ಆಕ್ಷೇಪಣಾ ಪತ್ರ!
ಹೇಗಿದ್ದೀಯೆ? ಬ್ಯುಸಿ- ಅಲಾ? ಗೊತ್ತು…, ದಿನಕ್ಕೆ ಇಪ್ಪತ್ತನಾಲ್ಕು ಗಂಟೆ ಸಮಯ ಸಾಲದ ಪಾಪದ ಹೆಣ್ಣು ನೀನು! ವಿಷಯ ನ್ತ ಗೊತ್ತ? ನೀ ಎಷ್ಟೇ ಬ್ಯುಸಿಯಾಗಿದ್ರೂ, ಫ್ರೀಯಾಗಿದ್ರೂ, ನೆನಪಿಸಿಕೊಂಡರೂ- ಕೊಳ್ಳದಿದ್ದರೂ ಐ ಲವ್‌ಯು! ಬದುಕು ಎಷ್ಟು ಚಂದ! ಪಾಪ ನನ್ನ ಅಮ್ಮ…, ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆದಿದ್ದರೆ ನಾನಿಂದು ಎಲ್ಲಿರುತ್ತಿದ್ದೆನೋ ಏನೋ! ಅದು ಹಾಗೆಯೇ ನೋಡು…, ಹಲ್ಲಿದ್ದವನಿಗೆ ಕಡಲೆಯಿಲ್ಲ ಕಡಲೆಯಿದ್ದವನಿಗೆ ಹಲ್ಲಿಲ್ಲ ಅನ್ನುವಂತೆ ನನ್ನ ಜೀವನ. ಅತಿ ಸಮರ್ಥ ನಾನು! ನದಿಯ ಹರಿವಿಗೆ ನನ್ನನ್ನು ಒಡ್ಡಿಕೊಂಡಿದ್ದರೂ ಸಾಕಿತ್ತು- ಕುಟುಂಬದ, ಗೆಳೆಯರ, “ಇತರರ" ದೃಷ್ಟಿಕೋನದ ಗೆಲುವನ್ನು ಅತಿ ಸುಲಭದಲ್ಲಿ ಸಾಧಿಸುತ್ತಿದ್ದೆ. ಆದರೇನು ಮಾಡುವುದು…? ಇದು- ನಾನು ಅಲಾ? ನನಗೆ ಸಹಜವಾಗಿ ಒಲಿದಿದ್ದ ಸಾಮರ್ಥ್ಯಕ್ಕೆ, ಅವಕಾಶಗಳಿಗೆ ವಿರುದ್ಧವಾಗಿ…, ಪ್ರವಾಹಕ್ಕೆ ಇದಿರಾಗಿಯೇ ಈಜಬೇಕೆಂದು ತೀರ್ಮಾನಿಸಿದವ! ತೀರ್ಮಾನ ನನ್ನದು! ಪ್ರವಾಹವೆಂದರೇನೆಂಬ ಅರಿವೇ ಇಲ್ಲದೆ- ಅದಕ್ಕೆ ಇದಿರಾಗಿ! ಅದೆಷ್ಟುಸಾರಿ ಶುರುಮಾಡಿದ ಸ್ಥಳವನ್ನೇ ಸೇರಿದೆ! ಇಲ್ಲದ ದಾರಿಯನ್ನು ಸೃಷ್ಟಿಸಿ ಅದೆಷ್ಟುಸಾರಿ ಗಮ್ಯದ ಹತ್ತಿರಕ್ಕೆ ತಲುಪಿದೆ! ನನಗೆ ಸಂಬಂಧವೇ ಇಲ್ಲದ ಅಡತಡೆಗಳು…, ಅನೂಹ್ಯ ತಿರುವುಗಳು…, ಪೆಟ್ಟುಗಳು! ಇದೋ…, ಪುನಃ ಅದೇ ಶುರುವಿನ ಹಂತಕ್ಕೆ ಬಂದು ನಿಂತಿದ್ದೇನೆ. ಪ್ರವಾಹದ ಸಂಪೂರ್ಣ ಅರಿವು ದೊರಕಿದ ತೃಪ್ತಿಯೇನೋ ಇದೆ…, ಆದರೆ ಆದರೆ…, ಮತ್ತೊಮ್ಮೆ ಈಜು ಶು...