ಧೈರ್ಯ(ದೆವ್ವ!)ಪರೀಕ್ಷೆ!
ಧೈರ್ಯ ( ದೆವ್ವ !) ಪರೀಕ್ಷೆ ! * ಬೆಂಗಳೂರಿನಿಂದ ಹೊರಟಿದ್ದು ತಡವಾಗಿತ್ತು ! ಮೈಸೂರು ಬಸ್‌ಸ್ಟ್ಯಾಂಡ್ ತಲುಪಿದಾಗ ರಾತ್ರಿ ಹನ್ನೊಂದೂವರೆ ! ಬಸ್‌ಸ್ಟ್ಯಾಂಡ್‌ನಿಂದ ಹೊರಬಂದಾಗ ಸಿಟಿ ಬಸ್ - ನಂಬರ್ 164 ಕಾಣಿಸಿತು ! ಗೌಸಿಯಾ ನಗರ್‌ವರೆಗೆ ಹೋಗಬಹುದು ! ಮೈಸೂರು ತಲುಪುವ ಸಮಯವನ್ನು ಲೆಕ್ಕ ಹಾಕಿದಾಗಲೇ ಅಂದುಕೊಂಡಿದ್ದೆ… , ಇವತ್ತು ಮನೆಗೆ ಆ ಸ್ಮಶಾನದ ಕಡೆಯಿಂದಲೇ ಹೋಗಬೇಕೆಂದು ! ಇಪ್ಪತ್ತು ವರ್ಷಮುಂಚೆ ಧೈರ್ಯಪರೀಕ್ಷೆ ನಡೆಸಿದ ಸ್ಮಶಾನ ! ಕೆಲವೊಂದು ನೆನಪುಗಳು ಹಾಗೆಯೇ… , ಅಷ್ಟು ಸುಲಭದಲ್ಲಿ ಮಾಸುವುದಿಲ್ಲ ! ಬಸ್‌ಸ್ಟ್ಯಾಂಡ್‌ನಿಂದಲೇ ನಡೆದು ಹೋಗಬೇಕಾಗಬಹುದು ಅಂದುಕೊಂಡರೂ ಈ ಬಸ್ ಕಾಣಿಸಿದ್ದು ಖುಷಿಯಾಯಿತು - ಅರ್ಧ ದೂರದ ನಡಿಗೆ ತಪ್ಪಿತು ! ಮುಂದಕ್ಕೆ ಚಲಿಸುತ್ತಿದ್ದ ಬಸ್ಸನ್ನು ಓಡಿಬಂದು ಹತ್ತಿ ಕುಳಿತೆ . ಪಕ್ಕದಲ್ಲಿ ಹದಿನಾರು - ಹದಿನೇಳು ವರ್ಷದ ಹುಡುಗನೊಬ್ಬ ಬಿಳುಚಿಕೊಂಡವನಂತೆ ಕುಳಿತಿದ್ದ . ಒಬ್ಬನೇ ಹೋಗುತ್ತಿರುವುದರ ಹೆದರಿಕೆಯಿರಬೇಕು ! ಹೆದರಿಕೆ ! ಆ ವಯಸ್ಸಿನಲ್ಲಿಯೇ ನಾನು ನನ್ನ ಧೈರ್ಯಪರೀಕ್ಷೆ ಮಾಡಲು ಮಧ್ಯ ರಾತ್ರಿಯಲ್ಲಿ ಸ್ಮಶಾನದ ಮೂಲಕ ಹಾದು ಹೋಗಿದ್ದು ! ನನ್ನ ಮುಗುಳುನಗು ಅವನು ಸ್ವಲ್ಪ ರಿಲಾಕ್ಸ್ ಆಗುವಂತೆ ಮಾಡಿತು . ಒಂದೆರಡು ಕ್ಷಣ ನನ್ನ ಮುಖವನ್ನೇ ನೋಡಿದ ಅವನ ಮುಖದಲ್ಲಿ ಆಶ್ಚರ್ಯ ! “ ನೀವು ದೇವೀಪುತ್ರನಲ್ಲವೇ ? ಕಥೆಗಾರ ? ನಮ್ಮಮ್ಮ ಫೇಸ್‌ಬುಕ್‌ನಲ್ಲಿ ನಿಮ್ಮ ಫ್ರೆಂಡ...