ಬದುಕು/ಜೀವನವೆಂದರೆ....

ಮಲಗಿದ್ದೆ. ಎದ್ದೆ. ಹೊರಟೆ. ಮತ್ತೆ ಮರಳಲಾಗದ ದಾರಿ. ಮಹಾನದಿ ಕಾಣಿಸಿತು. ಇಳಿದೆ. ಈಜಿದೆ. ಮತ್ತೊಂದು ದಡ. ಮುಂದುವರೆದೆ. ಮರುಭೂಮಿ. ದಾಟಿದೆ. ಮತ್ತೆ ಮುಂದಕ್ಕೆ. ಪರ್ವತ. ಹತ್ತಿದೆ. ಇಳಿದೆ. ಗಾಢಾಂಧಕಾರ. ವಿಧಿಯಿಲ್ಲ! ಅಥವಾ..., ಇದೇ ವಿಧಿ! ಹೆಜ್ಜೆ ಹಾಕಿದೆ. ತಡಕಾಡುತ್ತಾ ಮುಂದಕ್ಕೆ. ದೂರದಲ್ಲಿ ಬೆಳಕು. ಅದೇ ಗಮ್ಯ! ಚಲನೆಯೇ ಜೀವನ! ಬದುಕಿನಲ್ಲಿ..., ಅಂದುಕೊಂಡದ್ದೆಲ್ಲಾ ನಡೆಯುತ್ತದೋ ಇಲ್ಲವೋ..., ಜೀವನ ಮಾತ್ರ..., ಅಂದುಕೊಂಡಂತೆಯೇ ನಡೆಯಬೇಕು! ನಡೆಯದಿದ್ದರೆ..., ಆ ಹಾದಿಯಲ್ಲಿಯೇ ಮುಗಿಯಬೇಕು! ಸೋಲು- ಗೆಲುವು, ಸುಖ- ದುಃಖ, ಸಿಕ್ಕಿದ್ದು- ಕಳೆದುಕೊಂಡಿದ್ದು, ಸಿಕ್ಕವರು- ಉಳಿದವರು- ಬಿಟ್ಟು ಹೋದವರು ಅನ್ನುವ ಲೆಕ್ಕಾಚಾರವನ್ನೆಲ್ಲಾ ಬಿಟ್ಟು..., ಚಲಿಸುತ್ತಲೇ ಇರಬೇಕು- ಮುಗಿಯದ ಕಾಲದೊಂದಿಗೆ- ಮುಗಿಯುವ ಬದುಕು ಮತ್ತೆ ಮಲಗುವವರೆಗೆ!!

Comments

  1. ಏಕಾತನ ಜೀವನ ಹಾಗೆ ಇರೋದು ಸರ್..

    ReplyDelete

Post a Comment

Popular posts from this blog

ಇನ್ನೂರು!

ಹಾರರ್ ಥೀಂ

ದಾರಿಯಲ್ಲಿ ಸಿಕ್ಕವಳು!