ಪ್ರೇಮ, ವ್ಯಕ್ತಿತ್ವ ಮತ್ತು ನಂಬಿಕೆ!
ಪ್ರೇಮ:-
ಎಷ್ಟು ಚಂದ ನನ್ನ ಬಂಗಾರಿ! ಅವಳ ಮುಖದ ನೆಮ್ಮದಿ- ನನ್ನ ಗೆಲುವು!
ಅಂಗಾತನೆ ಮಲಗಿರುವ ನನ್ನ ಬಲಭಾಗದಲ್ಲಿ, ನನ್ನ ಎದೆಯಮೇಲೆ ತಲೆಯಿಟ್ಟು, ನನ್ನನ್ನು ಅಪ್ಪಿ ಎಷ್ಟು ಶಾಂತವಾಗಿ ನಿದ್ರಿಸುತ್ತಿದ್ದಾಳೆ!
ಅವಳ ತಲೆಯಮೇಲೊಂದು ಮುತ್ತು ಕೊಟ್ಟೆ.
ನನ್ನ ಬಂಗಾರಿ...., ಅವಳನ್ನು ನಾನು ಕರೆಯುವುದೇ ಹಾಗೆ!
ಸುಮಾರು ಹದಿನೈದು ವರ್ಷದ ದಾಂಪತ್ಯ!
ಪರಿಚಯ ಸಾಮಾನ್ಯವಾಗಿಯೇ ಆಗಿತ್ತು..., ಸಿನೆಮಾದ ಶೂಟಿಂಗ್ ಒಂದರಲ್ಲಿ ಇಬ್ಬರೂ ಅಸಿಸ್ಟಂಟ್ ಡೈರೆಕ್ಟರಾಗಿ ಕೆಲಸ ಮಾಡುತ್ತಿದ್ದೆವು. ಸಿನೆಮಾದಲ್ಲಿದ್ದ ಅಷ್ಟೂ ಜನರೊಂದಿಗಿನ ಅವಳ ಅಕ್ಕರೆ, ಒಲವು, ವಾತ್ಸಲ್ಯಪೂರಿತ ಒಡನಾಟ ನನ್ನನ್ನು ಸೆಳೆದಿತ್ತು.
ಪರಿಚಯ..., ಗಾಢ ಪರಿಚಯವಾದಾಗ, ಅವಳಬಗ್ಗೆ ಸಣ್ಣ ಅನುಕಂಪವೂ ಮೂಡುವಂತಾ ನಿಜವೊಂದು ತಿಳಿಯಿತು!
ಅವಳು ವಿಧವೆ!
ಇಪ್ಪತ್ಮೂರನೇ ವಯಸ್ಸಿಗೆ ಮದುವೆಯಾಗಿ, ಇಪ್ಪತ್ತೈದನೇ ವಯಸ್ಸಿಗೆ ವಿಧವೆಯಾಗಿದ್ದಳು!
ಗರ್ಬಿಣಿಯಾದ ತನ್ನ ತಂಗಿಯನ್ನುಆಂಬ್ಯುಲೆನ್ಸ್‌ನಲ್ಲಿ ಹೆರಿಗೆಗೆಂದು ಕರೆದುಕೊಂಡು ಹೋಗುತ್ತಿದ್ದಾಗ ಟಿಪ್ಪರ್ ಲಾರಿ ಗುದ್ದಿ ಆಂಬ್ಯುಲೆನ್ಸ್‌ನಲ್ಲಿದ್ದ ಅಷ್ಟೂ ಜನ ಮರಣಿಸಿದ್ದರು!
ಇವಳ ಗಂಡ, ಗಂಡನ ತಂಗಿ(ಹೊಟ್ಟೆಯೊಳಗಿದ್ದ ಪಾಪುವೂ!), ತಂಗಿಯ ಗಂಡ- ಆತನ ಅಮ್ಮ ಮತ್ತು ಡ್ರೈವರ್..., ಎಲ್ಲರೂ!
ನಾನು ಪರಿಚಯವಾಗುವಾಗ ಅವಳಿಗೆ ಮೂವತ್ತೊಂದು ವರ್ಷ ವಯಸ್ಸು! ನನಗೆ ಇಪ್ಪತ್ತೆಂಟು!!
ಅವಳಬಗ್ಗೆ ನನಗಿದ್ದದ್ದು ಆಕರ್ಷಣೆಯ? ಅನುಕಂಪವಾ? ಪ್ರೇಮವಾ?
“ನೀನು ನನಗೆ ಬೇಕು!” ಎಂದಿದ್ದೆ.
ಅವಳು ಉತ್ತರವೇನೂ ಹೇಳಲಿಲ್ಲವಾಗಲಿ ಸಿನೆಮಾದ ಕೆಲಸಗಳೆಲ್ಲಾ ಮುಗಿದು ಎಲ್ಲರೂ ಅವರವರ ಮನೆಗೆ ಮರಳುವಾಗ ಕೇಳಿದ್ದಳು...,
“ಇವತ್ತು ಒಂದು ದಿನ ನಿನ್ನೊಂದಿಗೆ ಮಲಗಲೇನೋ?”
ಒಂದು ನಿಗೂಢವಾದ ರಹಸ್ಯ ಅಂದು ಬಯಲಾಯಿತು!
ಎರಡುಮೂರು ಲಾಡ್ಜ್‌ಗೆ ಹೋದೆವಾದರೂ ಲೋಕಲ್ ಐಡಿ ಆಕ್ಸೆಪ್ಟ್ ಮಾಡುವುದಿಲ್ಲ ಅನ್ನುವ ಕಾರಣಕ್ಕೆ ರೂಂ ಸಿಗಲಿಲ್ಲ!
'ಲೋಕಲ್' ಲಾಡ್ಜ್‌ಗೆ ಹೋಗಲು ನಾನು ತಯಾರಿರಲಿಲ್ಲ!!
ಮನೆಗೆ ಕರೆತಂದರೆ ಅಪ್ಪ ಅಮ್ಮನಿಗೆ ಏನು ಹೇಳುವುದು?
ಆದರೂ..., ಮನೆಗೇ ಕರೆತರಲು ತೀರ್ಮಾನಿಸಿದೆ.
ರಾತ್ರಿ ಹನ್ನೊಂದಕ್ಕೆ ಮನೆಗೆ ಹೋಗುವುದು! ಅಪ್ಪ ಅಮ್ಮ ಮಲಗಿರುತ್ತಾರೆ! ಅವರು ಗ್ರೌಂಡ್‌ಫ್ಲೋರ್, ನಾನು ಮಹಡಿಯಮೇಲೆ! ನನ್ನಬಳಿ ಸಪರೇಟ್ ಕೀ ಇದೆ. ಬೆಳಗ್ಗೆ ನಾಲ್ಕೂವರೆಗೆ ಹೊರಬೀಳುವುದು- ಅನ್ನುವ ಪ್ಲಾನ್!
ಹೆಣ್ಣಿನೊಂದಿಗೆ ಅದು ನನ್ನ ಮೊದಲ ಅನುಭವ! ಹತ್ತು ಸೆಕೆಂಡ್ ಕೂಡ ಹಿಡಿದಿಟ್ಟುಕೊಳ್ಳಲಾರದೇ ಹೋದೆ!
ಆ ವಿಷಯದಲ್ಲಿ ಅವಳೋ.....?
ರಾ-ಕ್ಷ-ಸಿ!
ನಿಂಫೋಮಾನಿಯಾಕ್ ಅನ್ನಬಹುದೇ?
ಅರ್ಧ ನಿಂಫೋಮಾನಿಯಾಕ್ ಅನ್ನಬಹುದು! ಅವಳಿಗೆ ಸೆಕ್ಸ್ ಬೇಕೆಂಬ ಆಸೆಯೇನೋ ಇದೆ! ಆದರೆ ಸ್ವಲ್ಪವೂ ಹಿಡಿದಿಟ್ಟುಕೊಳ್ಳಲೇ ಆಗದು ಅನ್ನುವಷ್ಟು ಮಟ್ಟಿಗೆ ಅಲ್ಲ!
ಸೆಕ್ಸ್‌ನಲ್ಲಿ ಏರ್ಪಡುವಾಗಮಾತ್ರ ಅಷ್ಟು ಸುಲಭವಾಗಿ ತೃಪ್ತಳಾಗುವುದಿಲ್ಲ- ಅರ್ಥಾತ್- ಅವಳನ್ನು ಸೆಕ್ಸ್‌ನಲ್ಲಿ ತೃಪ್ತಿಪಡಿಸುವುದು ಕಷ್ಟ!!
ನಾನು ಪಕ್ಕಕ್ಕೆ ಸರಿದಾಗ ಅತೃಪ್ತಿಯಿಂದ ಒದ್ದಾಡಿ ಹೋದಳು!
ಹಾಗೆಂದು ನನ್ನನ್ನು ಕೀಳಾಗಿ ಕಾಣಲಿಲ್ಲ. ತಲೆ ನೇವರಿಸಿ ಹಣೆಗೊಂದು ಮುತ್ತು ಕೊಟ್ಟು...,
“ಈಗ ಹೇಳು..., ನಿನಗೆ ನಾನು ಬೇಕ?” ಎಂದಳು.
“ಈಗ..., ಇನ್ನೂ ಸ್ಪಷ್ಟವಾಗಿ..., ತೀರ್ಮಾನ ಹೇಳಬೇಕಾದವಳು ನೀನೇ!” ಎಂದೆ.
ನನ್ನ ಮಾತಿನ ಅರ್ಥವಾಗದಷ್ಟು ಮುಗ್ಧೆಯಲ್ಲ ಅವಳು. ಉತ್ತರ ಏನು ಕೊಡಬೇಕೆಂಬ ಗೊಂದಲಕ್ಕೆ ಬಿದ್ದಳು.
ಹೌದು..., ಅವಳನ್ನು ತೃಪ್ತಿಪಡಿಸಲಾಗದ ನನ್ನನ್ನು ಒಪ್ಪುವುದು ಬಿಡುವುದು ಅವಳ ತೀರ್ಮಾನವೇ ಹೊರತು- ಅವಳು ನನಗೆ ಬೇಕೆನ್ನಿಸಿದ್ದು 'ಕೇವಲ' ಇದಕ್ಕಾಗಿ ಅಲ್ಲ!!
ಜೊತೆಗೆ..., ಯಾರೊಂದಿಗೇ ಆದರೂ..., ನನ್ನದು ಇಷ್ಟೇ ಅನ್ನುವಲ್ಲಿ..., ಅವಳಿಂದ ನಾನು ತೃಪ್ತ!!
ಅದೇ ರಾತ್ರಿ..., ಮತ್ತೊಮ್ಮೆ ಶ್ರಮಿಸಿದ್ದೆ! ಇಲ್ಲ..., ಹತ್ತು ಸೆಕೆಂಡ್‌ಗಿಂತ ಹೆಚ್ಚು ಹಿಡಿದಿಟ್ಟುಕೊಳ್ಳುವ ಶಕ್ತಿ ನನಗಿಲ್ಲ!
ಅವಳಮೇಲಿನ ನನ್ನ ಅನುಕಂಪಕಿಂತ..., ನನ್ನಮೇಲಿನ ಅವಳ ಕರುಣೆಯೇ ಕಾರಣವಾಗಿ...,
“ಮದುವೆಯಾಗೋಣ!” ಎಂದಿದ್ದಳು.
ಮಾರನೆಯ ಬೆಳಿಗ್ಗೆ ನಾಲ್ಕಕ್ಕೆ ಎದ್ದು ಬಾಗಿಲು ತೆರೆದಾಗ..., ಬಾಗಿಲಕಡೆಯೇ ನೋಡುತ್ತಾ ಕುಳಿತಿದ್ದಾರೆ ಅಪ್ಪ- ಅಮ್ಮ!
ಮುಂದಿನದ್ದೆಲ್ಲಾ ಇತಿಹಾಸ! ಒಂದು ತಿಂಗಳಿಗೆ ರಿಜಿಸ್ಟಾರ್ ಆಫೀಸ್‌ನಲ್ಲಿ ಮದುವೆ!
ನನ್ನ ಅದೃಷ್ಟವಾಗಿ..., ನನ್ನ ಮನ- ಮನೆಯ ಬೆಳಕಾಗಿ..., ಬಂದು ಸೇರಿದ್ದಳು ನನ್ನ ಬಂಗಾರಿ!
“ಏನಂತಾ ಯೋಚನೆ? ಅಥವಾ ಕಣ್ಣು ತೆರೆದುಕೊಂಡು ನಿದ್ದೆ ಮಾಡ್ತಿದೀಯೋ ಹೇಗೆ?” ಎಂದಳು- ನನ್ನ ಎದೆಯಿಂದ ತಲೆಯೆತ್ತಿ ನನ್ನ ಮುಖ ನೋಡುತ್ತಾ....
“ನಮ್ಮ ಮೊದಲ ರಾತ್ರಿಯನ್ನು ನೆನಪಿಸಿಕೊಳ್ಳುತ್ತಿದ್ದೆ!” ಎಂದು ಕಣ್ಣು ಮಿಟುಕಿಸಿದೆ.
“ನಿನ್ನ ತಲೆ! ನಾನೆಲ್ಲೋ ನಿನ್ನೆಯ ಅವರೊಂದಿಗಿನ ವಾಗ್ವಾದದ ನೆನಪಿನಲ್ಲಿರುತ್ತೀಯೇನೋ ಅಂದುಕೊಂಡೆ! ಮತ್ತೆ ಮಾತಾಡ್ಸಿದ್ಯ?” ಎಂದಳು.
“ಇಲ್ಲವೇ...! ಬಲಿ ಹಾಕೋಕೆ ಖಡ್ಗ ಎತ್ತಿ ಹಿಡಿದಿರುವಾಗ ತಲೆ ಕೊಡ್ಲ!? ಖಡ್ಗ ಆಚೆಗಿಡಲಿ ಮಾತಾಡಿಸ್ತೀನಿ!” ಎಂದೆ.
ಎದ್ದು, ಬಟ್ಟೆ ಹಾಕಿ, ನನ್ನ ಹಣೆಗೊಂದು ಮುತ್ತುಕೊಟ್ಟು, ಹೊರಕ್ಕೆ ಹೋದಳು. ಕೆಳಗೆ ಹೋಗಿ ಅಮ್ಮನೊಂದಿಗೆ ಸೇರಿ ಅಡುಗೆ ಮಾಡಲು.
ನಾನು ನಿನ್ನೆಯ 'ಅವರೊಂದಿಗಿನ' ವಾಗ್ವಾದದ ಯೋಚನೆಗೆ ಬಿದ್ದೆ!
*
ವ್ಯಕ್ತಿತ್ವ:-
'ಅವರು' ಎಂದರೆ ಒಬ್ಬರು ಅಮ್ಮ..., ಹೆತ್ತಮ್ಮನಲ್ಲ- ಒಬ್ಬರು ಅಮ್ಮ!
ಅವರೊಂದಿಗೆ ನಿನ್ನೆ ನಡೆದದ್ದು ವಾಗ್ವಾದವಾ? ಜಗಳವಾ? ಬರೀ ತರ್ಕವಾ?!
ಒಬ್ಬ ಗಂಡಸಿನ ಬಗ್ಗೆ ಚರ್ಚೆ ಬಂತು. ಸಾಮಾನ್ಯವಾಗಿ ನಾನು ಯಾರೆಂದರೆ ಯಾರೊಂದಿಗೂ ಮೂರನೆಯ ವ್ಯಕ್ತಿಯಬಗ್ಗೆ ಮಾತನಾಡುವವನಲ್ಲ. ಆದರೆ ಯಾಕೋ..., ಈ ಅಮ್ಮನೊಂದಿಗಿನ ಸಲಿಗೆಯಿಂದಾಗಿಯೋ ಏನೋ..., ಮಾತನಾಡಿದೆ!
ಲಾಘವವಾಗಿ, ಆತನಬಗೆಗಿನ ನನ್ನ ಅಭಿಪ್ರಾಯ ಮಾತ್ರ ಮನಸ್ಸಿನಲ್ಲಿಟ್ಟು ತುಂಬಾ ಹಗುರವಾಗಿ ಮಾತನಾಡುತ್ತಿದ್ದೆ!
ಅದು ಅಮ್ಮನಮೇಲೆ ಯಾವ ರೀತಿಯ ಪ್ರಭಾವ ಬೀರುತ್ತಿದೆಯೋ ಯೋಚಿಸಲೇ ಇಲ್ಲ!!
ಈ ಅಮ್ಮನೊಂದಿಗೆ 'ಏನು ಬೇಕಿದ್ದರೂ' ಮಾತನಾಡಬಹುದು ಅನ್ನುವ ಸಲಿಗೆ ನನಗೆ!
ಆದರೆ ಈ 'ಏನು ಬೇಕಿದ್ದರೂ' ಅನ್ನುವುದು ಹೇಗೆ ಉಲ್ಟಾ ಅರ್ಥ ಪಡೆದುಕೊಂಡಿತು ಅನ್ನುವುದು ಅವರೊಂದಿಗಿನ ಸಂಭಾಷಣೆಯ ನಂತರವೇ ಹೊಳೆದದ್ದು... ಅದೊಂದು ಪಾಠ!
ನಮ್ಮ ಮಾತುಗಳಿಗೆ ಎರಡು ಅರ್ಥಗಳು ಬರುತ್ತವೆ ಅನ್ನುವುದು ಕೂಡ ಕೆಲವೊಮ್ಮೆ ಮಾತುಕತೆಯ ನಂತರವೇ ಹೊಳೆಯುವುದು! ಮೊದಲೇ ಹೊಳೆದರೆ ಆಡದೆ ಇರಬಹುದು ಅಥವಾ ಒಂದೇ ಅರ್ಥ ಬರುವಂತೆ ಆಡಬಹುದು!
ಆದರೆ ತಿಳಿಯದೇ ಆಡಿ..., ನಂತರ ಅರಿವಿಗೆ ಬಂದರೆ ಏನು ಮಾಡುವುದು?
ಕ್ಷಮೆ ಕೇಳುವುದು!!
“ಆತನಿಗೆ ಹೆಂಗಸರಬಗ್ಗೆ ಇರುವ ಆಸಕ್ತಿ ಗಂಡಸರಬಗ್ಗೆ ಇಲ್ಲ!” ಎಂದಿದ್ದೆ.
“ನನ್ನ ಬಗ್ಗೆಯೂ ಅವನಿಗೇನೂ ಅಂತಾ ಆಸಕ್ತಿಯಿಲ್ಲ!” ಎಂದಿದ್ದರು ಅಮ್ಮ.
“ಅದು ನಿಮಗೆ ವಯಸ್ಸಾಯಿತು ಆದ್ದರಿಂದ!” ಎಂದು ಬಿಟ್ಟೆ- ಇದು ಮೊದಲ ಪಾಯಿಂಟ್!
ಇನ್ನು...,
“ಸುಮಾರು ವರ್ಷದಿಂದ ಅವನು ನನಗೆ ಗೊತ್ತೋ..!” ಅಂದಿದ್ದರು.
“ಅವರು ನಿಮಗೆ ಗೊತ್ತು ಅನ್ನೋದು ಹದಿಹರೆಯದ ಮಕ್ಕಳ ನಂಬಿಕೆಯಂತೆ! ಒಬ್ಬ ಗಂಡಾಗಿ ನನಗೆ ಗೊತ್ತಿರುವಷ್ಟು ಆತನ ಬಗ್ಗೆ ನಿಮಗೆ ಗೊತ್ತಿಲ್ಲ!” ಎಂದೆ- ಇದು ಎರಡನೇ ಪಾಯಿಂಟ್!!
ನಂತರ ಏನೇ ಸಂಭಾಷಣೆ ನಡೆದಿರಲಿ..., ಯಾರೊಂದಿಗೆ ಮಾತನಾಡುತ್ತಿದ್ದೇನೆ ಅನ್ನುವ ವಿವೇಚನೆಯಿಲ್ಲದೆ..., ನನಗೇ ಗೊತ್ತು ಅನ್ನುವ ದಾರ್ಷ್ಟ್ಯದಲ್ಲಿ ನಾನಾಡಿದ ಮಾತುಗಳು ನನ್ನ ಅಪಕ್ವತೆಯನ್ನು ಸೂಚಿಸುತ್ತದೆ!
ಹಾಗೆ ಮಾತನಾಡಿದ ನನ್ನದೇ ತಪ್ಪು!
ಇನ್ನು ಈ ಮಾತುಕತೆ ಹೇಗೆ ಎರಡು ಅರ್ಥವನ್ನು ಪಡೆಯಿತು ಅನ್ನುವುದು ನೋಡುವುದಾದರೆ...,
ನನ್ನ ಮಾತುಗಳು ಪೂರ್ತಿಯಾಗಿ ಆತನಬಗೆಗೆ ನನಗೆ ಗೊತ್ತಿರುವ ಮಾಹಿತಿಗೆ ಅನುಸಾರವಾಗಿ ಹೊರತು ಅಮ್ಮನನ್ನು ಆಡಿಕೊಳ್ಳುವಂತೆ ಅಲ್ಲ!
ನಿಮಗೆ ವಯಸ್ಸಾಯಿತು, ಇಲ್ಲದಿದ್ದರೆ ಆತ ಬಿಡುತ್ತಿದ್ದನಾ? ಖಂಡಿತಾ ಆಸಕ್ತಿ ವಹಿಸುತ್ತಿದ್ದ! ಅದು ನಿಮ್ಮ ವಿಷಯದಲ್ಲಾದರೂ, ಯಾವ ಹೆಣ್ಣಿನ ವಿಷಯದಲ್ಲಾದರೂ, ನನ್ನದೇ ಹೆತ್ತಮ್ಮನ ವಿಷಯಕ್ಕಾದರೂ ನಿಜ... ಯಾಕೆಂದರೆ 'ಆತ ಹಾಗೆ’ ಅನ್ನುವುದು ನನ್ನ ಟೋನ್!
ಆತನ ಬಗೆಗೆ ನನಗಿರುವ ಅರಿವು ಹಾಗಿದೆ! ನೋಡಿದ್ದೇನೆ- ಯೌವ್ವನವಿರುವ ಹೆಣ್ಣಿನೊಂದಿಗೆ ಆತ ಹೇಗೆ ಅಂತ! ಆದ್ದರಿಂದ ಹಾಗೆ ಹೇಳಿದೆ!
ಆದರೆ ಅಮ್ಮ ಅದನ್ನು ತೆಗೆದುಕೊಂಡಿದ್ದು...,
“ನಿಮಗೆ ವಯಸ್ಸಾಯಿತು ಇನ್ನು ನಿಮ್ಮನ್ನು ಯಾರು ಮೂಸುತ್ತಾರೆ?!?” ಅನ್ನುವ ಟೋನ್‌ನಲ್ಲಿ.
ಅಂದರೆ ವಯಸ್ಸು ಅನ್ನುವುದು ಅವರ ಅರ್ಹತೆ ಅಥವಾ ಕೊರತೆಯ ಮಾನದಂಡ ಅನ್ನುವಂತೆ!!
ಬುದ್ಧಿ ಉದಿಸಿದಾಗಿನಿಂದ ಹೆಣ್ಣನ್ನು ಯಾವ ರೀತಿ ನೋಡಬಾರದು ಅನ್ನುವುದಕ್ಕೆ ನನ್ನ ಸುತ್ತಮುತ್ತಲಿನ ಗಂಡಸರೇ ನನಗೆ ಪಾಠ! ಗಂಡಸರು ಯಾವ ವಯಸ್ಸಿನ ಹೆಣ್ಣನ್ನು ಯಾವ ದೃಷ್ಟಿಯಲ್ಲಿ ನೋಡುತ್ತಾರೆ ಅನ್ನುವ ಅರಿವು ನನಗಿದೆ! ಆ ಅರಿವು ಇರುವುದರಿಂದಲೇ..., ಯಾವುದೇ ಹೆಣ್ಣಾದರೂ ಆ ಗಂಡಸರಿಂದ ಅನುಭವಿಸುವ ಹಿಂಸೆಯನ್ನು, ಅನ್‌ಕಂಫರ್ಟ್ ಅನ್ನು ನನ್ನಿಂದ ಅನುಭವಿಸಬಾರದು ಅನ್ನುವ ತೀರ್ಮಾನಕ್ಕೆ ಬಂದವ ನಾನು!
ಆ ನಾನು..., ಅಮ್ಮನ ವಯಸ್ಸನ್ನು ಆಡಿಕೊಳ್ಳುತ್ತೇನೆಯೇ? ವ್ಯಂಗ್ಯವಾಡುತ್ತೇನೆಯೇ?
ವಯಸ್ಸಿನಲ್ಲಿ ಏನಿದೆ?
ಇಲ್ಲಿ ಹಾಗೆ ಹೇಳಲು "ಆತನ ಬಗೆಗಿನ ನನ್ನ ದೃಷ್ಟಿಕೋನ" ಕಾರಣವೇ ಹೊರತು ಅಮ್ಮನ ವಯಸ್ಸನ್ನು ವ್ಯಂಗ್ಯವಾಡುವುದಲ್ಲ!
ನನಗೂ ವಯಸ್ಸಾಗಿದೆ!
ಮುಂಚೆಯೂ ಒಮ್ಮೆ ತಮಾಷೆಯಂತೆ ನಿಮಗೆ ವಯಸ್ಸಾಯಿತು ಎಂದು ಹೇಳಿದ್ದಿದೆ- ಅದು ಕೂಡ ನಿಮ್ಮ ಸೇಫ್ಟಿ ವಯಸ್ಸನ್ನೂ ಅವಲಂಬಿಸಿದೆ ಅನ್ನುವ ಕಾರಣಕ್ಕೂ, ಗಂಡಸರಬಗೆಗಿನ ನನ್ನ ಅಭಿಪ್ರಾಯದ ಕಾರಣಕ್ಕೂ ಹೊರತು ಅವರ ವಯಸ್ಸನ್ನು ಆಡಿ ಕೊಳ್ಳುವುದಕ್ಕಲ್ಲ!
ಆದರೆ ಅವರೊಂದಿಗಿನ ನನ್ನ ವರ್ತನೆ- ಮಾತನಾಡಿದ ರೀತಿ ಅವರಿಗೆ ನೋವು ನೀಡಿದೆ ಅನ್ನುವುದು ನಿಜ!
ಯಾಕೆಂದರೆ ಆ ಮಾತಿಗೆ ಅವರ ರೀತಿಯ ಅರ್ಥವೂ ಇದೆ! ಅದು ನನಗೆ ಅರಿವಿರಬೇಕಿತ್ತು!
ಆದ್ದರಿಂದ ಅವರನ್ನು ನಾನು ತಪ್ಪು ಹೇಳುವುದಿಲ್ಲ.
ನಿನ್ನೆಯ ನನ್ನ ಮಾತಿನ ಧಾಟಿಯೂ ಆಧಿಕಾರಿಕವಾಗಿತ್ತು- ನಾನು ಹೇಳಿದ್ದೇ ಸರಿ! ನೀವು ಒಪ್ಪಲೇ ಬೇಕು- ಅನ್ನುವಂತೆ! ಅದೂ ತಪ್ಪು!
ಅವರು ನನ್ನ ಅಮ್ಮ... ಅವರಿಗೆ ನನ್ನಿಂದ ನೋವಾಗಿದೆ... ಆ ನೋವು ಕೋಪವಾಗಿ..., ಬೆಂಕಿಯಾಗಿ...,
“ನನಗೇ ಹೇಳ್ತೀಯ?” ಅನ್ನುವ ಕೋಪದಿಂದ ಬೈಯ್ಯುತ್ತಿರುವಾಗ..., ವಿವರಣೆ ಕೊಡಲು ಹೋದರೆ ಬಲಿ ಹಾಕಿಬಿಡುತ್ತಾರೆ ಅನ್ನುವ ಅರಿವಿರುವುದರಿಂದಲೇ..., ಕ್ಷಮೆಕೇಳಿ ಮೌನವಾದೆ!
ಅದು ಕ್ಷಮೆಗೆ ಅರ್ಹವಲ್ಲದಷ್ಟು ದೊಡ್ಡ ತಪ್ಪೇನೂ ಅಲ್ಲ!!
ಅಮ್ಮ ಅಲ್ಲವಾ? ಕ್ಷಮಿಸದೆ ಎಲ್ಲಿಗೆ ಹೋಗುತ್ತಾರೆ?
ಸದ್ಯಕ್ಕೆ ಬಚಾವಾದರೆ ಸಾಕು!
ಇಲ್ಲೇ..., 'ಏನು ಬೇಕಿದ್ದರೂ' ಅನ್ನುವುದು ಕೂಡ ಅಪಾರ್ಥವಾಗಿದ್ದು!
ಅಮ್ಮನ ಬಗ್ಗೆಯೇ ಅಮ್ಮನೊಂದಿಗೆ ಏನುಬೇಕಿದ್ದರೂ ಆಡಿಕೊಳ್ಳುವಂತೆ ಅರ್ಥ ತಿರುಗಿದ್ದು!
ನನ್ನ ಉದ್ದೇಶ ಉಳಿದ ಪ್ರಪಂಚಕ್ಕೆ ಸಂಬಂಧಿಸಿದಂತೆ ಅಮ್ಮನೊಂದಿಗೆ ಏನು ಬೇಕಿದ್ದರೂ ಮಾತನಾಡಬಹುದು ಎಂದು!
ಅಮ್ಮನನ್ನೇ ನಿಂದಿಸುವಂತೆ ಅಲ್ಲ!
ಆದರೆ ನನ್ನ ಮಾತುಗಳು ಅವರನ್ನೇ ಉದ್ದೇಶಿಸಿ..., ಅವರ ವಯಸ್ಸನ್ನು, ಅವರ ಅರಿವನ್ನು ಆಡಿಕೊಳ್ಳುವಂತೆ ಇತ್ತು ಅನ್ನುವಲ್ಲಿ ನನ್ನ ತಪ್ಪಿದೆ!
ಕ್ಷಮೆ ಕೇಳಲೇ ಬೇಕಾದ ತಪ್ಪು!
'ನ-ನ್ನಿಂ-ದ' ಅವರು ಆ ರೀತಿಯ ಮಾತುಗಳನ್ನು ನಿರೀಕ್ಷಿಸಿರಲಾರರಾದ್ದರಿಂದ ಆ ಗುಂಗಿನಿಂದ ಹೊರಬರುವವರೆಗೆ ಕಾದು..., ಅಮ್ಮಾ..., ಅಂದರೆ ಕರಗದ ಹೃದಯವಾ ಅವರದ್ದು?!
ಸದ್ಯಕ್ಕೆ ಇದಕ್ಕೆ ಪರಿಹಾರ ಕಾಲ! ಅವರು ಆ ಮೂಡ್‌ನಿಂದ ಹೊರ ಬರುವವರೆಗೆ ಕಾಯುವುದಷ್ಟೇ ನಾನು ಮಾಡಬಹುದಾದದ್ದು!
ಆದರೆ..., ಆ-ದ-ರೆ- ಯಾರು ಏನೇ ಹೇಳಿದರೂ..., ಹೆಣ್ಣಿನ ಗೌರವವನ್ನು ನಿರ್ಧರಿಸುವಲ್ಲಿ ವಯಸ್ಸಿನ ಪಾತ್ರವೂ ಇದೆ ಅನ್ನುವುದು ನಿಜ- ಹಾಗೆಯೇ ಗಂಡು ಹೆಣ್ಣಿನೊಂದಿಗೆ ಯಾವ ರೀತಿ ನಡೆದುಕೊಳ್ಳುತ್ತಾನೆ ಅನ್ನುವಲ್ಲಿಯೂ!!
*
ನಂಬಿಕೆ:-
“ಮುಂದಿನ ವಾರದಿಂದ ಒಂದು ತಿಂಗಳು ಲೊಕೇಷನ್ ಹಂಟಿಂಗ್!” ಎಂದೆ.
ಸ್ವತಂತ್ರ ನಿರ್ದೇಶನದ ನಮ್ಮ ಎರಡನೆಯ ಸಿನೆಮಾ ತೀರ್ಮಾನವಾಗಿತ್ತು.
“ಮಧ್ಯೆ ಒಂದ್‌ದಿನ ನಾನೂ ಬರ್ತೀನೋ!” ಎಂದಳು ನನ್ನ ಬಂಗಾರಿ.
ಅವಳನ್ನು ನೋಡಿ ನಕ್ಕೆ.
“ಆಹಾ! ಹುಡುಗಿಗೆ ಮೂಡ್ ಬಂತೋ...?!” ಎಂದೆ.
ಅವಳೇನೂ ಮಾತನಾಡಲಿಲ್ಲ. ಒಂದು ಕ್ಷಣದಲ್ಲಿ ಅವಳ ಕಣ್ಣಿನಲ್ಲಿ ಹಾದು ಹೋದ ಭಾವ..., ನನಗೆ ತಾಕಿತು!!
ಅವಳ ಹತ್ತಿರಕ್ಕೆ ಹೋಗಿ ಅವಳನ್ನು ಸೆಳೆದು ಎದೆಗೆ ಒತ್ತಿಕೊಂಡು ಹಣೆಗೊಂದು ಮುತ್ತು ಕೊಟ್ಟೆ.
ಸಣ್ಣ ಕಾಂಪ್ಲೆಕ್ಸ್ ಇದೆಯಾ ಅವಳೊಳಗೆ- ಅನ್ನಿಸಿತು! ಕಾಂಪ್ಲೆಕ್ಸ್ ಇದ್ದರೆ ನನಗೆ ಇರಬೇಕು! ಅವಳಿಗೆ ಯಾಕೆ- ಅನ್ನಿಸಿದರೂ..., ಅವಳು ಅಲಾ? ಹೆಣ್ಣು ಯಾವತ್ತಿಗೂ ಹೆಣ್ಣು- ಅನ್ನಿಸಿತು! ಇದೂ ಕೂಡ ಹೆಣ್ಣನ್ನು ಆಡಿಕೊಳ್ಳುವಂತೆ ಹೇಳಿದ ಮಾತಲ್ಲ! ಗಂಡನ ಹೊರತು ಬೇರೊಬ್ಬನೊಂದಿಗೆ ಸೇರುವಾಗ ಸಣ್ಣ ಕಾಂಪ್ಲೆಕ್ಸ್ ಇದ್ದೇ ಇರುತ್ತೇನೋ... ಅಂತ! ಅದು ಹೆಣ್ಣಿನ ಸಹಜ ಗುಣವೇನೋ ಅಂತ!
ವಿಷಯ ಇಷ್ಟೇ...,
ಮದುವೆಯಾದ ಹೊಸದರಲ್ಲಿಯೇ ಹೇಳಿದ್ದೆ...,
“ನೋಡು ಪುಟ್ಟ...! (ಅವಳು ನನಗಿಂತ ಹಿರಿಯಳಾದರೂ ಕೆಲವೊಮ್ಮೆ ನಾನು ಕರೆಯುವುದು ಹೀಗೆಯೇ...! ಕೆಲವೊಮ್ಮೆ ತೀರಾ ಮುಗ್ಧಳಂತೆ ಅನ್ನಿಸುತ್ತಾಳೆ! ಹಾಗೆಯೇ ಕೆಲವೊಮ್ಮೆ ಅಸಾಧ್ಯ ಪ್ರೌಢತೆಯನ್ನೂ ತೋರ್ಪಡಿಸುತ್ತಾಳೆ!) ನಾನೇನೋ ನನಗೆ ಗೊತ್ತು! ಹಾಗೆಯೇ ನೀನೇನು ಅನ್ನುವುದೂ ಗೊತ್ತು! ಸೆಕ್ಸ್‌ನ ಅಗತ್ಯವೂ ಗೊತ್ತು! ಆ ವಿಷಯದಲ್ಲಿ ಅತೃಪ್ತಿ ಉಳಿದರೆ ಏನಾಗುತ್ತದೋ ಅದೂ ಗೊತ್ತು! ಆದ್ದರಿಂದ..., ನಿನಗೆ ಯಾವುದೇ ಮುಜುಗರ ಬೇಡ! ಆ ಆಸೆಯನ್ನು ಈಡೇರಿಸಲು ಏನು ಬೇಕೋ ಅದನ್ನು ಮಾಡು! ಮನಸಾರೆ ಹೇಳುತ್ತಿದ್ದೇನೆ..., ಒಳಗೆ ಯಾವುದೇ ದುಗುಡವಿಲ್ಲದೆ ಹೇಳುತ್ತಿದ್ದೇನೆ..., ನೀನು ಆ ವಿಷಯದಲ್ಲಿ ತೃಪ್ತಳಾದರೆ ನನಗೂ ಖುಷಿಯೇ...!” ಎಂದು.
ಅವಳು ನನ್ನ ಮುಖವನ್ನೇ ನೋಡಿದಳು.
“ನಿಜಕ್ಕೂ ನಿನಗೆ ಬೇಸರವಿಲ್ಲವೇನೋ?” ಎಂದು ಕೇಳಿದಳು.
“ನಿನಗೆ ಬೇಕು ಅನ್ನಿಸಿಯೂ..., ಅದನ್ನು ತೃಪ್ತಿಪಡಿಸಲು ದಾರಿಯಿದ್ದೂ..., ನೀನು ಮುಂದುವರೆಯದೇ ಇದ್ದರೆ ಖಂಡಿತಾ ಬೇಸರವಾಗುತ್ತದೆ!” ಎಂದೆ.
ಅಂದಿನಿಂದ ನಮ್ಮ ಮಧ್ಯೆ ಒಂದು ಡೀಲ್ ಏರ್ಪಟ್ಟಿತು. ನಾನು ಮನೆಯಿಂದ ಹೊರಗಿರಬೇಕಾಗಿ ಬಂದರೆ..., ಅವಳೂ ನನ್ನನ್ನು ನೋಡುವ ನೆಪದಲ್ಲಿ ಹೊರಬೀಳುವುದು!
ಇಲ್ಲಿ ಸರಿ ತಪ್ಪುಗಳಿಲ್ಲ! ಇಮೋಷನಲ್ ಬ್ಲಾಕ್‌ಮೇಲ್‌ಗಳಿಲ್ಲ!
ನಾನು ನೆರವೇರಿಸಲಾಗದ..., ಆದರೆ ಮನುಷ್ಯನಿಗೆ ತೀರಾ ಅತ್ಯಗತ್ಯವಾದ ವಿಷಯಗಳನ್ನು ಬೇರೆ ರೀತಿಯಲ್ಲಿ ನೆರವೇರಿಸಬಹುದಾದರೆ..., ಯಾರಿಗೇನು ನಷ್ಟ?
ಅವಳೆಂದರೆ ನನಗೆ ಪ್ರಾಣ. ಅವಳ ವ್ಯಕ್ತಿತ್ವ ಯಾವತ್ತಿಗೂ ನನಗೆ ಆದರ್ಶ!
ಮುಗ್ಧ- ಮುಕ್ತ ಮನಸ್ಸಿನ ಅವಳು ನನಗೊಂದು ಪ್ರತ್ಯೇಕ ಪ್ರಪಂಚ!
ನನ್ನನ್ನೊಮ್ಮೆ ಬಲವಾಗಿ ಅಪ್ಪಿ ಹಿಡಿದು...,
“ನೀನೇ ಸಿಕ್ಕಿದ್ದು ನನ್ನ ಬದುಕಿನ ಪುಣ್ಯವೋ...!” ಎಂದಳು.
ತಲೆಯಮೇಲೆ ತುಟಿಯೊತ್ತಿ...,
“ಸ್ಕ್ರಿಪ್ಟ್ ಮುಗಿಸಲು ಮರೆಯಬೇಡ ದೊರೆಸಾನಿ!” ಎಂದೆ.
ಈ ಹದಿನೈದು ವರ್ಷದಲ್ಲಿ ನಮ್ಮ ಅರಿವಿಗೆ ಬಂದ ಮತ್ತೊಂದು ವಿಷಯವೆಂದರೆ...,
ಪ್ರಕೃತಿಯ ವೈಚಿತ್ರ್ಯವೇ ಹೀಗಲ್ಲವೇ?
ಸೆಕ್ಸ್ ಮಾಡುವಾಗ ಹತ್ತು ಸೆಕೆಂಡ್ ಹಿಡಿದಿಟ್ಟುಕೊಳ್ಳಲಾಗದ ನನಗೆ ಮಕ್ಕಳನ್ನು ಹುಟ್ಟಿಸುವ ಶಕ್ತಿಯಿದೆ! ಆದರೆ ಸೆಕ್ಸ್‌ನಲ್ಲಿ ಅಷ್ಟು ಸುಲಭಕ್ಕೆ ತೃಪ್ತಳಾಗದ ಅವಳಿಗೆ ಮಕ್ಕಳನ್ನು ಹೆರುವ ಸಾಮರ್ಥ್ಯವಿಲ್ಲ!
ಈಗ ಅವಳಿಗೆ ನಲವತ್ತಾರು ವರ್ಷ ವಯಸ್ಸು! ನನಗೆ ನಲವತ್ತಮೂರು! ದಿನಗಳು- ವರ್ಷಗಳು ಕಳೆದಂತೆ ಅವಳೇ ನನಗೆ ಮಗಳಾಗುತ್ತಿದ್ದಾಳೆ! ಅವಳಿಗೆ ನಾನು ಮಗ!
*
ಮುಕ್ತಾಯ:-
ಎಷ್ಟೇ ಹೇಳಬೇಡವೆಂದರೂ..., ಸೇರಿ ಬಂದ ನಂತರ, ತಾನು ಯಾರೊಂದಿಗೆ ಸೇರಿದೆ ಎಂದು ಹೇಳದೆ ಅವಳಿಗೆ ಸಮಾಧಾನವೇ ಇಲ್ಲ!
ಡೇಟಿಂಗ್ ಆಪ್ ಬಳಸಿ..., ಕೊನೆಯ ಸಾರಿ ಸೇರಿದ ವ್ಯಕ್ತಿಯ ಹೆಸರು ಕೇಳಿ ನನಗೆ ನಗಬೇಕೋ ಅಳಬೇಕೋ ಅರ್ಥವಾಗಲಿಲ್ಲ!
'ಆ ಅಮ್ಮ'ನೊಂದಿಗೆ ನಾನು ಯಾರಬಗ್ಗೆ ಜಗಳ ಮಾಡಿದ್ದೆನೋ ಆ ವ್ಯಕ್ತಿ!
ಈಗ ಯೋಚನೆ ಮಾಡಿದರೆ..., ಆತ ಯಾವ ಕಾರಣಕ್ಕೆ ಕೀಳು ಅನ್ನಿಸಿದನೋ..., ಆ 'ವಿಷಯ' ಅಷ್ಟು ಕೀಳೇ- ಅನ್ನಿಸಿತು!?
ಆದರೆ..., ಆತ ಹೆಂಗಸರನ್ನು ಪರಿಚಯವಾಗುವುದೇ, ಸೆಳೆಯುವುದೇ, ಹೆಂಗಸರೊಂದಿಗೆ ಬೆರೆಯುವುದೇ 'ಅದಕ್ಕೆ' ಅನ್ನುವಲ್ಲಿ- ಉತ್ತರವಿದೆ!
ಆತನ ವಿಷಯದಲ್ಲಿ..., ಹೆಂಗಸರೊಂದಿಗೆ ಸೆಕ್ಸ್ ನಡೆಯದೇ ಇದ್ದರೆ ಅದಕ್ಕೆ ಕಾರಣ ಒಂದೋ..., ಹೆಣ್ಣಿಗೆ ವಯಸ್ಸಾಗಿದೆ! ಇಲ್ಲಾ..., ಆ ಹೆಣ್ಣು ಆ ವಿಷಯಕ್ಕೆ ಅಷ್ಟು ಸುಲಭದಲ್ಲಿ ದಕ್ಕುವವಳಲ್ಲ!
ಉಳಿದಂತೆ..., ಎಷ್ಟೋ ಹೆಂಗಸರು ಆತನೊಂದಿಗೆ ಒಪ್ಪಿಗೆಯೊಂದಿಗೆ, ನಂಬಿಕೆಯೊಂದಿಗೆ ಸೇರಿ- ದೂರವಾಗಿದ್ದಾರೆ!
ಎಲ್ಲಾ ಹೆಂಗಸರೂ ನನ್ನ ಬಂಗಾರಿಯಂತೆಯೇ ಆದರೆ ಓಕೆ..., ಆದರೆ ಆತನ ವಿಷಯದಲ್ಲಿ ಎಷ್ಟೋ ಜನ ಡಿಪ್ರೆಶನ್‌ಗೆ ಹೋಗಿದ್ದಾರೆ ಅನ್ನುವ ಅರಿವಿರುವುದರಿಂದ..., ಆತನನ್ನು ಒಪ್ಪಲು ನಾನು ತಯಾರಿಲ್ಲ!
ಆದರೆ ಇವಳ ವಿಷಯದಲ್ಲಿ..., ಇಬ್ಬರ ಉದ್ದೇಶವೂ ಒಂದೇ ಆಗಿ- ಅದು ನಡೆದಿರುವುದರಿಂದ- ಆತ ತಪ್ಪಲ್ಲ!
ತಪ್ಪು ಸರಿಗಳ ಕೂದಲೆಳೆ ಅಂತರದ ಗೆರೆಯೇ...........................!
Comments
Post a Comment