ಅನಿರುದ್ಧ ಬಿಂಬ!
ಅನಿರುದ್ಧ ಬಿಂಬ ! * ನಮಸ್ತೇ… , ನಾನು ಅನಿರುದ್ಧ - ಬಿಂಬದಿಂದ ಹೊರಬಂದ ರೂಪವಿಲ್ಲದ ಅನಿರುದ್ಧ ! ನಾವೊಂದು ಕಲ್ಪನೆಯ ಲೋಕಕ್ಕೆ ಹೋಗಿಬರೋಣ . ಈ ಕಾಲ್ಪನಿಕ ಕಥೆಯನ್ನು ಕೇಳಿ ಕೊನೆಗೆ - ಇದರಲ್ಲಿ ಯಾವುದು ಕಲ್ಪನೆ , ಯಾವುದು ವಾಸ್ತವ , ಯಾವುದು ಕನಸು , ಯಾವುದು ಭ್ರಮೆ , ಕಥೆಗೆ ಪ್ರೇರಣೆಯೇನು ಎಂದೆಲ್ಲಾ ಕೇಳಬಾರದು ! ಮತ್ತೊಮ್ಮೆ ಹೇಳುತ್ತಿದ್ದೇನೆ… , ಈ ಬ್ರಹ್ಮಾಂಡದಲ್ಲಿ ಏನೂ ಸಾಧ್ಯ ಅನ್ನುವ ಅಡಿಪಾಯದಲ್ಲಿ ಈ ಕಥೆಯನ್ನು ಹೇಳುತ್ತಿದ್ದೇನೆ . ಈ ಕಥೆ ನಡೆಯುವುದು ಎರಡು ವ್ಯತ್ಯಸ್ತವಾದ ಪ್ರಪಂಚದಲ್ಲಿ ! ಒಂದು… , ನಿದ್ದೆ ಅನ್ನುವ ಮಾಯಾ ಪ್ರಪಂಚದಲ್ಲಿ ! ಇನ್ನೊಂದು… , ನಿದ್ದೆಯ ಹೊರತಾದ ಮಾಯಾ ಪ್ರಪಂಚದಲ್ಲಿ ! ಆದ್ದರಿಂದ ಇದು ಪರಿಪೂರ್ಣವಾಗಿ ಕಾಲ್ಪನಿಕ ಕಥೆ ! * ಮೊನ್ನೆ ನಾನೊಂದು ಊರಿಗೆ ಹೋಗಿದ್ದೆ . ಊರಾ ಅಂದರೆ ಊರಲ್ಲ ಊರಲ್ಲವಾ ಅಂದರೆ ಊರು ! ಅದೊಂದು ಕಾಡಿನಂತಾ ಪ್ರದೇಶ - ಜನಸಂಚಾರವೇ ಇಲ್ಲದ ಪ್ರದೇಶ . ಅಲ್ಲೊಂದು ದೇವಸ್ಥಾನ . ಆ ದೇವಸ್ಥಾನದಬಗ್ಗೆ ಹಲವರು ಹಲವು ಕಥೆಗಳನ್ನು ಹೇಳಿದ್ದರು . ನನಗೋ ಅದರಕಡೆ ಗಮನವೇ ಇಲ್ಲ . ನನ್ನ ಗಮನವೆಲ್ಲಾ ಆ ದೇವಸ್ಥಾನಕ್ಕೆ ನೆರಳಿನಂತೆ ನಿಂತಿದ್ದ ಆ ದೊಡ್ಡ ಆಲದ ಮರದ ಕಡೆಗೆ . ಎಷ್ಟು ವರ್ಷವಿರಬೇಕು ಆ ಮರಕ್ಕೆ ಅನ್ನಿಸಿದರೂ ಅದಕ್ಕಿಂತ ಕುತೂಹಲ .., ಈ ಮರದ ಇರವಿನ ಅರಿವು ನನಗಿತ್ತಲ್ಲಾ - ಅನ್ನುವುದು ! ಅದರ ಸಮೀಪಕ್ಕೆ ಹೋಗುತ್ತಿದ್ದಂತೆ ಮನಸ್ಸಿನೊಳಗೆ ಅರಿ...