ್ರೇಮಬಂಧನದ ಸಾಫಲ್ಯ ನೀನು !" ನಾನೇನೂ ಮಾತನಾಡಲಿಲ್ಲ . ಅಮ್ಮನೇ ಹೇಳಿದರು - " ಇದೊಂದು ಬಂಧನ ಅಂದುಕೊಂಡು ಅದರಿಂದ ಹೊರಬರಲು ಇಬ್ಬರೂ ಶ್ರಮಿಸಿದ್ದರೆ ಏನಾಗುತ್ತಿತ್ತು ಹೇಳು ...." ಎಂದರು . ಏನು ಹೇಳಲಿ .... ಮೌನವಾದೆ !

ಪಾರ್ಕಿಂಗ್ ಸಮಸ್ಯೆ

ಪಾರ್ಕಿಂಗ್ ಸಮಸ್ಯೆ ತುಂಬಾ ಸೀರಿಯಸ್ ವಿಷಯ ಇದು ! ತಮಾಷೆ ಎಂದು ಹೇಳಿ ಬರೆದು ಆಮೇಲೆ ನಗು ಬರದೆ .... ಯಾಕೆ ಬೇಕು ...! ನಾವು ನಾಲ್ಕು ಜನ ಸ್ನೇಹಿತರು . ಪ್ರಾಣ ಸ್ನೇಹಿತರು ಎಂದು ಹೇಳಬಹುದು ... ಬಹದು ಅಲ್ಲ , ಪ್ರಾಣ ಸ್ನೇಹಿತರೇ ... ಇಬ್ಬರು ಗೃಹಸ್ಥರು - ನಾನೂ ತೇಜ ! ಇಬ್ಬರು ಬ್ರಹ್ಮಚಾರಿಗಳು - ಭಟ್ಟ , ಕೆಂಚ ಆಲಿಯಾಸ್ ರವಿಶಂಕರ್ ! ಗೃಹಸ್ಥರಿಬ್ಬರು ಆಚೆಗೂ ಇಲ್ಲ , ಈಚೆಗೂ ಇಲ್ಲ - ಒಂದೇ ಮೆಂಟಾಲಿಟಿ ! ಬ್ರಹ್ಮಚಾರಿಗಳಲ್ಲಿ ಕೆಂಚ ಶೇಖಡಾ ನೂರು - ಇರಿಟೇಟಿಂಗ್ ! ಇನ್ನೊಬ್ಬ - ಬಾಲ ಬ್ರಹ್ಮಚಾರಿ - ಭಟ್ಟ , ಪಕ್ಕಾ ಸೀರಿಯಸ್ - ಆದರೇನು ? ಅವನು ಏನು ಮಾಡಿದರೂ ಮಾತನಾಡಿದರೂ ನಮಗೆ ನಗು ಬರುತ್ತದೆ ! ಹಾಗೆಂದು ಅವ ಜೋಕರ್ ಅಲ್ಲ ! ಒಬ್ಬನ ಇರಿಟೇಷನ್ ಮತ್ತೊಬ್ಬನ ತಮಾಷೆಯಿಂದ ಕವರಪ್ ಆಗುವುದರಿಂದ ಒಂದು ರೀತಿಯ ಬ್ಯಾಲನ್ಸ್ - ನಮ್ಮ ಗೆಳೆತನದಲ್ಲಿ ! ಈ ಬ್ರಹ್ಮಚಾರಿಗಳಬಗ್ಗೆ ಹೇಳತೊಡಗಿದರೆ ಸಾವಿರಾರು ವಿಷಯಗಳಿದೆ .... ಅದರಲ್ಲಿ ನಮ್ಮ ನಾಲ್ವರಿಗೂ ಪ್ರಿಯವಾದ ಒಂದು ಸಣ್ಣ ಘಟನೆಯಿದೆ . ನಾವೊಂದು ಟೂರ್ ಹೋದೆವು . ಮೂರು ದಿನದ್ದು . ಮೈಸೂರಿನಿಂದ ಮೂಕಾಂಬಿಕಾಗೆ . ಬ್ರಹ್ಮಚಾರಿಗಳಿಬ್ಬರು ಒಂದುಗಾಡಿ , ನಾವಿಬ್ಬರು ಒಂದು . ಎಲೆಕ್ಷನ್ ಸಮಯ . ಭಾರೀ ಚೆಕಿಂಗ್ . ಟೂವೀಲರ್‌ಗಳಿಗೆ ಅಂಥಾ ಸಮಸ್ಯೆಯೇನೂ ಇರಲಿಲ್ಲ .... ಇನ್ನೇನು ಮೂಕಾಂಬಿಕಾಗೆ ಐದು ನಿಮಿಷದ ದೂರ ... ಜೀಪೊಂದು ಯೂಟರ್ನ್ ತೆಗೆದುಕೊಳ್ಳಲು ರಿವ...

ನಿಸ್ಸಹಾಯಕತೆ!

ನಿಸ್ಸಹಾಯಕತೆ ಇದೇ ಕಡೆಯ ದಿನ - ಕೊನೆಯ ತೀರುಮಾನ ! ಸಣ್ಣ ಆಸೆಯಿತ್ತು - ಉಳಿಸಿಕೊಳ್ಳುತ್ತಾಳೆಂದು ! ಅವಳನ್ನು ತಪ್ಪು ಹೇಳಲೇ ಅಥವಾ ನನ್ನ ನಿಸ್ಸಹಾಯಕತೆಯನ್ನು ಒಪ್ಪಿಕೋ ಎಂದು ಬೇಡಲೆ ? ಹೇಗೆ ಸಾಧ್ಯ ? ಅವಳೇ ತನ್ನ ನಿಸ್ಸಹಾಯಕತೆಯನ್ನು ನೀನೇ ಒಪ್ಪಿಕೋ ಎಂದಮೇಲೆ ? ಆದರೆ ಅವಳ ಪ್ರಕಾರ ಅವಳದ್ದು ನಿಸ್ಸಹಾಯಕತೆ - ನನ್ನದು ಕೈಯ್ಯಲ್ಲಾಗದ ತನ ! ೧ “ ಐ ಲವ್‌ಯು !” ಎಂದೆ . ನಿಟ್ಟಿಸಿ ನೋಡಿದಳು . ಕಣ್ಣುಗಳಲ್ಲಿ ಹೊಳಪು ! ನನಗೆ ನಂಬಿಕೆಯಿತ್ತು ಅವಳು ಒಪ್ಪಿಕೊಳ್ಳುತ್ತಾಳೆಂದು ! ರಾಂಕ್ ಸ್ಟೂಡೆಂಟ್ - ನೋಡಲೂ ಪರವಾಗಿಲ್ಲ ! ಒಪ್ಪಿಕೊಳ್ಳದಿರಲು ಕಾರಣವೇನೂ ಇರಲಿಲ್ಲ ! “ ಲವ್‌ಯೂ ಟೂ !” ಎಂದಳು . ದಿನಗಳುರುಳಿದವು ! ಕಾಲೇಜು ಜೀವನ ಮುಗಿಯಿತು ! ೨ “ ಐ ಲವ್‌ಯು !” ಎಂದೆ - ಎಂದಿನಂತೆ . ಅವಳನ್ನು ಕಂಡಾಗಲೆಲ್ಲಾ ಪ್ರೇಮ ಉಕ್ಕುತ್ತದೆ .... “ ನೀನು ಬೇರೆ ಹೆಣ್ಣುಮಕ್ಕಳನ್ನು ಯಾಕೆ ನೋಡುತ್ತೀಯ ?” ಎಂದಳು . “ ನೀನು ಬೇರೆ ಹುಡುಗರನ್ನು ನೋಡುತ್ತೀಯಲ್ಲ ?” “ ಅದು ಬೇರೆ ಇದು ಬೇರೆ !” ಎಂದಳು . “ ಹೇಗೆ ? ಅದೊಂದು ಆಯಾಚಿತ ವರ್ತನೆ ಅಷ್ಟೆ ಹೊರತು - ಗಂಡು ಹೆಣ್ಣನ್ನು ಹೆಣ್ಣು ಗಂಡನ್ನು ನೋಡುವುದು ತಪ್ಪೇ !” “ ಇಲ್ಲ ... ನೀನು ಬದಲಾಗುತ್ತಿದ್ದೀಯ ! ನಿನಗೆ ನಾನು ಸೆಟ್ ಆಗುವುದಿಲ್ಲ !” ಎಂದಳು . ೩ “ ಐ ಲವ್‌ಯು !” ಎಂದೆ - ಅವಳ ಕಣ್ಣಿನಾಳಕ್ಕೆ ದಿಟ್ಟಿಸಿ ! “ ನಿನಗೆ ನಿನ್ನ ಗುರಿಯೇ ಹೆಚ್ಚೆ ?...

ತೀರ್ಮಾನ!

ತೀರ್ಮಾನ ೧ ತೀರ್ಮಾನ ! ತೆಗೆದುಕೊಳ್ಳುವುದು ಎಷ್ಟು ಕಷ್ಟವೋ , ಅಳವಡಿಸಿಕೊಳ್ಳುವುದು - ಅದಕ್ಕನುಗುಣವಾಗಿ ಬದುಕುವುದು ಅದಕ್ಕಿಂತ ಕಷ್ಟ ! ನಲವತ್ತು ವರ್ಷ ಮುಂಚೆ ನಾನು ತೆಗೆದುಕೊಂಡ ತೀರುಮಾನ .... ತೃಪ್ತಿಯಿದೆ ಈಗ ! ಅಸಾಧ್ಯ ಪ್ರೇಮ ಅವಳಿಗೆ ನನ್ನಲ್ಲಿ . ಹತ್ತು ವರ್ಷದ ಪ್ರೇಮ - ಅವಳ ಆಸೆಯಂತೆ ಅವಳಿಗೆ ಟೀಚರ್ ಕೆಲಸ ಸಿಕ್ಕಿ ಮದುವೆಯಲ್ಲಿ ಸಾರ್ಥಕತೆಯನ್ನು ಹೊಂದಿದಾಗ ಭವಿಷ್ಯದಬಗ್ಗೆ ಯಾವ ಯೋಚನೆಯೂ ಇರಲಿಲ್ಲ ! ನಾನಾಗ ಮುಂಬೈಯಲ್ಲಿದ್ದೆ . ಹದಿನೈದನೇ ವರ್ಷದಲ್ಲಿ ಜೀವನೋಪಾಯಕ್ಕಾಗಿ ಕಳ್ಳತನದಲ್ಲಿ ರೈಲುಹತ್ತಿ ಬಂದವನು .... ತಮ್ಮಂದಿರ ಸಹಕಾರದೊಂದಿಗೆ ಸ್ವಂತವಾಗಿ ಅಂಗಡಿಯೊಂದನ್ನು ಪ್ರಾರಂಭಿಸುವಷ್ಟು ಮಟ್ಟಿಗೆ ಬೆಳೆದಿದ್ದೆ ! ಮದುವೆಯಾದಾಗಲೇ ನಮಗೊಂದು ವಾಸ್ತವದ ಅರಿವಾಗಿದ್ದು ! ನಮ್ಮ ಬದುಕು - ‘ ನಾನೊಂದು ತೀರ , ನೀನೊಂದು ತೀರ !’ ದುಃಖ ದುಮ್ಮಾನಗಳಿಂದ - ಅಪಮಾನ ಅಸಹಕಾರಗಳಿಂದ ತುಂಬಿದ್ದ ಬದುಕು ನಮ್ಮದು ! ಹಠ - ಗೆಲ್ಲಬೇಕು , ಅಂದುಕೊಂಡಿದ್ದು ಸಾಧಿಸಬೇಕೆಂಬ ಹಠ - ಅವಳನ್ನು ಟೀಚರನ್ನಾಗಿಸಿತ್ತು - ನನ್ನನ್ನು ಸ್ವಂತ ಅಂಗಡಿಯ ಮಾಲೀಕನನ್ನಾಗಿಸಿತ್ತು ! ಈಗ .... ಯಾರಾದರೊಬ್ಬರು ಬಿ - ಟ್ಟು - ಕೊ - ಡ - ಬೇ - ಕು ! ಸ್ವಲ್ಪ ದಿನ ನೋಡೋಣ ಎಂದು ನಾನು ಮುಂಬೈಗೆ ಹಾರಿದೆ . ಎರಡು ರೀತಿಯ ಸಮಸ್ಯೆ ಎದುರಾಯಿತು ! ಒಂದು - ಮದುವೆಯಾದಾಗಲೇ ತಿಳಿದದ್ದು ನಾವು ಎಷ್ಟು ಆಳವಾಗಿ ಪ್ರೇಮಿಸುತ್ತಿದ್ದೇವೆ...

ಜ್ಞಾನಾಜ್ಞಾನ

ಜ್ಞಾನಾಜ್ಞಾನ ! ಏನನ್ನೂ ತಿಳಿದುಕೊಳ್ಳದಿರುವುದು ಅಜ್ಞಾನವಲ್ಲ ! ತಿಳಿದುಕೊಳ್ಳಬೇಕೆಂಬ ಕುತೂಹಲವೇ ಇಲ್ಲದಿರುವುದು , ತಾನು ತಿಳಿದುಕೊಂಡಿರಿವುದೇ ಸರಿ ಅನ್ನುವ ಅಹಂ - ಅಜ್ಞಾನ ! ಜ್ಞಾನಿಯಾಗುವುದರಲ್ಲಿ ಎರಡು ವಿಧ ! ಒಂದು ಹನುಮಂತನಂತೆ ! ಈತನಿಗೆ ಸಂಶಯಗಳಿಲ್ಲ ! ಗುರುಗಳು - ಹಿರಿಯರು ಹೇಳಿದ್ದನ್ನು ಹಾಗೆಯೇ ಒಪ್ಪಿಕೊಂಡು ಬಿಡುತ್ತಾನೆ ! ನಂತರ ಆತ್ಮವಿಮರ್ಶೆಯ ಮೂಲಕ ಅದನ್ನು ಸ್ಥಿರೀಕರಿಸುತ್ತಾನೆ ! ಎರಡು ಅರ್ಜುನನಂತೆ ! ಈತನಿಗೆ ಸಂಶಯಗಳೋ ಸಂಶಯಗಳು ! ಈತನ ಗೋಳು ಮುಗಿಯುವುದಿಲ್ಲ ! ಶ್ರೀಕೃಷ್ಣ ಪರಮಾತ್ಮನಂತಾ ಪುಣ್ಯಾತ್ಮ ಸಿಕ್ಕಿದ್ದು ಈತನ ಪೂರ್ವಜನ್ಮ ಸುಕೃತ ! ನಾನು ಅರ್ಜುನನಂತೆ ! ನನ್ನ ಗೋಳು ತಡೆದುಕೊಳ್ಳುವುದು ಸ್ವಲ್ಪ ಕಷ್ಟ ! ಆದರೆ ಶ್ರೀಕೃಷ್ಣ ಪರಮಾತ್ಮನಂತಾ ಹಲವು ಜೀವಗಳು ದೊರಕಿದ್ದು ನನ್ನ ಪುಣ್ಯ ! ಪ್ರಸ್ತುತಾ ಒಂದು ಗೊಂದಲದಲ್ಲಿದ್ದೇನೆ ! ಗೊಂದಲಕ್ಕೆ ಕಾರಣ ನನ್ನದೇ ಆದ ನಂಬಿಕೆ ! ಪುಸ್ತಕವೊಂದನ್ನು ಓದಿದೆ ! ಆಶ್ಚರ್ಯವಾಯಿತು ! ಇಷ್ಟು ಮಟ್ಟಿನ ನಿಯತ್ತಿನಿಂದ ಪುಸ್ತಕ ಬರೆಯಬಹುದೇ ಅನ್ನುವ ಆಶ್ಚರ್ಯವದು ! ಯಾವುದೇ ಲೇಖಕನಿಗಾದರೂ ಯಾವುದೋ ಒಂದು ಪಾತ್ರದಕಡೆಗೆ ಒಲವು ಹೆಚ್ಚಿರುತ್ತದೆ ! ಆದ್ದರಿಂದ ಸಣ್ಣಪುಟ್ಟ ಕೊರತೆಗಳನ್ನು ಮುಚ್ಚಿಟ್ಟು ಆ ಪಾತ್ರವನ್ನು ವೈಭವೀಕರಿಸುತ್ತಾನೆ - ತ್ತೇನೆ ! ಆದರೆ ಈ ಪುಸ್ತಕದಲ್ಲಿ ಹಾಗಿಲ್ಲ . ನಾಯಕನಾದರೂ ತನ್ನ ಕೊರತೆಯನ್ನು ಒಪ್ಪಿಕೊಳ್ಳುವಂತೆ - ಆ ಪುಸ್...