ಸ್ಕೆಚ್/ಪ್ಲಾನ್!
“ನಾಳೆ ಸಂಜೆಗೆ ಫಿಕ್ಸ್!” ಎಂದೆ.
“ಪ್ಲಾನ್ ಅದೇನ?” ಎಂದು ಕೇಳಿದ ಕಥೆಗಾರ.
“ಹಾ..., ನೀನು ಹೇಳಿದ್ದೆ..., ಆದ್ರೆ ಲಾರಿ ಅಲ್ಲ- ಬಸ್! ಬಸ್ ಆದ್ರೆ ಯಾರಿಗೂ ಜಾಸ್ತಿ ಡೌಟ್ ಆಗಲ್ಲ- ಆಕಸ್ಮಿಕ ಆಕ್ಸಿಡೆಂಟ್! ಸಿಸಿ ಕ್ಯಾಮೆರಾ ಇರೋಕಡೇನೇ ಮಾಡೋದು ಅಂತ...! ಎಲ್ಲಾ ಏರ್ಪಾಡು ಮಾಡಿ ಆಯಿತು!” ಎಂದೆ.
ನಾವು ನಾಲ್ಕು ಜನ ಕುಳಿತಿದ್ದೆವು.
“ಆದ್ರೂ..., ಯಾಕೆ ಅಂತ ಹೇಳಲೇ ಇಲ್ಲ ನೀನು!” ಎಂದ ಒಬ್ಬ.
“ಹೇಳ್ತೀನಿ- ಈಗಲ್ಲ!” ಎಂದೆ.
“ಇನ್ನೇನು ಹೊರಡೋದೇ ತಾನೆ?” ಎಂದ ಮತ್ತೊಬ್ಬ ಗೆಳೆಯ.
“ಹಾ..., ನಾಳೆ ಇಲ್ಲೇ..., ಇದೇ ಟೈಂ!” ಎಂದೆ.
“ಇರಿ..., ನಾಲಕ್ಕು ಟಿ ಹೇಳಿ ಬರ್ತೀನಿ! ಕುಡಿದು ಹೋಗೋಣ!” ಎಂದ ಕಥೆಗಾರ.
ಅವನು ಎದ್ದು ಬಾಗಿಲು ದಾಟಿದಾಗ ಉಳಿದವರಿಗೆ ಹೇಳಿದೆ...,
“ನನ್ನ ಬಗ್ಗೇನೇ ಕಥೆ ಬರೀತಾನೆ! ಏನ್ ಮಾತಾಡಿದ್ರೂ ಕಥೆ! ಮಾತಾಡದೆ ಇದ್ರೂ ಕಥೆ! ಕೂತ್ರೂ ಕಥೆ, ನಿಂತ್ರೂ ಕಥೆ! ಕೊನೆಗೆ ನಾನು ಸತ್ರೂ ಕಥೆ ಬರೀತಾನೆ!! ಸಾಕಾಗಿದೆ!! ನಾಳೆ ಸಂಜೆ ಇಲ್ಲಿಗೆ ಬರುವ ದಾರಿಯಲ್ಲಿ ಅವನ ಕಥೆ ಮುಗಿದಿರುತ್ತದೆ! ಅವನದೇ ಪ್ಲಾನ್...!”
ಕಥೆಗಾರ ಎಸ್ಕೇಪ್ ತಂದ ಟೀ ಮೂರು ಜನರದ್ದು ಅವರೇ ಕುಡೀಬಹುದು 😂😂ಕಥೇಲಿ ಮೂರು ಜನರು ಸ್ಪಾಟ್ ಔಟ್ 😂😂ಕಥೆಗಾರರು ನಾಳೆ ಮಾಡೋದು ಇವತ್ತೇ ಮಾಡತಾರೆ ಅಂತ ಗೊತ್ತಿಲ್ಲ ಇವರಿಗೆ ಗೊತ್ತಿಲ್ಲ ಅನಿಸುತ್ತೆ 😂😂
ReplyDeleteಕಥೆಗಾರ ಎಸ್ಕೇಪ್ ತಂದ ಟೀ ಮೂರು ಜನರದ್ದು ಅವರೇ ಕುಡೀಬಹುದು 😂😂ಕಥೇಲಿ ಮೂರು ಜನರು ಸ್ಪಾಟ್ ಔಟ್ 😂😂ಕಥೆಗಾರರು ನಾಳೆ ಮಾಡೋದು ಇವತ್ತೇ ಮಾಡತಾರೆ ಅಂತ ಗೊತ್ತಿಲ್ಲ ಇವರಿಗೆ ಗೊತ್ತಿಲ್ಲ ಅನಿಸುತ್ತೆ 😂😂
ReplyDelete